ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪತಿ Vs ಪತ್ನಿ! ಮೇಘಾಲಯ ವಿಧಾನಸಭೆಯಲ್ಲಿ ಸಿಎಂ ಸಂಗ್ಮಾಗೆ ಪತ್ನಿಯಿಂದಲೇ ಪ್ರಶ್ನೆಗಳ ಸುರಿಮಳೆ

ಮೇಘಾಲಯ ವಿಧಾನಸಭೆಯಲ್ಲಿ ಅಪರೂಪದ ಘಟನೆ ನಡೆದಿದೆ. ಶಾಸಕಿ ಮೆಹ್ತಾಬ್ ಚಾಂದಿ ಎ. ಸಂಗ್ಮಾ ಅವರು ತಮ್ಮ ಪತಿಯಾಗಿರುವ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರನ್ನು ಪಶುಸಂಗೋಪನಾ ಯೋಜನೆಗಳ ವಿಳಂಬ ಕುರಿತು ಸದನದಲ್ಲೇ ಪ್ರಶ್ನಿಸಿದರು. 2022ರಲ್ಲಿ ಅನುಮೋದನೆಯಾದ ಪಶುವೈದ್ಯಕೀಯ ಕಾಲೇಜು, ಮೀನುಗಾರಿಕೆ ಮತ್ತು ಡೈರಿ ಕಾಲೇಜುಗಳ ಪ್ರಗತಿ ಬಗ್ಗೆ ಅವರು ಸ್ಪಷ್ಟನೆ ಕೇಳಿದರು.

ಪತಿ ವಿರುದ್ಧ ಪತ್ನಿ: ಸದನದಲ್ಲಿ ಸಿಎಂಗೆ ಪ್ರಶ್ನೆಗಳ

ಎನ್‌ಪಿಪಿ ಶಾಸಕಿ -

Profile
Sushmitha Jain Feb 26, 2026 3:17 PM

ಇಂಫಾಲ್‌: ಮೇಘಾಲಯ (Meghalaya) ವಿಧಾನಸಭೆಯಲ್ಲಿ ಬುಧವಾರ ಒಂದು ಅಪರೂಪದ ಮತ್ತು ಕುತೂಹಲಕಾರಿ ಘಟನೆ ನಡೆದಿದೆ. ಪತಿ-ಪತ್ನಿಯ ನಡುವಿನ ರಾಜಕೀಯ ಸಂವಾದವು ಸದನದ ಗಮನವನ್ನೇ ಸೆಳೆದಿದೆ. ಎನ್‌ಪಿಪಿ (NPP) ಶಾಸಕಿ ಮೆಹ್ತಾಬ್ ಚಾಂದಿ ಎ. ಸಂಗ್ಮಾ (Mehtab Chandee A Sangma) ಅವರು, ರಾಜ್ಯದ ಮುಖ್ಯಮಂತ್ರಿಯೂ ಆಗಿರುವ ತಮ್ಮ ಪತಿ ಕಾನ್ರಾಡ್ ಕೆ. ಸಂಗ್ಮಾ (Conrad K Sangma) ಅವರನ್ನು ಪಶುಸಂಗೋಪನಾ ಯೋಜನೆಗಳ ವಿಳಂಬದ ಬಗ್ಗೆ ಪ್ರಶ್ನಿಸುವ ಮೂಲಕ ಪೇಚಿಗೆ ಸಿಲುಕಿಸಿದ್ದಾರೆ.

ಹೌದು.. ಗ್ಯಾಂಬೆಗ್ರೆ ಕ್ಷೇತ್ರದ ಶಾಸಕಿಯಾಗಿರುವ ಮೆಹ್ತಾಬ್ ಅವರು, ಮೂರು ವರ್ಷಗಳ ಹಿಂದೆಯೇ ಸಂಪುಟದಿಂದ ಅನುಮೋದನೆಗೊಂಡಿದ್ದ ಪ್ರಮುಖ ಯೋಜನೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದಾರೆ. 2022ರಲ್ಲಿ ಮಂಜೂರಾದ ಪಶುವೈದ್ಯಕೀಯ ಕಾಲೇಜು, ಎರಡು ಮೀನುಗಾರಿಕೆ ಕಾಲೇಜುಗಳು ಮತ್ತು ಒಂದು ಡೈರಿ ಕಾಲೇಜಿನ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಅವರು ಸ್ಪಷ್ಟನೆ ಕೇಳಿದರು. ಅಲ್ಲದೆ, ರಾಜ್ಯದ ಪಶುವೈದ್ಯಕೀಯ ತರಬೇತಿ ಕೇಂದ್ರಗಳಲ್ಲಿನ ತೀವ್ರ ಸಿಬ್ಬಂದಿ ಕೊರತೆಯ ಬಗ್ಗೆಯೂ ಸರ್ಕಾರದ ಗಮನಕ್ಕೆ ತಂದಿದ್ದಾರೆ.

ಪತ್ನಿಯ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, "ರಾಜ್ಯದ ಬಹುಪಾಲು ಜನಸಂಖ್ಯೆಯು ಪಶುಸಂಗೋಪನೆಯನ್ನು ಅವಲಂಬಿಸಿರುವುದರಿಂದ ಈ ಕಾಲೇಜುಗಳ ಸ್ಥಾಪನೆ ಅತ್ಯಂತ ತುರ್ತು ಅಗತ್ಯವಾಗಿದೆ," ಎಂದು ಹೇಳಿದರು. ಸಿಬ್ಬಂದಿ ಕೊರತೆಯ ಬಗ್ಗೆಯೂ ಕಾಳಜಿ ವ್ಯಕ್ತಪಡಿಸಿದ ಅವರು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಭಾರತೀಯ ಉಡುಪು ತೊಟ್ಟು ಮಿಂಚಿದ ಇಸ್ರೇಲ್ ಪ್ರಧಾನಿ ನೆತನ್ಯಾಹು; ಮೋದಿ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ

ಯೋಜನಾ ವರದಿಗಳ (DPR) ವಿಳಂಬದ ಬಗ್ಗೆ ವಿವರಿಸಿದ ಅವರು, ಭೂಮಿ ಗುರುತಿಸುವಿಕೆ ಮತ್ತು ಮಾನವಶಕ್ತಿಯ ಅಂದಾಜು ಪ್ರಕ್ರಿಯೆಯಿಂದಾಗಿ ಸಮಯ ಹಿಡಿದಿದೆ ಎಂದರು. ರಿ-ಭೋಯ್ ಜಿಲ್ಲೆಯ ಕಿರ್ಡೆಮ್‌ಕುಲಾಯ್‌ನಲ್ಲಿ ಪಶುವೈದ್ಯಕೀಯ ಕಾಲೇಜಿಗಾಗಿ 800 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಈ ಯೋಜನೆಗೆ ಸುಮಾರು 334 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಹಣಕಾಸಿನ ಸವಾಲುಗಳ ಹೊರತಾಗಿಯೂ ಪ್ರಕ್ರಿಯೆಯನ್ನು ವೇಗಗೊಳಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ನಡೆದ ಈ ಪತಿ-ಪತ್ನಿಯರ ಸಾರ್ವಜನಿಕ ಚರ್ಚೆಯು ಪಶುಸಂಗೋಪನಾ ಶಿಕ್ಷಣ ಮತ್ತು ಗ್ರಾಮೀಣ ಉದ್ಯೋಗದ ಮಹತ್ವವನ್ನು ಎತ್ತಿ ತೋರಿಸಿದ್ದಲ್ಲದೆ, ಮೇಘಾಲಯದ ರಾಜಕೀಯ ಇತಿಹಾಸದಲ್ಲಿ ಒಂದು ವಿಶೇಷ ಘಟನೆಯಾಗಿ ದಾಖಲಾಯಿತು.