ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಿರಿಯ ನಾಗರಿಕರಿಗೆ ಜನ್ಮದಿನ ಸಮರ್ಪಿಸಲು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ನಿರ್ಧಾರ

Laxmi Hebbalkar: ಫೆ.14ರಂದು ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಜನ್ಮ ದಿನಾಚರಣೆ. ಹಿರಿಯ ನಾಗರಿಕರನ್ನು ಗೌರವಿಸುವ ಮೂಲಕ ಜನ್ಮ ದಿನ ಆಚರಿಸಿಕೊಳ್ಳಲು ಮಾಡಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ಧರಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಹಿರಿಯ ನಾಗರಿಕರಿಗೆ ಜನ್ಮದಿನ ಸಮರ್ಪಿಸಲು ಹೆಬ್ಬಾಳಕರ್ ನಿರ್ಧಾರ

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (ಸಂಗ್ರಹ ಚಿತ್ರ) -

Profile
Siddalinga Swamy Feb 13, 2026 10:17 PM

ಬೆಂಗಳೂರು, ಫೆ.13: ಫೆ.14ರಂದು ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಅವರ ಜನ್ಮ ದಿನಾಚರಣೆ. ಹೀಗಾಗಿ ಹಿರಿಯ ನಾಗರಿಕರನ್ನು ಗೌರವಿಸುವ ಮೂಲಕ ಜನ್ಮ ದಿನಾಚರಣೆ ಮಾಡಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ಧರಿಸಿದ್ದಾರೆ. ಸಾಮಾನ್ಯವಾಗಿ ಜನ್ಮದಿನವೆಂದರೆ ಕೇಕ್, ಹೂಗುಚ್ಛಗಳು, ಶುಭಾಶಯಗಳ ನಡುವೆ ನಡೆಯುವ ವೈಯಕ್ತಿಕ ಆಚರಣೆ. ಆದರೆ ಇದಕ್ಕೆ ವಿಭಿನ್ನ ಅರ್ಥ ನೀಡುವ ಮೂಲಕ ಮಾನವೀಯ ಮೌಲ್ಯಗಳಿಗೆ ಹೊಸ ಅರ್ಥ ಕೊಟ್ಟಿದ್ದಾರೆ.

ತಮ್ಮ ಜನ್ಮದಿನವನ್ನು ವೈಯಕ್ತಿಕ ಸಂಭ್ರಮವನ್ನಾಗಿ ಆಚರಿಸದೆ, ಹಿರಿಯ ನಾಗರಿಕರಿಗೆ ಸಮರ್ಪಿಸುವ ಮೂಲಕ ಅವರು ಸಮಾಜಮುಖಿ ನಾಯಕತ್ವದ ವಿಶಿಷ್ಟ ಮಾದರಿಯನ್ನು ನಿರ್ಮಿಸಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರೊಂದಿಗೆ ಸಮಯ ಕಳೆಯುವುದು, ಅವರ ಸಮಸ್ಯೆಗಳನ್ನು ಆಲಿಸುವುದು, ಗೌರವ ಸಲ್ಲಿಸುವುದು ಹಾಗೂ ಆಶೀರ್ವಾದ ಪಡೆಯುವುದು ಮುಖ್ಯ ಉದ್ದೇಶ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿರಿಯರು ಹೊಸ ಜೀವನೋತ್ಸಾಹದಿಂದ ಮರಳಬೇಕು ಎನ್ನುವುದು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಯಕೆ. ಇದು ಅವರ ಜೀವನದಲ್ಲಿ ಮರೆಯಲಾಗದ ದಿನವಾಗಬೇಕು ಎನ್ನುತ್ತಾರೆ ಅವರು.

ಸಾಮಾಜಿಕ ಜೀವನದಲ್ಲಿ ಹಿರಿಯ ನಾಗರಿಕರು ಜ್ಞಾನ, ಅನುಭವ ಮತ್ತು ಸಂಸ್ಕಾರದ ಜೀವಂತ ಭಂಡಾರವಾಗಿದ್ದಾರೆ. ಇಂತಹವರನ್ನು ಗೌರವಿಸುವುದೇ ನಿಜವಾದ ಸಂಸ್ಕೃತಿ ಎಂಬ ಸಂದೇಶವನ್ನು ಈ ಕಾರ್ಯಕ್ರಮ ಸಾರಲಿದೆ. ರಾಜಕೀಯ ವೇದಿಕೆಯಲ್ಲಿ ಸಾಮಾನ್ಯವಾಗಿ ಕಾಣದ ಈ ರೀತಿಯ ಕಾರ್ಯಕ್ರಮ ಇತಿಹಾಸದಲ್ಲೇ ಅಪರೂಪವೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಜನಸೇವೆ, ಜನಸಂಪರ್ಕ ಮತ್ತು ಜನವಿಶ್ವಾಸ ಎಂಬ ತ್ರಿವೇಣಿ ಸಂಗಮದಂತೆ ಕಾರ್ಯನಿರ್ವಹಿಸುತ್ತಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಈ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಿಂದ ಹಿಡಿದು ಸಾರ್ವಜನಿಕ ವಲಯಗಳವರೆಗೆ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಜನಪ್ರತಿನಿಧಿಯೊಬ್ಬರು ಜನರ ಪ್ರೀತಿಯನ್ನು ಹೇಗೆ ಗೌರವಿಸಬೇಕು ಎಂಬುದಕ್ಕೆ ಇದು ಜೀವಂತ ಉದಾಹರಣೆ ಎನ್ನಲಾಗುತ್ತಿದೆ.

Laxmi Hebbalkar: ವಾರಾಹಿ ನೀರಾವರಿ ಯೋಜನೆ ಸಮಸ್ಯೆ ಶೀಘ್ರವೇ ಇತ್ಯರ್ಥ: ಲಕ್ಷ್ಮಿ ಹೆಬ್ಬಾಳ್ಕರ್

ಒಟ್ಟಾರೆ, ಜನ್ಮದಿನವನ್ನು ಸ್ವಂತ ಸಂಭ್ರಮದಿಂದ ಹೊರತೆಗೆದು ಸಮಾಜದ ಹಿರಿಯರಿಗೆ ಅರ್ಪಿಸಿದ ಈ ಹೆಜ್ಜೆ ಕೇವಲ ಕಾರ್ಯಕ್ರಮವಲ್ಲ - ಅದು ಮೌಲ್ಯಗಳ ಘೋಷಣೆ, ಸೇವಾಭಾವದ ಸಂಕೇತ ಮತ್ತು ಸಮಾಜಕ್ಕೆ ದಾರಿದೀಪವಾಗಿದೆ.