Delhi Election 2025: ಕೇಜ್ರಿವಾಲ್‌ಗೆ ಶಾಕ್; ಚುನಾವಣೆ ಹೊಸ್ತಿಲಲ್ಲೇ ಎಎಪಿ ತೊರೆದ 7 ಹಾಲಿ ಶಾಸಕರು!
ದೆಹಲಿ ಚುನಾವಣೆಗೆ ದಿನಗಣನೆ ಶುರುವಾಗಿದೆ. ಇನ್ನು ಐದು ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಎಎಪಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ. ಆದರೆ ಇದೀಗ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ಗೆ ಆಘಾತ ಎದುರಾಗಿದೆ. ಟಿಕೆಟ್ ಸಿಗದೆ ನಿರಾಶರಾಗಿ ಪಕ್ಷದ ವಿರುದ್ದ ಮುನಿಸಿಕೊಂಡಿದ್ದ 7 ಹಾಲಿ ಶಾಸಕರು ಎಎಪಿ ಪಕ್ಷವನ್ನು ತೊರೆದಿದ್ದು,ಪಕ್ಷದ ಮೇಲಿದ್ದ ನಂಬಿಕೆ ಹೋಗಿದೆ ಎಂದಿದ್ದಾರೆ.
ನವದೆಹಲಿ: ದೆಹಲಿ ಚುನಾವಣೆಗೆ(Delhi Election 2025) ದಿನಗಣನೆ ಶುರುವಾಗಿದೆ. ಮತ ಪ್ರಚಾರದ ಭರಾಟೆಯು ತಾರಕಕ್ಕೇರಿದೆ. ಇನ್ನು ಐದು ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಎಎಪಿ(AAP) ಹ್ಯಾಟ್ರಿಕ್ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ. ಆದರೆ ಇದೀಗ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ಗೆ(Arvind Kejriwal) ಆಘಾತ ಎದುರಾಗಿದೆ. ಈ ಬಾರಿಯ ಚುನಾವಣೆಗೆ ಟಿಕೆಟ್ ಸಿಗದೆ ನಿರಾಶರಾಗಿ ಪಕ್ಷದ ವಿರುದ್ದ ಮುನಿಸಿಕೊಂಡಿದ್ದ 7 ಹಾಲಿ ಶಾಸಕರು ಎಎಪಿ ಪಕ್ಷವನ್ನು ತೊರೆದಿದ್ದು,ಪಕ್ಷದ ಮೇಲಿದ್ದ ನಂಬಿಕೆ ಹೋಗಿದೆ ಎಂದಿದ್ದಾರೆ.
ಆಮ್ ಆದ್ಮಿ ಪಕ್ಷದ (ಎಎಪಿ) ಏಳು ಶಾಸಕರು ರಾಜೀನಾಮೆ ನೀಡಿದ್ದಾರೆ. ಇದು ಮತ್ತೊಮ್ಮೆ ದೆಹಲಿ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಅರವಿಂದ್ ಕೇಜ್ರಿವಾಲ್‌ಗೆ ನುಂಗಲಾರದ ತುತ್ತಾಗಿದೆ. ರಾಜೀನಾಮೆ ನೀಡಿದ ಶಾಸಕರ ಪೈಕಿ ನರೇಶ್ ಯಾದವ್ (ಮೆಹ್ರೌಲಿ), ರೋಹಿತ್ ಕುಮಾರ್ (ತ್ರಿಲೋಕಪುರಿ), ರಾಜೇಶ್ ರಿಷಿ (ಜನಕ್ಪುರಿ), ಮದನ್ ಲಾಲ್ (ಕಸ್ತೂರ್ಬಾ ನಗರ), ಪವನ್ ಶರ್ಮಾ (ಆದರ್ಶ ನಗರ), ಮತ್ತು ಭಾವನಾ ಗೌಡ್ (ಪಾಲಂ). ಬಿಎಸ್ ಜೂನ್ (ಬಿಜ್ವಾಸನ್) ಸೇರಿದ್ದಾರೆ.
'Lost faith in you': 7 AAP MLAs resign days ahead of Delhi Polls citing "deviation from honest ideology"
— ANI Digital (@ani_digital) January 31, 2025
Read @ANI Story | https://t.co/5mkcjBV45C#AAP #ArvindKejriwal #DelhiAssemblyElections pic.twitter.com/conxpG9f6I
ಪಕ್ಷವನ್ನು ತೊರೆದಿರುವ ಏಳು ಶಾಸಕರೂ ಎಎಪಿ ಮತ್ತು ಕೇಜ್ರಿವಾಲ್ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಪಾಲಂ ಕ್ಷೇತ್ರದ ಭಾವನಾ ಗೌಡ್ ತಮ್ಮ ರಾಜೀನಾಮೆ ಪತ್ರದಲ್ಲಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಬಗ್ಗೆ ತಮ್ಮ ನಿರಾಶೆ ವ್ಯಕ್ತಪಡಿಸಿದ್ದು, "ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದೇನೆ" ಎಂದು ಬೇಸರಿಂದ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Delhi Election 2025: ದೆಹಲಿ ಚುನಾವಣೆ;ಬಿಜೆಪಿಯ ಮತ್ತೊಂದು ಪ್ರಣಾಳಿಕೆ ರಿಲೀಸ್- ಉಚಿತ ಶಿಕ್ಷಣ ಘೋಷಣೆ
ನರೇಶ್ ಯಾದವ್ ಈ ಹಿಂದೆ ಮೆಹ್ರೌಲಿ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. ಡಿಸೆಂಬರ್‌ನಲ್ಲಿ ಕುರಾನ್ ಅಪವಿತ್ರ ಪ್ರಕರಣದಲ್ಲಿ ಪಂಜಾಬ್ ನ್ಯಾಯಾಲಯದಿಂದ ಅವರು ದೋಷಿ ಎಂದು ಸಾಬೀತಾಗಿತ್ತು. ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ನರೇಶ್ ಈ ಬಾರಿಯ ಚುನಾವಣೆಗೆ ಪಕ್ಷವು ಟಿಕೆಟ್ ನೀಡುತ್ತದೆ ಎಂಬ ನಂಬಿಕೆಯಲ್ಲಿದ್ದರು. ಫೆಬ್ರವರಿ 5 ರಂದು ನಡೆಯಲಿರುವ ದೆಹಲಿ ಚುನಾವಣೆಗೆ ಎಎಪಿ ತನ್ನ ಐದನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದಾಗ, ನರೇಶ್ ಯಾದವ್ ಬದಲಿಗೆ ಮಹೇಂದರ್ ಚೌಧರಿ ಅವರನ್ನು ಎಎಪಿ ತನ್ನ ಮೆಹ್ರೌಲಿ ಅಭ್ಯರ್ಥಿಯಾಗಿ ಘೋಷಿಸಿತು. ಪಕ್ಷದ ಈ ನಡೆಯಿಂದ ನರೇಶ್ ಯಾದವ್ ತೀವ್ರ ಅಸಮಾಧಾನಗೊಂಡಿದ್ದರು.
ಟಿಕೆಟ್ ಸಿಗದ ಕಾರಣಕ್ಕೆ ಪಕ್ಷಕ್ಕೆ ಪತ್ರ ಬರೆದಿರುವ ನರೇಶ್ ಯಾದವ್, "ಆಮ್ ಆದ್ಮಿ ತನ್ನ ಪ್ರಾಮಾಣಿಕ ರಾಜಕೀಯ ಎಂಬ ಸ್ಥಾಪಕ ತತ್ವವನ್ನು ಕೈಬಿಟ್ಟಿದೆ. ಭ್ರಷ್ಟಾಚಾರವನ್ನು ಕಡಿಮೆ ಮಾಡುವ ಪ್ರತಿಜ್ಞೆಯನ್ನು ಈಡೇರಿಸುವ ಬದಲು ಪಕ್ಷವು ಭ್ರಷ್ಟಾಚಾರದಲ್ಲೇ ಮುಳುಗಿದೆ" ಎಂದು ಕಿಡಿಕಾರಿದ್ದಾರೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಹಲವಾರು ತಿಂಗಳುಗಳ ಕಾಲ ಜೈಲಿನಲ್ಲಿರಿಸಿದ್ದ ದೆಹಲಿ ಮದ್ಯ ನೀತಿ ಪ್ರಕರಣವನ್ನು ಪತ್ರದಲ್ಲಿ ಉಲ್ಲೇಖಿಸಿರುವ ನರೇಶದ ಜೈಲಿಗೆ ಹೋಗಿ ಬಂದವರೂ ಟಿಕೆಟ್ ಪಡೆದಿದ್ದಾರೆ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ.
ಇನ್ನು ಪಕ್ಷ ತೊರೆದಿರುವ 7 ಶಾಸಕರ ಪೈಕಿ ತ್ರಿಲೋಕಪುರಿ ಕ್ಷೇತ್ರದ ಶಾಸಕ ರೋಹಿತ್ ಕುಮಾರ್ ಮೆಹ್ರೌಲಿಯಾ ಮತ್ತು ಜನಕ್‌ಪುರಿ ಶಾಸಕ ರಾಜೇಶ್ ರಿಷಿ ಕೂಡ ಪಕ್ಷವನ್ನು ಟೀಕಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿ ವಿರುದ್ದ ಅಸಮಾಧಾನವನ್ನು ಹೊರ ಹಾಕಿದ್ದು,ಪಕ್ಷ ಭ್ರಷ್ಟಚಾರದ ಕೊಳಚೆ ಗುಂಡಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.