ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karnataka's New Cabinet: ದೆಹಲಿಯಲ್ಲಿ ರಾಹುಲ್‌ ಗಾಂಧಿ ಜತೆ ಡಿಕೆಶಿ, ಸಿದ್ದರಾಮಯ್ಯ ಮಹತ್ವದ ಸಭೆ; ಸಚಿವರ ಪಟ್ಟಿ ಫೈನಲ್‌, ಯಾರಿಗೆಲ್ಲಾ ಸ್ಥಾನ?

ನಾಳೆ ಸಂಜೆ 4 ಗಂಟೆಗೆ ಬೆಂಗಳೂರಿನ ಲೋಕ ಭವನದಲ್ಲಿ ನೂತನ ಸಿಎಂ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಇಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಇನ್ನು ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಬೃಹತ್‌ ಬ್ಯಾನರ್‌, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

ಡಿ.ಕೆ.ಶಿವಕುಮಾರ್‌ ನೇತೃತ್ವದ ಸಂಪುಟ ಫೈನಲ್‌, ಯಾರಿಗೆಲ್ಲಾ ಸ್ಥಾನ?

ನವದೆಹಲಿಯಲ್ಲಿ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಜತೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್. -

Prabhakara R
Prabhakara R Jun 2, 2026 7:52 PM

ನವದೆಹಲಿ: ಕರ್ನಾಟಕದಲ್ಲಿ ಒಂದೆಡೆ ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಮತ್ತೊಂದೆಡೆ, ಡಿಕೆಶಿ ಜತೆ ಸಚಿವರಾಗಿ (Karnataka's New Cabinet) ಯಾರು ಪ್ರಮಾಣ ಸ್ವೀಕರಿಸಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಈ ನಡುವೆ ನವದೆಹಲಿಯಲ್ಲಿ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ಜತೆ ರಾಹುಲ್‌ ಗಾಂಧಿ ಅವರು ಮಂಗಳವಾರ ಮಹತ್ವದ ಸಭೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಹೈವೋಲ್ಟೇಜ್‌ ಮೀಟಿಂಗ್‌ ನಡೆದಿದ್ದು, ಡಿಕೆಶಿ ನೇತೃತ್ವದ ಸಂಪುಟಕ್ಕೆ ಯಾರು ಸೇರಬೇಕು ಎಂಬ ಬಗ್ಗೆ ಸುದೀರ್ಘ ಮಾತುಕತೆ ನಡೆದಿದೆ.

ಮೊದಲ ಹಂತದಲ್ಲಿ 8ರಿಂದ 10 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಮುಗಿದ ಬಳಿಕ ಮತ್ತೊಂದಷ್ಟು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್‌ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಹೈಕಮಾಂಡ್‌ ಹಂತದಲ್ಲಿ ಮೊದಲ ಪಟ್ಟಿ ಫೈನಲ್ ಆಗಿದ್ದು, ಯಾರಿಗೆಲ್ಲಾ ಸಚಿವ ಸ್ಥಾನ ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ.

ಸಂಭಾವ್ಯ ಸಚಿವರ ಪಟ್ಟಿ

  1. ಡಾ. ಜಿ. ಪರಮೇಶ್ವರ್‌,‌
  2. ಕೆ.ಜೆ. ಜಾರ್ಜ್
  3. ಡಾ.ಯತೀಂದ್ರ
  4. ಸತೀಶ್‌ ಜಾರಕಿಹೊಳಿ
  5. ಪ್ರಿಯಾಂಕ್‌ ಖರ್ಗೆ
  6. ಎಂ.ಬಿ. ಪಾಟೀಲ್‌
  7. ರಾಮಲಿಂಗಾರೆಡ್ಡಿ
  8. ಈಶ್ವರ್‌ ಖಂಡ್ರೆ
  9. ಯುಟಿ ಖಾದರ್‌
  10. ಕೆಎಚ್‌ ಮುನಿಯಪ್ಪ ಅಥವಾ ಪುತ್ರಿ ರೂಪಕಲಾ

ಸಾರ್ವಜನಿಕರಿಗೆ ತೊಂದ್ರೆ ಆಗಬಾರದೆಂದು ಲೋಕಭವನದಲ್ಲಿ ಪ್ರಮಾಣದಲ್ಲಿ ವಚನ: ಡಿ.ಕೆ.ಶಿವಕುಮಾರ್‌

ಲೋಕಭವನ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ

ನಾಳೆ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನಲೆಯಲ್ಲಿ ಲೋಕಭವನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 3500 ಪೊಲೀಸರನ್ನು ಭದ್ರತೆ ನಿಯೋಜಿಸಲಾಗಿದೆ. ಇದರಲ್ಲಿ 2200 ಲಾ ಆ್ಯಂಡ್ ಆರ್ಡರ್ ಪೊಲೀಸರು, 1300 ಸಂಚಾರಿ ಪೊಲೀಸರು ಇದ್ದಾರೆ. ಇದರ ಜೊತೆಗೆ ನಗರದ ಎಲ್ಲಾ ಐಜಿ, ಡಿಐಜಿ, ಡಿಸಿಪಿಗಳು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಕೇಂದ್ರ ವಲಯದಿಂದಲೂ ಕೆಲ ಪೊಲೀಸರು ಭದ್ರತೆಗೆ ನಿಯೋಜನೆ ಮಾಡಲಾಗಿದ್ದು, ನಾಳೆ ಬೆಳಿಗ್ಗೆಯಿಂದಲೇ ಪೊಲೀಸರು ಭದ್ರತೆಗೆ ಹಾಜರಿರಲಿದ್ದಾರೆ.