ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಾಳೆ ಸರ್ವ ಧರ್ಮ ಗುರುಗಳ ಸಮ್ಮುಖದಲ್ಲಿ ಸಿಎಂ ಆಗಿ ಡಿಕೆಶಿ ಪದಗ್ರಹಣ; ರೈತರಿಂದ ಹಿಡಿದು ಹೈಕಮಾಂಡ್‌ ನಾಯಕರವರೆಗೆ, ಆಹ್ವಾನಿತರ ಪಟ್ಟಿ ಇಲ್ಲಿದೆ

CM oath-taking ceremony: ಡಿ.ಕೆ.ಶಿವಕುಮಾರ್‌ ಅವರು ನೂತನ ಸಿಎಂ ಆಗಿ ನಾಳೆ ಲೋಕಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾಳಿನ ಕಾರ್ಯಕ್ರಮಕ್ಕೆ ಸಾಮಾನ್ಯರಿಂದ ಹಿಡಿದು ಹೈಕಮಾಂಡ್‌ ಮಟ್ಟದ ನಾಯಕರವರೆಗೆ ಆಹ್ವಾನ ನೀಡಿರುವುದು ವಿಶೇಷವಾಗಿದೆ. ಯಾರೆಲ್ಲಾ ಭಾಗಿಯಾಗಲಿದ್ದಾರೆ ಎಂಬ ಪಟ್ಟಿ ಇಲ್ಲಿ ನೀಡಲಾಗಿದೆ.

ನಾಳೆ ನೂತನ ಸಿಎಂ ಪದಗ್ರಹಣ; ವಿದ್ಯಾರ್ಥಿಗಳು, ರೈತರಿಗೂ ಡಿಕೆಶಿ ಆಹ್ವಾನ

ಡಿ.ಕೆ.ಶಿವಕುಮಾರ್‌ -

Prabhakara R
Prabhakara R Jun 2, 2026 8:58 PM

ಬೆಂಗಳೂರು: ರಾಜ್ಯದ 24ನೇ ಸಿಎಂ ಆಗಿ ಡಿ.ಕೆ.ಶಿವಕುಮಾರ್‌ ಅವರ ಪದಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದೆ. ಲೋಕಭವನದ ಗಾಜಿನ ಮನೆಯಲ್ಲಿ ನಾಳೆ ಸಂಜೆ 4 ಗಂಟೆಗೆ ನೂತನ ಸಿಎಂ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಭರ್ಜರಿ ಸಿದ್ಧತೆಗಳು ನಡೆದಿದ್ದು, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಇಂದು ಪೂರ್ವ ತಯಾರಿಯನ್ನು ಪರಿಶೀಲನೆ ನಡೆಸಿದ್ದಾರೆ.

ನೂತನ ಸಿಎಂ ಪ್ರಮಾಣ ವಚನ ಹಿನ್ನೆಲೆಯಲ್ಲಿ ವಿಧಾನಸೌಧದಿಂದ ರಾಜಭವನದವರೆಗೆ ಬೃಹತ್ ಬ್ಯಾನರ್‌, ಕಟೌಟ್‌ಗಳು ಹಾಗೂ ಕಾಂಗ್ರೆಸ್ ಧ್ವಜಗಳು ರಾರಾಜಿಸುತ್ತಿದ್ದು, ರಾಜಧಾನಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇನ್ನು ಬಿಗಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿದ್ದು, ಲೋಕಭವನದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ.

ನಾಳಿನ ಕಾರ್ಯಕ್ರಮಕ್ಕೆ ಸಾಮಾನ್ಯರಿಂದ ಹಿಡಿದು ಹೈಕಮಾಂಡ್‌ ಮಟ್ಟದ ನಾಯಕರವರೆಗೆ ಆಹ್ವಾನ ನೀಡಿರುವುದು ವಿಶೇಷವಾಗಿದೆ. ಯಾರೆಲ್ಲಾ ಭಾಗಿಯಾಗಲಿದ್ದಾರೆ ಎಂಬ ಪಟ್ಟಿ ಇಲ್ಲಿ ನೀಡಲಾಗಿದೆ.

Karnataka's New Cabinet: ದೆಹಲಿಯಲ್ಲಿ ರಾಹುಲ್‌ ಗಾಂಧಿ ಜತೆ ಡಿಕೆಶಿ, ಸಿದ್ದರಾಮಯ್ಯ ಮಹತ್ವದ ಸಭೆ; ಸಚಿವರ ಪಟ್ಟಿ ಫೈನಲ್‌, ಯಾರಿಗೆಲ್ಲಾ ಸ್ಥಾನ?

ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿತರು

  • ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
  • ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ
  • ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್
  • ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೆವಾಲ
  • ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು
  • ಉಪಮುಖ್ಯಮಂತ್ರಿಗಳು
  • ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳು
  • ಸಂಸದರು
  • ಸರ್ವಧರ್ಮ ಗುರುಗಳು
  • ತವರೂರಾದ ಕನಕಪುರದ ದೊಡ್ಡಾಲಹಳ್ಳಿ ಸರಕಾರಿ ಶಾಲೆ ವಿದ್ಯಾರ್ಥಿಗಳು
  • ಕೂಲಿ ಕಾರ್ಮಿಕರು
  • ಪೌರ ಕಾರ್ಮಿಕರು
  • ರೈತ ಮುಖಂಡರು
  • ದಲಿತ ಸಂಘಟನೆ ಮುಖಂಡರು
  • ಹಿಂದುಳಿದ ವರ್ಗಗಳ ಮುಖಂಡರು
  • ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳು
  • ಮಹಿಳಾ ಮುಖಂಡರು
  • ಮಾಧ್ಯಮ ಕ್ಷೇತ್ರದ
  • ಸಿನಿಮಾರಂಗ
  • ನ್ಯಾಯಾಂಗ
  • ಕ್ರೀಡಾಕ್ಷೇತ್ರ
  • ನಾಟಕ ರಂಗ
  • ಸಾಹಿತಿಗಳು
  • ಕಲಾವಿದರು
  • ಕೈಗರಿಕೋದ್ಯಮಿಗಳು
  • ವಾಣಿಜ್ಯೋದ್ಯಮಿಗಳು
  • ಹೋಟೆಲ್ ಉದ್ಯಮಿಗಳು
  • ಯುವ ಮುಖಂಡರು
  • ಮತ್ತಿತರರು

ಸರ್ವ ಧರ್ಮ ಪ್ರಾರ್ಥನೆ

ಸರ್ವ ಧರ್ಮ, ಸರ್ವ ಸಮುದಾಯದ ಸ್ವಾಮೀಜಿಗಳ ಸಮ್ಮುಖದಲ್ಲಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, 55 ಸ್ವಾಮೀಜಿಗಳು, ಫಾದರ್ , ಮಠಾಧಿಪತಿಗಳು ಹಾಗೂ ಮೌಲ್ವಿಗಳಿಗೆ ಸರ್ಕಾರದಿಂದಲೇ ಅಧಿಕೃತ ಆಹ್ವಾನ ಕಳುಹಿಸಲಾಗಿದೆ.

Deputy CM: ಯಾರಾಗ್ತಾರೆ ಡಿಸಿಎಂ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ಪೂರ್ವಾಭಿಮುಖವಾಗಿ ವೇದಿಕೆ

ಇನ್ನು ಡಿ.ಕೆ. ಶಿವಕುಮಾರ್ ಜ್ಯೋತಿಷ್ಯಯನ್ನು ಬಹಳ ನಂಬುವರು. ಹೀಗಾಗಿ ಜ್ಯೋತಿಷ್ಯರ ಸಲಹೆಯಂತೆ ಪೂರ್ವಾಭಿಮುಖವಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕಾಗಿ ಲೋಕಭವನದ ಗಾಜಿನ ಮನೆಯಲ್ಲಿ ಪೂರ್ವಾಭಿಮುಖವಾಗಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಗಾಜಿನ ಮನೆಯಲ್ಲಿ 1100 ರಷ್ಟು ಆಸನಗಳ ವ್ಯವಸ್ಥೆ ಮಾಡಲಾಗಿದೆ.