ಡೀಪ್‌ಫೇಕ್‌ಗೆ ಪೂರ್ವಾನುಮತಿ ಕಡ್ಡಾಯಗೊಳಿಸಲು ಲೋಕಸಭೆಯಲ್ಲಿ ಮಸೂದೆ ಮಂಡನೆ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಡೀಪ್‌ಫೇಕ್ ವಿಡಿಯೊ ವೈರಲ್ ಆದ ಬೆನ್ನಲ್ಲೇ ಇದೀಗ ಲೋಕಸಭೆಯಲ್ಲಿ ಡೀಪ್‌ಫೇಕ್‌ಗೆ ಕಡಿವಾಣ ಹಾಕಲು ಮಸೂದೆಯನ್ನು ಮಂಡಿಸಲಾಗಿದೆ. ಈ ಮಸೂದೆಯ ಪ್ರಕಾರ ಡೀಪ್‌ಫೇಕ್ ವಿಷಯದಲ್ಲಿ ಯಾವುದೇ ವ್ಯಕ್ತಿಯನ್ನು ಚಿತ್ರೀಕರಿಸಲು ಮುಂದಾದರೆ ಅದಕ್ಕೆ ಪೂರ್ವಾನುಮತಿಯನ್ನು ಕಡ್ಡಾಯಗೊಳಿಸುವ ಉದ್ದೇಶವನ್ನು ಇದು ಹೊಂದಿದೆ.
(ಸಂಗ್ರಹ ಚಿತ್ರ) -
ನವದೆಹಲಿ: ಡೀಪ್‌ಫೇಕ್ ವಿಡಿಯೊ (Deepfake video) ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವವರು ಇನ್ನು ಮುಂದೆ ಎಚ್ಚರಿಕೆ ವಹಿಸಲೇಬೇಕು. ಯಾಕೆಂದರೆ ಇದಕ್ಕೆ ಕಡಿವಾಣ ಹಾಕಲು ಇದೀಗ ಲೋಕಸಭೆಯಲ್ಲಿ (Loksabha) ಮಸೂದೆಯನ್ನು ಮಂಡಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಡೀಪ್‌ಫೇಕ್ ವಿಡಿಯೊ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಶಿವಸೇನಾ ನಾಯಕ ಶ್ರೀಕಾಂತ್ ಶಿಂಧೆ (Shiv Sena leader Shrikant Shinde) ಅವರು ಶುಕ್ರವಾರ ಸದನದಲ್ಲಿ ಡೀಪ್‌ಫೇಕ್ ನಿಯಂತ್ರಣ ಮಸೂದೆಯನ್ನು (deepfake Bill) ಮಂಡಿಸಿದರು. ಈ ಮಸೂದೆಯ ಪ್ರಕಾರ ಡೀಪ್‌ಫೇಕ್ ವಿಡಿಯೊ ಚಿತ್ರೀಕರಿಸುವುದಾದರೆ ಇನ್ನು ಮುಂದೆ ಪೂರ್ವಾನುಮತಿಯನ್ನು ಕಡ್ಡಾಯಗೊಳಿಸಲಾಗಿದೆ.
ಡೀಪ್‌ಫೇಕ್ ವಿಷಯಗಳನ್ನು ನಿಯಂತ್ರಿಸಲು ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಇದಕ್ಕಾಗಿ ಇದೀಗ ಕಠಿಣ ಕಾನೂನನ್ನು ಜಾರಿಗೊಳಿಸಲು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಆರನೇ ಗ್ಯಾರಂಟಿ 'ಭೂಮಿ ಗ್ಯಾರಂಟಿ' ಅನುಷ್ಠಾನ: ಡಿಸಿಎಂ ಡಿ.ಕೆ. ಶಿವಕುಮಾರ್
ಶಿವಸೇನಾ ನಾಯಕ ಶ್ರೀಕಾಂತ್ ಶಿಂಧೆ ಅವರು ಶುಕ್ರವಾರ ಸದನದಲ್ಲಿ ಡೀಪ್‌ಫೇಕ್ ನಿಯಂತ್ರಣ ಮಸೂದೆಯನ್ನು ಮಂಡಿಸಿದ್ದು, ಇದರ ಪ್ರಕಾರ ಇನ್ನು ಮುಂದೆ ಡೀಪ್‌ಫೇಕ್ ವಿಷಯ ಚಿತ್ರೀಕರಣಕ್ಕೆ ವ್ಯಕ್ತಿಗಳ ಪೂರ್ವಾನುಮತಿ ಕಡ್ಡಾಯವಾಗಿದೆ. ಈ ಮಸೂದೆಯ ಮೂಲಕ ಸರ್ಕಾರವು ದೇಶದ ನಾಗರಿಕರನ್ನು ರಕ್ಷಿಸಲು ಮುಂದಾಗಿದೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ, ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕರ ಡೀಪ್ ಫೇಕ್ ವಿಡಿಯೊ ವೈರಲ್ ಆಗಿತ್ತು. ಈ ಬಗ್ಗೆ ಅನೇಕ ಸೆಲೆಬ್ರಿಟಿಗಳು ದೂರನ್ನು ಕೂಡ ನೀಡಿದ್ದರು. ಕಿರುಕುಳ, ವಂಚನೆ ಮತ್ತು ತಪ್ಪು ಮಾಹಿತಿಗಾಗಿ ಡೀಪ್‌ಫೇಕ್‌ಗಳ ದುರುಪಯೋಗವು ಹೆಚ್ಚಾಗುತ್ತಿರುವುದರಿಂದ ಇದನ್ನು ನಿಯಂತ್ರಿಸುವುದು ಅಗತ್ಯವಿದೆ ಎಂದು ಶಿಂಧೆ ಸದನದಲ್ಲಿ ತಿಳಿಸಿದ್ದಾರೆ.
आज लोकसभेत शिवसेनेचे खासदार डॉ. श्रीकांत शिंदे यांनी “रेग्युलेशन ऑफ डीपफेक बिल, २०२४” हे खासगी विधेयक सादर केले. कृत्रिम बुद्धिमत्ता आणि डीपफेक तंत्रज्ञानाचा वाढता गैरवापर खोटी व्हिडिओ/ऑडिओ तयार करणे, व्यक्तींची परवानगी न घेता त्यांची प्रतिमा वापरणे, चुकीची माहिती पसरवणे या… pic.twitter.com/ClFVgKgVVE
— Shivsena - शिवसेना (@Shivsenaofc) December 5, 2025
ಈ ಮಸೂದೆಯ ಪ್ರಕಾರ ಡೀಪ್‌ಫೇಕ್ ವಿಷಯ ರಚನೆ, ಪ್ರಸಾರಕ್ಕೆ ಅಪರಾಧಿಗಳಿಗೆ ಭಾರಿ ದಂಡ ವಿಧಿಸಲಾಗುತ್ತದೆ. ಡೀಪ್‌ಫೇಕ್ ತಂತ್ರಜ್ಞಾನವು ಶಿಕ್ಷಣ, ಮನರಂಜನೆ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಯೋಜನಕಾರಿ ಎಂದು ಸಾಬೀತಾದರೂ ದಿನೇ ದಿನೇ ಇದರ ದುರುಪಯೋಗ ಹೆಚ್ಚಾಗುತ್ತಿದೆ. ಇದರಿಂದ ತೀವ್ರ ಅಪಾಯಗಳು ಉಂಟಾಗುವ ಸಾಧ್ಯತೆ ಇದೆ. ಅಲ್ಲದೇ ಇದು ವೈಯಕ್ತಿಕ ಗೌಪ್ಯತೆ, ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನಂಬಿಕೆಗೆ ಧಕ್ಕೆ ತರಲಿದೆ. ಹೀಗಾಗಿ ಇವುಗಳನ್ನು ನಿಯಂತ್ರಿಸಲು ಸ್ಪಷ್ಟವಾದ ಕಾನೂನು ಅಗತ್ಯವಿದೆ ಎಂದು ಶಿಂಧೆ ತಿಳಿಸಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ಪರ ಕಣಕ್ಕಿಳಿಯಲಿರುವ ರೋಹಿತ್ ಶರ್ಮಾ?
ಡೀಪ್‌ಫೇಕ್‌ಗಳ ಮೌಲ್ಯಮಾಪನಕ್ಕೆ ಡೀಪ್‌ಫೇಕ್ ಟಾಸ್ಕ್ ಫೋರ್ಸ್ ರಚನೆಗೆ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೇ ಕುಶಲತೆಯಿಂದ ಕೂಡಿದ ವಿಷಯವನ್ನು ಪತ್ತೆಹಚ್ಚುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಶೈಕ್ಷಣಿಕ ಮತ್ತು ಖಾಸಗಿ ವಲಯದ ಸಂಸ್ಥೆಗಳೊಂದಿಗೆ ಕಾರ್ಯಪಡೆಯೂ ಸಹಕರಿಸಬೇಕು, ಡೀಪ್‌ಫೇಕ್ ನಿಂದ ಮಾಡಲಾಗಿರುವ ಸುಧಾರಿತ ಇಮೇಜ್ ಕುಶಲತೆಯ ಪತ್ತೆ ಮತ್ತು ತಡೆಗಟ್ಟುವಿಕೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಉಪಕ್ರಮಗಳನ್ನು ಬೆಂಬಲಿಸಲು ನಿಧಿ ಸ್ಥಾಪನೆ ಬಗ್ಗೆಯೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.