ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ಪರ ಕಣಕ್ಕಿಳಿಯಲಿರುವ ರೋಹಿತ್ ಶರ್ಮಾ?
ಟೆಸ್ಟ್ ಹಾಗೂ ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುತ್ತಿರುವ ರೋಹಿತ್ ಶರ್ಮಾ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಪಂದ್ಯಗಳಲ್ಲಿ ಮುಂಬೈ ಪರ ಆಡಲಿದ್ದಾರೆಂದು ವರದಿಯಾಗಿದೆ. ಅವರು ಈ ಟೂರ್ನಿಯಲ್ಲಿ ಕೊನೆಯ ಬಾರಿ 2012ರಲ್ಲಿ ಮುಂಬೈ ಪರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ಧ ಆಡಿದ್ದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ಆಡಲಿರುವ ರೋಹಿತ್. -
ಮುಂಬೈ: ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ (IND vs SA) ಏಕದಿನ ಸರಣಿ ಆಡುತ್ತಿರುವ ರೋಹಿತ್ ಶರ್ಮಾ (Rohit Sharma) 2025-26ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ (Syed Mushtaq Ali Trophy) ನಾಕೌಟ್ ಪಂದ್ಯಗಳಲ್ಲಿ ಮುಂಬೈ ಪರ ಆಡಲಿದ್ದಾರೆ ಎಂದು ವರದಿಯಾಗಿದೆ. ಈ ಟೂರ್ನಿಯಲ್ಲಿ ಮುಂಬೈ ತಂಡ ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲೂ ಜಯ ಗಳಸಿದ್ದು, ನಾಕೌಟ್‌ಗೆ ಅರ್ಹತೆ ಪಡೆದಿದೆ. ಡಿಸೆಂಬರ್ 12 ರಿಂದ 18 ರವರೆಗೆ ಇಂದೋರ್‌ನಲ್ಲಿ ನಾಕೌಟ್ ಪಂದ್ಯಗಳು ನಡೆಯಲಿವೆ. ಇನ್ನು 2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ಹಿಟ್‌ಮ್ಯಾನ್ ಅಂತಾರಾಷ್ಟ್ರೀಯ ಟಿ20ಗೆ ಗುಡ್ ಬೈ ಹೇಳಿದ್ದರು. ಇದೀಗ ಅವರು ದೇಶಿ ಟಿ20 ಕ್ರಿಕೆಟ್‌ನಲ್ಲಿ ಕಣಕ್ಕಿಳಿಯುವ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮೂಲಗಳು ತಿಳಿಸಿವೆ.
ರೋಹಿತ್ ಶರ್ಮಾ ಸೈಯದ್ ಅಲಿ ಮುಷ್ತಾಕ್ ಟ್ರೋಫಿಯಲ್ಲಿ ಕೊನೆಯ ಬಾರಿ 2012ರಲ್ಲಿ ಮುಂಬೈ ಪರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ಧ ಆಡಿದ್ದರು. ಆ ಪಂದ್ಯದಲ್ಲಿ ಮುಂಬೈ ತಂಡ ಸೋಲನುಭವಿಸಿತ್ತು. ಆ ಬಳಿಕ ದೇಶಿ ಟಿ20 ಕ್ರಿಕೆಟ್‌ನಿಂದ ದೂರ ಉಳಿದಿದ್ದು, ಇದೀಗ ಪುನಃ ಮರಳುವ ನಿರೀಕ್ಷೆಯಿದೆ.
KAR vs DEL: ಆಯುಷ್ ಬದೋನಿ ಆಲ್‌ರೌಂಡ್ ಆಟದಿಂದ ದೆಹಲಿ ಎದುರು ಸೋತ ಕರ್ನಾಟಕ!
ರೋಹಿತ್ ಶರ್ಮಾ ಜೊತೆ ಕೊನೆಯ ಬಾರಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಿದವರು
1.ಅಜಿತ್ ಅಗರ್ಕರ್
ರೋಹಿತ್ ಶರ್ಮಾ ಅವರು 2012ರಲ್ಲಿ ಕೊನೆಯ ಬಾರಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಆಡಿದಾಗ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮುಂಬೈ ತಂಡದ ನಾಯಕರಾಗಿದ್ದರು. ಆ ಪಂದ್ಯದಲ್ಲಿ ಅಗರ್ಕರ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಅಗರ್ಕರ್ ಈವರೆಗೆ 26 ಟೆಸ್ಟ್, 191 ಏಕದಿನ ಮತ್ತು ನಾಲ್ಕು ಟಿ20 ಪಂದ್ಯಗಳನ್ನಾಡಿದ್ದಾರೆ. 2007 ರಲ್ಲಿ ವಿಶ್ವಕಪ್ ಮೊದಲ ಆವೃತ್ತಿಯಲ್ಲಿ ಭಾರತ ತಂಡ ಚಾಂಪಿಯನ್ಸ್ ಆದಾಗ ಅಗರ್ಕರ್ ವಿಜೇತ ತಂಡದ ಭಾಗವಾಗಿದ್ದರು. ಆ ಬಳಿಕ ರೋಹಿತ್ ಟೀಮ್ ಇಂಡಿಯಾ ನಾಯಕರಾದಾಗ ಅಗರ್ಕರ್ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಜೊತೆಗೂಡಿ ಕೆಲಸ ಮಾಡಿದರು.
2.ಸೂರ್ಯಕುಮಾರ್ ಯಾದವ್
ರೋಹಿತ್ ಶರ್ಮಾ ಅವರ ಜೊತೆಗೆ ಮುಂಬೈ ತಂಡದ ಸೂರ್ಯಕುಮಾರ್ ಯಾದವ್ ಕೂಡ 2012ರಲ್ಲಿ ಸಹ ಆಟಗಾರರಾಗಿದ್ದರು. ಆ ಪಂದ್ಯದಲ್ಲಿ ಇಬ್ಬರು ಉತ್ತಮ ಜೊತೆಯಾಟವಾಡಿದ್ದರು. ಆ ಬಳಿಕ ರೋಹಿತ್ ಮತ್ತು ಸೂರ್ಯಕುಮಾರ್ 2024ರ ಟಿ20 ವಿಶ್ವಕಪ್ ವಿಜೇತ ತಂಡದಲ್ಲಿದ್ದರು ಹಾಗೂ 2019 ಮತ್ತು 2020 ರ ಐಪಿಎಲ್‌ನಲ್ಲಿ ಮುಂಬೈ ತಂಡದ ಪರ ಒಟ್ಟಿಗೆ ಆಡಿದ್ದರು.
IND vs SA: ಕೆಎಲ್ ರಾಹುಲ್ ಶತಕ ಸಿಡಿಸದೆ ಇರಲು ಬಲವಾದ ಕಾರಣ ತಿಳಿಸಿದ ಡೇಲ್ ಸ್ಟೇನ್!
3.ಅಜಿಂಕ್ಯ ರಹಾನೆ
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ಸಹ ಆಟಗಾರರಾಗಿ ಅಜಿಂಕ್ಯ ರಹಾನೆ ಆಡಿದ್ದರು. ರಹಾನೆ ಆ ಪಂದ್ಯದಲ್ಲಿ 20 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದಂತೆ 21 ರನ್ ಗಳಿಸಿದ್ದರು. ರೋಹಿತ್ ಮತ್ತು ರಹಾನೆ ಒಟ್ಟಾಗಿ ಮೂರೂ ಸ್ವರೂಗಳಲ್ಲಿ ಆಡಿದ್ದಾರೆ. ರಹಾನೆ ಇದುವರೆಗೆ 85 ಟೆಸ್ಟ್, 90 ಏಕದಿನ ಮತ್ತು 20 ಟಿ20 ಪಂದ್ಯಗಳನ್ನಾಡಿದ್ದಾರೆ. ಇದೀಗ ರೋಹಿತ್ ಮುಂಬೈ ಪರ ಕಣಕ್ಕಿಳಿದರೆ, ಇಬ್ಬರೂ ಬ್ಯಾಟ್ಸ್‌ಮನ್ ಒಂದಾಗಲಿದ್ದಾರೆ. ಅಜಿಂಕ್ಯ ರಹಾನೆ 2025-26ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ಪರ ಆಡುತ್ತಿದ್ದಾರೆ.
4.ಅಭಿಷೇಕ್ ನಾಯರ್
ಟೀಮ್ ಇಂಡಿಯಾ ಮಾಜಿ ಆಟಗಾರ ಮತ್ತು ಕೋಚ್ ಅಭಿಷೇಕ್ ನಾಯರ್ ಕೊನೆಯ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಸಹ ಆಟಗಾರರಾಗಿ ಆಡಿದ ಮತ್ತೊಬ್ಬ ಆಟಗಾರರಾಗಿದ್ದಾರೆ. ನಾಯರ್ ಅವರ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಅವಧಿ ತೀರಾ ಕಡಿಮೆಯಾಗಿದ್ದು, ಅವರು ಭಾರತ ತಂಡದ ಪರ ಕೇವಲ ಮೂರು ಪಂದ್ಯಗಳನ್ನಷ್ಟೇ ಆಡಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ.