ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepfake: ತನ್ನ ಬೆತ್ತಲೆ ಫೋಟೋವನ್ನು ಸಂಸತ್ತಿನಲ್ಲಿ ಪ್ರದರ್ಶಿಸಿದ ಸಂಸದೆ

ನ್ಯೂಜಿಲೆಂಡ್ ನ ಸಂಸದೆ ಆಕ್ಟ್ ಪಕ್ಷದ ಲಾರಾ ಮೆಕ್‌ಕ್ಲೂರ್ ಅವರು ಸಂಸತ್ತಿನಲ್ಲಿ ಸೆನ್ಸಾರ್ ಮಾಡಲಾದ (deepfake technology) ತಮ್ಮ ಚಿತ್ರವನ್ನು ಬಹಿರಂಗಪಡಿಸಿದ್ದು,ಇದನ್ನು ಆನ್‌ಲೈನ್‌ನಲ್ಲಿ ರಚಿಸಲು ಐದು ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಈ ಚಿತ್ರವು ನನ್ನ ಬೆತ್ತಲೆ ಚಿತ್ರವಾಗಿದೆ. ಆದರೆ ಅದು ನಿಜವಲ್ಲ ಎಂದು ಅವರು ಮೇ 14ರಂದು ಸದನದಲ್ಲಿ ತಿಳಿಸಿದ್ದಾರೆ.

ತನ್ನ ಬೆತ್ತಲೆ ಫೋಟೋವನ್ನು ಸಂಸತ್ತಿನಲ್ಲಿ ಪ್ರದರ್ಶಿಸಿದ ಸಂಸದೆ

ವೆಲ್ಲಿಂಗ್ಟನ್: ಡೀಪ್‌ಫೇಕ್ ತಂತ್ರಜ್ಞಾನವು (deepfake technology) ಬಾಲಿವುಡ್, ಹಾಲಿವುಡ್ ಸೆಲೆಬ್ರಿಟಿಗಳನ್ನು ಮಾತ್ರವಲ್ಲ ರಾಜಕೀಯ ನಾಯಕರನ್ನೂ ಬಿಟ್ಟಿಲ್ಲ. ಡೀಪ್‌ಫೇಕ್ ನಿಂದ ಆಗುತ್ತಿರುವ ಅಪಾಯದ ಬಗ್ಗೆ ಇತ್ತೀಚೆಗೆ ಸಾಕಷ್ಟು ಮಂದಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಸಂಸದೆಯೊಬ್ಬರು (Laura McClure ) ತಮ್ಮ ಡೀಪ್‌ಫೇಕ್ ಚಿತ್ರವನ್ನು ಸಂಸತ್ತಿನಲ್ಲಿ ಪ್ರದರ್ಶಿಸಿ ಧೈರ್ಯ ತೋರಿದ್ದಾರೆ. ಈ ಮೂಲಕ ಡೀಪ್‌ಫೇಕ್ ತಂತ್ರಜ್ಞಾನದ ಅಪಾಯಗಳ ಬಗ್ಗೆ ರಾಜಕೀಯ ನಾಯಕರು ಮಾತ್ರವಲ್ಲ ವಿಶ್ವದ ಗಮನ ಸೆಳೆದಿದ್ದಾರೆ. ಈ ಘಟನೆ ನ್ಯೂಜಿಲೆಂಡ್ ನ ಪಾರ್ಲಿಮೆಂಟ್ ನಲ್ಲಿ ( New Zealand Parliament) ನಡೆದಿದೆ.

ಡೀಪ್‌ಫೇಕ್ ತಂತ್ರಜ್ಞಾನದ ಅಪಾಯಗಳ ಬಗ್ಗೆ ಎಲ್ಲರನ್ನೂ ಎಚ್ಚರಿಸಲು ವೆಲ್ಲಿಂಗ್ಟನ್ ನಲ್ಲಿರುವ ನ್ಯೂಜಿಲೆಂಡ್ ನ ಸಂಸತ್ತಿನಲ್ಲಿ ಸಂಸದೆ ಧೈರ್ಯದಿಂದ ತಮ್ಮ ಬೆತ್ತಲೆ ಫೋಟೋವನ್ನು ತೋರಿಸಿದ್ದಾರೆ. ನ್ಯೂಜಿಲೆಂಡ್ ನ ಸಂಸದೆ ಆಕ್ಟ್ ಪಕ್ಷದ ಲಾರಾ ಮೆಕ್‌ಕ್ಲೂರ್ ಅವರು ಸಂಸತ್ತಿನಲ್ಲಿ ಸೆನ್ಸಾರ್ ಮಾಡಲಾದ ತಮ್ಮ ಚಿತ್ರವನ್ನು ಬಹಿರಂಗಪಡಿಸಿದ್ದು,ಇದನ್ನು ಆನ್‌ಲೈನ್‌ನಲ್ಲಿ ರಚಿಸಲು ಐದು ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಈ ಚಿತ್ರವು ನನ್ನ ಬೆತ್ತಲೆ ಚಿತ್ರವಾಗಿದೆ. ಆದರೆ ಅದು ನಿಜವಲ್ಲಎಂದು ಅವರು ಮೇ 14ರಂದು ಸದನದಲ್ಲಿ ತಿಳಿಸಿದ್ದಾರೆ.

ಡೀಪ್‌ಫೇಕ್‌ನ ಅಪಾಯಗಳ ಬಗ್ಗೆ ಚರ್ಚಿಸುತ್ತಾ ಅವರು, ಇದು ಅವಮಾನಕರ ಮತ್ತು ವಿನಾಶಕಾರಿ. ಇದು ವಾಸ್ತವವಾಗಿ ನಾನು ಅಲ್ಲ ಎಂದು ತಿಳಿದಿದ್ದರೂ ಸಹ ಸಂಸತ್ತಿನಲ್ಲಿ ನಿಂತು ನನ್ನ ಫೋಟೋವನ್ನು ಎಲ್ಲರಿಗೂ ತೋರಿಸಬೇಕಾದ ಪರಿಸ್ಥಿತಿ ನನಗೆ ಕಿರಿಕಿರಿಯನ್ನು ಉಂಟು ಮಾಡಿದೆ ಎಂದರು.

ಇದನ್ನೂ ಓದಿ: RCB vs PBKS: ಆರ್‌ಸಿಬಿ ಗೆದ್ದರೂ ಮೆರವಣಿಗೆ, ರ‍್ಯಾಲಿ ನಡೆಸಲು ಅವಕಾಶವಿಲ್ಲ

ಸಂಸತ್ತಿನಲ್ಲಿ ಡೀಪ್‌ಫೇಕ್ ತಂತ್ರಜ್ಞಾನದ ಅಪಾಯಗಳ ಬಗ್ಗೆ ಅವರು ಎಲ್ಲರನ್ನೂ ಎಚ್ಚರಿಸಲು ತಮ್ಮ ಎಐ ರಚಿತ ನಗ್ನ ಚಿತ್ರವನ್ನ ಎತ್ತಿ ತೋರಿಸಿದ್ದರೆ. ಮೆಕ್‌ಕ್ಲೂರ್ ಅವರು ಕೃತಕ ಬುದ್ದಿಮತ್ತೆ ಬಳಸಿ ಈ ಚಿತ್ರವನ್ನು ಎಷ್ಟು ಸುಲಭವಾಗಿ ಸೃಷ್ಟಿಸಿದ್ದಾರೆ ಎಂದು ವಿಸ್ತರಿಸಿ ಹೇಳಿದಾಗ ಸಂಸತ್ತು ಆಶ್ಚರ್ಯ ಮತ್ತು ಆತಂಕವನ್ನು ವ್ಯಕ್ತಪಡಿಸಿತು.

ಈ ಕುರಿತು ಅವರು ಇನ್‌ಸ್ಟಾಗ್ರಾಮ್‌’ನಲ್ಲಿ ವಿಡಿಯೊ ವನ್ನು ಹಂಚಿಕೊಂಡಿದ್ದು, ಕೃತಕ ಬುದ್ದಿಮತ್ತೆ ಬಳಸಿ ಡೀಪ್ ಫೇಕ್ ಚಿತ್ರಗಳನ್ನು ಮಾಡುವುದು ಎಷ್ಟು ಸುಲಭ ಮತ್ತು ಅದು ಎಷ್ಟು ಹಾನಿಯನ್ನುಂಟು ಮಾಡುತ್ತದೆ ಎಂಬುದರ ಕುರಿತು ನಾನು ಸಂಸತ್ತಿನ ಎಲ್ಲಾ ಇತರ ಸದಸ್ಯರ ಗಮನಕ್ಕೆ ತಂದಿದ್ದೇನೆ. ಇದಕ್ಕೆ ಯುವ ನಾಯಕರು ವಿಶೇಷವಾಗಿ ಮಹಿಳೆಯರು ಬಲಿಯಾಗುವ ಸಾಧ್ಯತೆ ಹೆಚ್ಚು ಎಂದು ಅವರು ಹೇಳಿದ್ದಾರೆ.