ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿಲ್ಲ: ಬಿಜೆಪಿ ಶಾಸಕ ಚಂದ್ರು ಲಮಾಣಿ
MLA Chandru Lamani: ಅಡ್ಡ ಮತದಾನ ಮಾಡಿದವರು ಎಂದು ತಮ್ಮ ಹೆಸರನ್ನು ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದ್ದು, ಮುಜುಗರಕ್ಕೆ ಒಳಗಾಗಿದ್ದೇನೆ. ಮತದಾನ ಸಂಬಂಧ ವಿಪ್ ಜಾರಿ ಮಾಡಲಾಗಿತ್ತು. ನಮಗೆ ನಿಗದಿ ಮಾಡಿದ್ದ ಎನ್‍ಡಿಎ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದೇನೆ. ಮಾಧ್ಯಮಗಳು ಅನಗತ್ಯವಾಗಿ ಹೆಸರನ್ನು ಪ್ರಸಾರ ಮಾಡಬಾರದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದ್ದಾರೆ.
ಶಾಸಕ ಡಾ. ಚಂದ್ರು ಲಮಾಣಿ (ಸಂಗ್ರಹ ಚಿತ್ರ). -
ಬೆಂಗಳೂರು, ಜೂ.19: ಅಡ್ಡ ಮತದಾನ ಮಾಡಿದವರು ಎಂದು ತಮ್ಮ ಹೆಸರನ್ನು ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದ್ದು, ಮುಜುಗರಕ್ಕೆ ಒಳಗಾಗಿದ್ದೇನೆ ಎಂದು ಶಾಸಕ ಡಾ. ಚಂದ್ರು ಲಮಾಣಿ (MLA Chandru Lamani) ಹೇಳಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಮತದಾನ ಸಂಬಂಧ ವಿಪ್ ಜಾರಿ ಮಾಡಲಾಗಿತ್ತು. ನಮಗೆ ನಿಗದಿ ಮಾಡಿದ್ದ ಎನ್‍ಡಿಎ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದೇನೆ. ಮಾಧ್ಯಮಗಳು ಅನಗತ್ಯವಾಗಿ ಹೆಸರನ್ನು ಪ್ರಸಾರ ಮಾಡಬಾರದು. ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂದು ಪಕ್ಷದ ವತಿಯಿಂದ ಪ್ರಕಟಿಸಲಾಗುತ್ತದೆ. ಮೊದಲ ಬಾರಿಗೆ ಶಾಸಕರಾಗಿದ್ದು, ಅಡ್ಡ ಮತದಾನ ಮಾಡಿದವರು ನಾನೇ ಎಂದು ಪ್ರಸಾರವಾಗುತ್ತಿರುವುದರಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.
ಕೆಲವರ ಹೆಸರು ತೇಲಿಬಿಟ್ಟು ಕಾಂಗ್ರೆಸ್ ಕುತಂತ್ರ; ಅಡ್ಡ ಮತದಾನ ಮಾಡಿದವರ ಪತ್ತೆಗೆ ಸಮಿತಿ ರಚನೆ ಎಂದ ಬಿ.ವೈ. ವಿಜಯೇಂದ್ರ
ಸುಳ್ಳು ಹೆಸರು ಪ್ರಚಾರ ಮಾಡಬೇಡಿ: ಕೃಷ್ಣ ನಾಯಕ್
ಶಾಸಕನಾಗಿ ನನ್ನದೇ ಕನಸುಗಳಿವೆ. ಕ್ಷೇತ್ರದ ಮತದಾರರು ಬಹಳ ನಿರೀಕ್ಷೆ ಇಟ್ಟುಕೊಂಡು ಗೆಲ್ಲಿಸಿದ್ದಾರೆ. ನಾನು ಅಡ್ಡ ಮತದಾನ ಮಾಡಿದ್ದೇನೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಇದು ಸುಳ್ಳು, ಇಂತಹ ಸುಳ್ಳು ಪ್ರಚಾರವನ್ನು ಮಾಧ್ಯಮಗಳು ಮಾಡಬಾರದು ಎಂದು ಶಾಸಕ ಕೃಷ್ಣ ನಾಯಕ್ ಅವರು ಮನವಿ ಮಾಡಿದರು.