ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Controversy: ಮೊದಲು ಶರಿಯತ್ ಬಳಿಕ ಸಂವಿಧಾನ ಎಂದ ಜಾರ್ಖಂಡ್ ಸಚಿವ; ಭುಗಿಲೆದ್ದ ವಿವಾದ

ಮೊದಲು ಶರಿಯತ್ ಬಳಿಕ ಸಂವಿಧಾನ ಎಂದು ಹೇಳಿಕೆ ನೀಡಿರುವ ಜಾರ್ಖಂಡ್ ಸಚಿವ ಹಫೀಜುಲ್ ಹಸನ್ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಮಾತ್ರವಲ್ಲದೆ ತಮ್ಮ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ಇತರ ಧರ್ಮಗಳಂತೆ ಶರಿಯತ್ ಕೂಡ ಜನರ ಹೃದಯದಲ್ಲಿ ಸ್ಥಾನವನ್ನು ಪಡೆದಿದೆ. ಆದರೆ ಅದು ಎಂದಿಗೂ ಸಂವಿಧಾನವನ್ನು ಮೀರುವುದಿಲ್ಲ. ನಾವು ಸಂವಿಧಾನವನ್ನು ನಂಬುತ್ತೇವೆ, ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ.

ಮೊದಲು ಶರಿಯತ್ ಬಳಿಕ ಸಂವಿಧಾನ ಎಂದ ಜಾರ್ಖಂಡ್ ಸಚಿವ

ರಾಂಚಿ: ಮೊದಲು ಶರಿಯತ್ (Shariat) ಬಳಿಕ ಸಂವಿಧಾನ (Constitution) ಎಂದು ಹೇಳಿಕೆ ನೀಡಿರುವ ಜಾರ್ಖಂಡ್ ಸಚಿವ (Jharkhand Minister) ಹಫೀಜುಲ್ ಹಸನ್ (Hafizul Hassan) ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಮಾತ್ರವಲ್ಲದೆ ತಮ್ಮ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ಇತರ ಧರ್ಮಗಳಂತೆ ಶರಿಯತ್ ಕೂಡ ಜನರ ಹೃದಯದಲ್ಲಿ ಸ್ಥಾನವನ್ನು ಪಡೆದಿದೆ. ಆದರೆ ಅದು ಎಂದಿಗೂ ಸಂವಿಧಾನವನ್ನು ಮೀರುವುದಿಲ್ಲ. ನಾವು ಸಂವಿಧಾನವನ್ನು ನಂಬುತ್ತೇವೆ, ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ. ರಾಂಚಿಯಲ್ಲಿ (Ranchi) ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ರೀತಿ ಹೇಳಿದ್ದಾರೆ.

ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಇತರ ನಂಬಿಕೆಗಳಂತೆ ಶರಿಯತ್ ಜನರ ಹೃದಯದಲ್ಲಿ ಸ್ಥಾನವನ್ನು ಹೊಂದಿದೆ. ಆದರೆ ಅದು ಸಂವಿಧಾನವನ್ನು ಮೀರುವುದಿಲ್ಲ ಎಂದು ತಿಳಿಸಿದ್ದಾರೆ.



ಜನರ ಹೃದಯದಲ್ಲಿ ಶರಿಯತ್ ಕೂಡ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಜನರು ಭಗವಾನ್ ಹನುಮಂತನನ್ನು ತಮ್ಮ ಹೃದಯದಲ್ಲಿ ಇಟ್ಟುಕೊಳ್ಳುತ್ತಾರೆ. ಅದೇ ರೀತಿ ಇದು ಕೂಡ. ನಾನು ಈ ರೀತಿ ಹೇಳಿದ್ದನ್ನು ಕೆಲವರು ವಿರೂಪಗೊಳಿಸಿ ಪ್ರಸ್ತುತಪಡಿಸುತ್ತಿದ್ದಾರೆ. ನಾನು ಹೇಳಿರುವ ವಿಡಿಯೊ ನೋಡಿದರೆ ನಿಮಗೆ ಅದು ತಿಳಿಯುತ್ತದೆ. ತಮ್ಮ ಹೇಳಿಕೆಯ ಸಂದರ್ಭವನ್ನು ಜನರು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕೆಂದು ಎಂದರು.

ಹಸನ್ ಅವರ ಹೇಳಿಕೆಗಳು ಇದೀಗ ರಾಜಕೀಯ ವಿವಾದವನ್ನು ಹುಟ್ಟುಹಾಕಿವೆ. ಕೆಲವರು ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಗೌರವಿಸುವ ದಿನವಾದ ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಸಂವಿಧಾನದ ವಿರುದ್ಧ ಸಚಿವ ಹಸನ್ ಅವರ ಹೇಳಿಕೆಗೆ ಅರ್ಜುನ್ ರಾಮ್ ಮೇಘವಾಲ್ ತೀವ್ರವಾಗಿ ಖಂಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ನಾವೆಲ್ಲರೂ ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನದ ಗೌರವಾರ್ಥವಾಗಿ ದೆಹಲಿಯಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಂವಿಧಾನದ ವಿರುದ್ಧ ಯಾರಾದರೂ ಹಾಗೆ ಹೇಳಿದರೆ ಅದು ಸರಿಯಲ್ಲ. ಅದು ಖಂಡನೀಯ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Caste census: ಇನ್ನೊಮ್ಮೆ ಸಮೀಕ್ಷೆ ಮಾಡಿ: ಜಾತಿ ಗಣತಿ ವರದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಆಕ್ಷೇಪ

ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಜಾರ್ಖಂಡ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಬಾಬುಲಾಲ್ ಮರಾಂಡಿ ಮಾತನಾಡಿ, ಸಚಿವ ಹಸನ್ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ವಿವರಣೆ ನೀಡಲಿ ಎಂದು ಹೇಳಿದ್ದಾರೆ.

ಹಸನ್ ಹೇಳಿಕೆಗೆ ಬಿಜೆಪಿ ಕೂಡ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಮತ್ತು ಜೆಎಂಎಂ ಸ್ಪಷ್ಟೀಕರಣ ನೀಡಬೇಕು ಮತ್ತು ಅಂತಹ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದು, ಕಾಂಗ್ರೆಸ್ ಮತ್ತು ಜೆಎಂಎಂನ ಜನರು ಸಂವಿಧಾನವನ್ನು ನಂಬುವುದಿಲ್ಲ ಮತ್ತು ಶರಿಯತ್ ಪ್ರಕಾರ ಕೆಲಸ ಮಾಡಲು ಬಯಸುತ್ತಾರೆ ಎಂದು ಹೇಳಿದೆ.