ಬಿಹಾರ: ದೇಶದ ಗಮನ ಸೆಳೆದಿರುವ ಬಿಹಾರ (Bihar) ವಿಧಾನ ಸಭಾ ಚುನಾವಣಾ (bihar assembly election) ಫಲಿತಾಂಶ (Bihar Election Results 2025) ನಾಳೆ ಅಂದರೆ ನವೆಂಬರ್ 14ರಂದು ಹೊರಬೀಳಲಿದ್ದು, ಎಲ್ಲ ಕುತೂಹಲಗಳಿಗೂ ತೆರೆ ಬೀಳಲಿದೆ. ಒಟ್ಟು 243 ಕ್ಷೇತ್ರಗಳ 2,616 ಅಭ್ಯರ್ಥಿಗಳ ನಿಖರ ಭವಿಷ್ಯ ಹೊರಬೀಳಲಿದೆ. ಈ ಬಾರಿ ಶೇ. 66.91ರಷ್ಟು ಮತದಾನವಾಗಿದ್ದು, ಇದ 1951ರ ಬಳಿಕ ರಾಜ್ಯದಲ್ಲಿ ನಡೆದಿರುವ ಅತಿ ಹೆಚ್ಚಿನ ಮತದಾನ ಪ್ರಮಾಣವಾಗಿದೆ. ಈ ಬಾರಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ಶೇ. 71.6ರಷ್ಟು ಮಹಿಳೆಯರು ಮತ್ತು ಶೇ. 62.8ರಷ್ಟು ಪುರುಷರು ಮತದಾನ ಮಾಡಿದ್ದರು. ಇದರ ಆಧಾರದಲ್ಲಿ ರಾಜಕೀಯ ಪಕ್ಷಗಳು ತಮ್ಮದೇ ಗೆಲುವು ಎಂಬ ಉತ್ಸಾಹದಲ್ಲಿದ್ದಾರೆ. ಇದೆಲ್ಲವೂ ನಾಳೆ ಸಂಜೆ ವೇಳೆಗೆ ಕೊನೆಯಾಗಲಿದೆ.
ನವೆಂಬರ್ 14ರಂದು ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದ್ದು, ಫಲಿತಾಂಶಗಳ ಪ್ರಕಟವಾಗುತ್ತಿದ್ದಂತೆ ಭಾರತೀಯ ಚುನಾವಣಾ ಆಯೋಗವು ಮಾಹಿತಿ ಬಿಡುಗಡೆ ಮಾಡಲಿದೆ. ಮತದಾರರು, ಪತ್ರಕರ್ತರು ಮತ್ತು ವೀಕ್ಷಕರಿಗೆ ಫಲಿತಾಂಶದ ನೇರ ವಿವರವನ್ನು ಚುನಾವಣಾ ಆಯೋಗದ ವೆಬ್‌ಸೈಟ್ ಮತ್ತು ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ ನೀಡಲಾಗುತ್ತದೆ.
ಇದನ್ನೂ ಓದಿ: Viral News: ಬೆಂಗಳೂರಿನ ಫ್ಲೈಓವರ್ ಕಂಬದಲ್ಲಿ ವ್ಯಕ್ತಿಯ ವಾಸ್ತವ್ಯ, ಸಿಟಿ ಜನ ಶಾಕ್!
ಫಲಿತಾಂಶ ಪರಿಶೀಲನೆ ಹೇಗೆ?
ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್ https://results.eci.gov.in/ ಅಥವಾ ECI ಯ ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ ನವೆಂಬರ್ 14ರಂದು ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ. ಇದನ್ನು ಪರಿಶೀಲಿಸಲು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಬಿಹಾರದ ವಿಧಾನಸಭಾ ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆಗಳು ಎನ್ನುವ ಲಿಂಕ್ ಕ್ಲಿಕ್ ಮಾಡಿ. ಆಗ ಹೊಸ ವಿಂಡೋ ತೆರೆದುಕೊಳ್ಳುತ್ತದೆ. ಇದರಲ್ಲಿ ಕ್ಷೇತ್ರವಾರು ಪ್ರವೃತ್ತಿಗಳು ಮತ್ತು ಫಲಿತಾಂಶಗಳು ಅಥವಾ ರಾಜ್ಯವಾರು ಫಲಿತಾಂಶಗಳು ಆಯ್ಕೆಯನ್ನು ಮಾಡಿದರೆ ನೈಜ್ಯ ಸಮಯದ ಚುನಾವಣಾ ಫಲಿತಾಂಶಗಳ ವಿವರವನ್ನು ಕಾಣಬಹುದಾಗಿದೆ. ಇದರೊಂದಿಗೆ ಎಲ್ಲಾ ಕ್ಷೇತ್ರಗಳ ಡ್ರಾಪ್-ಡೌನ್ ಪಟ್ಟಿಯಲ್ಲಿ ಕ್ಷೇತ್ರವಾರು ಫಲಿತಾಂಶಗಳನ್ನು ಕೂಡ ವೀಕ್ಷಿಸಬಹುದು.
ಚುನಾವಣಾ ಫಲಿತಾಂಶ ವಿವರಗಳಲ್ಲಿ ಅಭ್ಯರ್ಥಿವಾರು ಮತ ಎಣಿಕೆಗಳು, ಗೆಲುವಿನ ಅಂತರ ಮತ್ತು ಪೂರ್ಣಗೊಂಡ ಎಣಿಕೆಯ ಸುತ್ತುಗಳು ಸೇರಿದಂತೆ ವಿವರವಾದ ಮಾಹಿತಿಯನ್ನು ಪಡೆಯಬಹುದು.
ಇದನ್ನೂ ಓದಿ: Chikkaballapur News: ಸಚಿವ ಸಮೀರ್ ಅಹ್ಮದ್ ಮತ್ತು ಸಹಚರರ ವಿರುದ್ಧ ತೀವ್ರ ಆಕ್ರೋಶ : ಪ್ರಮೋದ್ ಮುತಾಲಿಕ್ ಸಾಥ್
ಇದರೊಂದಿಗೆ ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲೂ ಫಲಿತಾಂಶಗಳನ್ನು ನೋಡಬಹುದು. ಇದಕ್ಕಾಗಿ ಇಸಿಐನ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬೇಕು. ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ಗೆ ಭೇಟಿ ನೀಡಿ ಮತ್ತು ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. ನೋಂದಣಿಗಾಗಿ ವಿವರಗಳನ್ನು ಭರ್ತಿ ಮಾಡಿದರೆ ಬಿಹಾರದ ವಿಧಾನಸಭಾ ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆ ಫಲಿತಾಂಶಗಳನ್ನು ನೋಡಬಹುದಾಗಿದೆ.