ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karnataka bypolls: ಉಪಚುನಾವಣೆ ಟಿಕೆಟ್‌; ಮುಸಲ್ಮಾನ ಬಂಧುಗಳ ಬೇಡಿಕೆಗೆ ಕಾಂಗ್ರೆಸ್‌ ಸೊಪ್ಪು ಹಾಕಿಲ್ಲ ಎಂದ ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಹಿಂದೆ ಕಾಂಗ್ರೆಸ್ಸಿನಲ್ಲಿ ಮಂಡ್ಯ ಹೊರತುಪಡಿಸಿ ಇತರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮುಸಲ್ಮಾನ್ ಬಂಧುಗಳಿಗೇ ಟಿಕೆಟ್ ಕೊಡುತ್ತಿದ್ದರು. ಈಗ ಎಲ್ಲ ಕಡೆಯಲ್ಲಿ ಅವರಿಗೆ ಕಾಂಗ್ರೆಸ್ ಕೊಕ್ ಕೊಡುತ್ತ ಬಂದಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಮುಸಲ್ಮಾನರ ಬೇಡಿಕೆಗೆ ಕಾಂಗ್ರೆಸ್‌ ಸೊಪ್ಪು ಹಾಕಿಲ್ಲ: ಛಲವಾದಿ

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (ಸಂಗ್ರಹ ಚಿತ್ರ) -

Profile
Siddalinga Swamy Mar 21, 2026 6:24 PM

ಬೆಂಗಳೂರು, ಮಾ.21: ಜಮೀರ್ ಅಹ್ಮದ್ ಅವರು ದಾವಣಗೆರೆಯಲ್ಲಿ (Davangere South bypoll) ಮುಸಲ್ಮಾನ್ ಬಂಧುಗಳಿಗೇ ಟಿಕೆಟ್ ಕೊಡಬೇಕು. ಇಲ್ಲವಾದರೆ ರಾಜೀನಾಮೆ ಕೊಡುವ ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಸೊಪ್ಪು ಹಾಕಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜತೆ ಶನಿವಾರ ಮಾತನಾಡಿದ ಅವರು, ಸುರ್ಜೇವಾಲಾ ಅವರು ಬೇಕಿದ್ರೆ ನೀವು ರಾಜೀನಾಮೆ ಕೊಟ್ಟು ಹೋಗಿ ಎಂದಿದ್ದಾರೆ. ಹಿಂದೆ ಕಾಂಗ್ರೆಸ್ಸಿನಲ್ಲಿ ಮಂಡ್ಯ ಹೊರತುಪಡಿಸಿ ಇತರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮುಸಲ್ಮಾನ್ ಬಂಧುಗಳಿಗೇ ಟಿಕೆಟ್ ಕೊಡುತ್ತಿದ್ದರು. ಈಗ ಎಲ್ಲ ಕಡೆಯಲ್ಲಿ ಅವರಿಗೆ ಕಾಂಗ್ರೆಸ್ ಕೊಕ್ ಕೊಡುತ್ತ ಬಂದಿದೆ ಎಂದು ಹೇಳಿದ್ದಾರೆ.

ಬಿಜೆಪಿ ಬಗ್ಗೆ ಅವರಿಗೆ ಬೇಸರ ಇರಬಹುದು. ನಾವು ಮುಸಲ್ಮಾನರ ವಿರೋಧಿಗಳಲ್ಲ. ಕಾಂಗ್ರೆಸ್ ಅವರ ತಲೆಯಲ್ಲಿ ಬಿಟ್ಟ ಹುಳಗಳು ಇನ್ನೂ ಸತ್ತಿಲ್ಲ ಎಂದ ಅವರು, ಅವರು ನಮಗೆ ಮತ ಕೊಡುವುದು ಬೇಕಿಲ್ಲ. ಅದು ಅವರಿಗೆ ಬಿಟ್ಟ ವಿಷಯ. ನಾವು ಇಡೀ ದೇಶದಲ್ಲಿ ಅಧಿಕಾರದಲ್ಲಿದ್ದೇವೆ. ದೇಶವನ್ನಾಳುವ ಮೋದಿಜೀ ಅವರು ದೊಡ್ಡ ಸಮುದಾಯದವರಲ್ಲ, ಅವರು ಕೂಡ ಹಿಂದುಳಿದವರೇ. ಯಾವ ರೀತಿ ಸಿದ್ದರಾಮಯ್ಯನವರು ನಾನು ಅಹಿಂದ ಎಂದು ಅಂದುಕೊಳ್ಳುತ್ತಾರೋ ಅದೇ ರೀತಿ ಮೋದಿಜೀ ಅವರು ಅಹಿಂದವೇ ಎಂದು ತಿಳಿಸಿದರು.

ಕಾಂಗ್ರೆಸ್ಸಿಗೆ ಸವಾಲು ಹಾಕಿ ನಾಮಪತ್ರ

ಇವರಾಗಿಯೇ ತಿಳಿದುಕೊಂಡು ಕಾಂಗ್ರೆಸ್ಸಿಗೆ ಜೋತುಬಿದ್ದು, ತಮ್ಮ ಸ್ವಾಭಿಮಾನವನ್ನು ಹಾಳು ಮಾಡಿಕೊಂಡಿದ್ದಾರೆ. ಕಾಂಗ್ರೆಸ್ಸಿಗೆ ಮೂರು ಕಾಸಿನ ಮರ್ಯಾದೆಯನ್ನೂ ಮಲ್ಲಿಕಾರ್ಜುನ್ ಅವರ ಕುಟುಂಬ ಕೊಟ್ಟಿಲ್ಲ. ಅವರು ಸಚಿವರು; ಅವರ ಪತ್ನಿ ಸಂಸದೆ, ಮಗನಿಗೆ ಒಂದು ಅವಕಾಶ ಕೊಡಿಸಬೇಕು. ನೀವು ಟಿಕೆಟ್ ಕೊಡದಿದ್ದರೂ ಕೇರ್ ಮಾಡುವುದಿಲ್ಲ. ಕಾಂಗ್ರೆಸ್ಸಿಗೆ ಸವಾಲು ಹಾಕಿ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಈಗ ಕಾಂಗ್ರೆಸ್ ಅನಿವಾರ್ಯವಾಗಿ ಅವರಿಗೆ ಟಿಕೆಟ್ ಕೊಡಬೇಕಾಗಬಹುದು ಎಂದರು.

ಅಕ್ರಮಕ್ಕಾಗಿಯೇ ಮತಪತ್ರಕ್ಕೆ ಕೋರಿಕೆ

ಜಿಬಿಎ ಚುನಾವಣೆ ಬರಲಿದೆ ಎಂದುಕೊಂಡಿದ್ದೇವೆ. ಜಿಬಿಎ ಚುನಾವಣೆಯಲ್ಲಿ ಮತಪತ್ರದೊಂದಿಗೆ ಚುನಾವಣೆ ನಡೆಸಲು ನಿರ್ಧರಿಸಿದ್ದಾರೆ. ಕುಣಿಗಲ್‍ನ ಸಂತೆಮಾದನೂರಿನಲ್ಲಿ ಒಂದು ಸೊಸೈಟಿ ಚುನಾವಣೆ ನಡೆದಿದೆ. ಅಧಿಕಾರಿ ಹೊರಗಡೆ ಕುಳಿತು ಮತ ಒತ್ತಿ ಬಂಡಲ್ ಅನ್ನು ತಂದು ಡಬ್ಬಕ್ಕೆ ಹಾಕುವಾಗ ಸಿಕ್ಕಿ ಹಾಕಿಕೊಂಡಿದ್ದಾರೆ. ನಮ್ಮ ಪಕ್ಷದ ಏಜೆಂಟ್ ಅವನನ್ನು ಹಿಡಿದಿದ್ದಾರೆ. ಪೊಲೀಸರು ಬಂದು ಅಧಿಕಾರಿ ತಪ್ಪಿಸಿಕೊಳ್ಳಲು ನೆರವಾಗಿದ್ದಾರೆ. ವಿಡಿಯೋ ಇದ್ದರೂ ಎಫ್‍ಐಆರ್ ಮಾಡಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

Internal Reservation: ಒಳಮೀಸಲಾತಿ; ಜಾತಿ ಸಂಘರ್ಷಕ್ಕೆ ಸಿದ್ದರಾಮಯ್ಯ ಕುಮ್ಮಕ್ಕು ನೀಡುತ್ತಿದ್ದಾರೆ ಎಂದ ಛಲವಾದಿ ನಾರಾಯಣಸ್ವಾಮಿ

ಹಿಡಿದುಕೊಟ್ಟಾತ ಅಧಿಕಾರಿಯನ್ನು ಹೊಡೆದುದಾಗಿ ಎಫ್‍ಐಆರ್ ಮಾಡಿದ್ದಾರೆ. ಇದನ್ನು ಬಯಲಿಗೆ ತಂದವರ ವಿರುದ್ಧ ಪೊಲೀಸರು ಕೇಸ್ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಈ ರೀತಿ ಅಕ್ರಮ ಮಾಡುವುದರಲ್ಲಿ ಅವರು ಮೊದಲಿನಿಂದಲೂ ಇದ್ದಾರೆ. ಇದರಲ್ಲಿ ಒಳಗಾದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು. ಹಿಡಿದುಕೊಟ್ಟವರ ಮೇಲಿನ ಎಫ್‍ಐಆರ್ ರದ್ದು ಮಾಡಬೇಕೆಂದು ಆಗ್ರಹಿಸಿದ ಅವರು, ಕುಣಿಗಲ್‍ನ ಘಟನೆ ನಿಮ್ಮ ಮುಖಕ್ಕೆ ಹಿಡಿದ ಕನ್ನಡಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.