ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Maharashtra Politics: ಮತ್ತೆ ಒಂದಾದ್ರಾ ಠಾಕ್ರೆ ಬ್ರದರ್ಸ್‌? ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಸಂಚಲನ

ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿವಾದದ(Hindi imposition row) ನಡುವೆಯೇ, ಉದ್ಧವ್ ಠಾಕ್ರೆ ರಾಜ್ ಠಾಕ್ರೆ 'ಮಹಾರಾಷ್ಟ್ರದ ಸುಧಾರಣೆ'ಗಾಗಿ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ. ಪರಸ್ಪರ ಸೋದರ ಸಂಬಂಧಿಗಳಾದ ಈ ಇಬ್ಬರು ನಾಯಕರು ಜತೆಯಾಗಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕೇಂದ್ರಕ್ಕೆ ಠಕ್ಕರ್‌ ಕೊಡೋಕೆ ಠಾಕ್ರೆ ಬ್ರದರ್ಸ್‌ ರೆಡಿ?

Profile Rakshita Karkera Apr 19, 2025 4:56 PM

ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನವೊಂದು ಸೃಷ್ಟಿಯಾಗಿದ್ದು, ದಶಕಗಳ ಮುನಿಸು, ಭಿನ್ನಾಭಿಪ್ರಾಯ ಮರೆತು ಶಿವಸೇನಾ ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಮತ್ತೆ ಒಂದಾಗುವ(Maharashtra Politics) ಸುಳಿವು ಸಿಕ್ಕಿದೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿವಾದದ(Hindi imposition row) ನಡುವೆಯೇ, ಉದ್ಧವ್ ಠಾಕ್ರೆ ರಾಜ್ ಠಾಕ್ರೆ 'ಮಹಾರಾಷ್ಟ್ರದ ಸುಧಾರಣೆ'ಗಾಗಿ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ. ಪರಸ್ಪರ ಸೋದರ ಸಂಬಂಧಿಗಳಾದ ಈ ಇಬ್ಬರು ನಾಯಕರು ಜತೆಯಾಗಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಹಿರಿಯ ನಟ ಮಹೇಶ್ ಮಂಜ್ರೇಕರ್ ಅವರೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿದ ರಾಜ್‌ ಠಾಕ್ರೆ ಈ ಬಗ್ಗೆ ಮಾತನಾಡಿದ್ದು ಮರಾಠಿ ಗುರುತಿಗೆ ಧಕ್ಕೆಯನ್ನುಂಟು ಮಾಡುವ ಸಮಸ್ಯೆಗಳ ಎದುರು ಅವರ ವೈಯಕ್ತಿಕ ಭಿನ್ನಾಭಿಪ್ರಾಯಗಳು ಅಷ್ಟೊಂದು ಮಹತ್ವ ಪಡೆದಿಲ್ಲಎಂದರು. ಆ ಮೂಲಕ ರಾಜಕೀಯ ಬದಿಗಿಟ್ಟು ಮರಾಠಿಗರು ಒಗ್ಗಟ್ಟಾಗಬೇಕಿದೆ. "ನನಗೆ, ಮಹಾರಾಷ್ಟ್ರದ ಕಲ್ಯಾಣವು ಅತೀ ಮುಖ್ಯ ಮತ್ತು ಉಳಿದೆಲ್ಲವೂ ಅದರ ನಂತರ ಬರುತ್ತದೆ. ನಾನು ಸಣ್ಣ ಭಿನ್ನಾಭಿಪ್ರಾಯಗಳನ್ನು ನಿರ್ಲಕ್ಷಿಸಬಲ್ಲೆ ಮತ್ತು ಉದ್ಧವ್ ಅವರೊಂದಿಗೆ ಕೈ ಜೋಡಿಸಲು ಸಿದ್ಧನಿದ್ದೇನೆ. ಅವರು ಅದೇ ರೀತಿ ಮಾಡಲು ಸಿದ್ಧರಿದ್ದಾರೆಯೇ ಎಂಬುದು ಒಂದೇ ಪ್ರಶ್ನೆ ಎಂದಿದ್ದಾರೆ.

ರಾಜ್‌ ಠಾಕ್ರೆ ವಿಡಿಯೊ ಇಲ್ಲಿದೆ



ಈ ಸುದ್ದಿಯನ್ನೂ ಓದಿ: Raj Thackeray : ವಾಟ್ಸಾಪ್‌ನಲ್ಲಿ ಇತಿಹಾಸ ಓದಿ ತಿಳಿದುಕೊಳ್ಳಬೇಡಿ; ಔರಂಗಜೇಬ್ ಸಮಾಧಿ ವಿವಾದದ ಬಗ್ಗೆ ರಾಜ್ ಠಾಕ್ರೆ ಹೇಳಿಕೆ

ಉದ್ಧವ್‌ ಠಾಕ್ರೆ ಹೇಳಿದ್ದೇನು?

ಇನ್ನು ಈ ಬಗ್ಗೆ ಉದ್ಧವ್ ಠಾಕ್ರೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಮರಾಠಿ ಭಾಷೆ ಮತ್ತು ಮಹಾರಾಷ್ಟ್ರದ ಹಿತದೃಷ್ಟಿಯಿಂದ ನಾನು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಡಲು ಸಿದ್ಧನಿದ್ದೇನೆ. ನಾನು ಒಟ್ಟಿಗೆ ಕೆಲಸ ಮಾಡಲು ಮುಕ್ತನಾಗಿದ್ದೇನೆ, ಆದರೆ ಅವರು (ರಾಜ್) ಇನ್ನು ಮುಂದೆ ಮಹಾರಾಷ್ಟ್ರ ವಿರೋಧಿ ವ್ಯಕ್ತಿಗಳು ಮತ್ತು ಪಕ್ಷಗಳನ್ನು ಬೆಂಬಲಿಸಬಾರದು ಮತ್ತು ಅವರು ಛತ್ರಪತಿ ಶಿವಾಜಿ ಮಹಾರಾಜರ ಮುಂದೆ ಪ್ರಮಾಣ ಮಾಡಬೇಕು ಎಂದು ಹೇಳಿದರು.