ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಏಕ್ ಚುಟ್ಕಿ ಸಿಂಧೂರ್ ಕಿ ಕಿಮತ್ ಆಪ್ ಕ್ಯಾ ಜನೋ ಜಯಾ ಮೇಡಂ.. ಜಯಾ ಬಚ್ಚನ್‌ಗೆ ರೇಖಾ ಗುಪ್ತಾ ತರಾಟೆ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಗೆ ಆಪರೇಷನ್ ಸಿಂದೂರ್ ಎಂದು ಹೆಸರಿಟ್ಟಿದ್ದನ್ನು ಬಾಲಿವುಡ್ ನಟಿ ಮತ್ತು ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಪ್ರಶ್ನಿಸಿದ್ದು, ಅವರನ್ನು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ತರಾಟೆಗೆ ತೆಗೆದುಕೊಂಡರು.

ಬಾಲಿವುಡ್‌ ಸಿನಿಮಾ ಡೈಲಾಗ್‌ ಮೂಲಕ ಜಯಾ ಬಚ್ಚನ್‌ಗೆ ಟಾಂಗ್‌!

ನವದೆಹಲಿ: ಕಾಶ್ಮೀರದ (kashmir) ಪಹಲ್ಗಾಮ್ (pahalgam) ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ಆಪರೇಷನ್ ಸಿಂದೂರ್ (Operation Sindoor) ಹೆಸರಿಟ್ಟಿರುವ ಬಗ್ಗೆ ಪ್ರಶ್ನಿಸಿದ ಸಂಸದೆ ( Rajya Sabha MP) ಜಯಾ ಬಚ್ಚನ್ (Jaya Bachchan) ಅವರನ್ನು ದೆಹಲಿ ಮುಖ್ಯಮಂತ್ರಿ (Delhi Chief Minister) ರೇಖಾ ಗುಪ್ತಾ (Rekha Gupta ) ಅವರು ತರಾಟೆಗೆ ತೆಗೆದುಕೊಂಡು ಟೀಕಿಸಿದರು. ದೆಹಲಿ ವಿಧಾನಸಭೆಯಲ್ಲಿ (Delhi Legislative Assembly) ಸೋಮವಾರ ಆಪರೇಷನ್ ಸಿಂದೂರ್ ಮತ್ತು ಆಪರೇಷನ್ ಮಹಾದೇವ್ ಕಾರ್ಯಾಚರಣೆಯ ಬಗ್ಗೆ ನಡೆದ ಚರ್ಚೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಗೆ ಆಪರೇಷನ್ ಸಿಂದೂರ್ ಎಂದು ಹೆಸರಿಟ್ಟಿದ್ದನ್ನು ಬಾಲಿವುಡ್ ನಟಿ ಮತ್ತು ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಪ್ರಶ್ನಿಸಿದ್ದರು.

ಪಹಲ್ಗಾಮ್ ಭಯೋತ್ಪಾದಕ ದಾಳಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿದೊಡ್ಡ ಭಯೋತ್ಪಾದಕ ದಾಳಿಯು ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದಿತ್ತು. ಇದರಲ್ಲಿ ವಿದೇಶಿ ಪ್ರವಾಸಿಗರು ಸೇರಿದಂತೆ ಸುಮಾರು 26 ಮಂದಿ ಸಾವನ್ನಪ್ಪಿದ್ದರು. ಈ ದಾಳಿಯ ಹೊಣೆಯನ್ನು ಲಷ್ಕರ್‌ ಬೆಂಬಲಿತ ಸಂಘಟನೆ ಟಿಆರ್‌ಎಫ್ ಹೊತ್ತುಕೊಂಡಿದೆ.

ಜಯಾ ಬಚ್ಚನ್ ಹೇಳಿದ್ದೇನು?

ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಬಗ್ಗೆ ಪ್ರಶ್ನಿಸಿದ ಜಯಾ, ನೀವು ನೇಮಿಸಿಕೊಂಡ ಬರಹಗಾರರಿಗೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ನೀವು ದೊಡ್ಡ ಹೆಸರುಗಳನ್ನು ನೀಡುತ್ತೀರಿ. ಆದರೆ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ನಡೆಸಿದ ಕಾರ್ಯಾಚರಣೆಗೆ ಸಿಂದೂರ್ ಎಂದು ಏಕೆ ಹೆಸರಿಟ್ಟಿದ್ದೀರಿ? ಈ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟವರ ಪತ್ನಿಯರ ಸಿಂದೂರ ನಾಶವಾಗಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಯಾಗಿ ಮಾತನಾಡಿದ ಮುಖ್ಯಮಂತ್ರಿ ರೇಖಾ ಗುಪ್ತಾ, ಆಪರೇಷನ್‌ಗೆ ಸಿಂದೂರ್ ಎಂದು ಏಕೆ ಹೆಸರಿಡಲಾಗಿದೆ ಎಂದು ಜಯಾ ಅವರಿಗೆ ನಾನು ಚಲನಚಿತ್ರ ಸಂಭಾಷಣೆಯೊಂದಿಗೆ ಉತ್ತರಿಸುತ್ತೇನೆ ಎಂದರು.

ಏಕ್ ಚುಟ್ಕಿ ಸಿಂಧೂರ್ ಕಿ ಕಿಮತ್ ಆಪ್ ಕ್ಯಾ ಜನೋ ಜಯಾ ಮೇಡಂ? ಆಪ್ ತೋ ಫಿಲ್ಮೋಂ ಕಿ ದುನ್ಯಾ ಜಾನ್ತಿ ತಿ ಹೈ, ದೇಶ್ ಕಿ ಸಚ್ಚೈ ನಹಿ.. (ಒಂದು ಚಿಟಿಕೆ ಕುಂಕುಮದ ಮೌಲ್ಯ ನಿಮಗೆ ಗೊತ್ತಿದೆಯೇ ಜಯಾ ಮೇಡಂ. ನಿಮಗೆ ಚಲನಚಿತ್ರಗಳ ಬಗ್ಗೆ ತಿಳಿದಿದೆ, ದೇಶದ ವಾಸ್ತವತೆಯ ಬಗ್ಗೆ ಅಲ್ಲ.) ಎಂದರು.



ವಿರೋಧ ಪಕ್ಷಗಳ ಮೇಲೆ ತೀವ್ರ ದಾಳಿ ನಡೆಸಿದ ಅವರು, ಅವರು ದೇಶ ವಿರೋಧಿ ಶಕ್ತಿಗಳನ್ನು ಬೆಂಬಲಿಸುತ್ತಾರೆ ಮತ್ತು ದೇಶವನ್ನು ಪ್ರೀತಿಸುವುದಿಲ್ಲ ಎಂದು ಆರೋಪಿಸಿದರು. ಈ ಜನರು ಭಾರತವನ್ನು ಪ್ರೀತಿಸುವುದಿಲ್ಲ. ಆದರೆ ರಾಷ್ಟ್ರ ವಿರೋಧಿ ಶಕ್ತಿಗಳನ್ನು ಪ್ರೀತಿಸುತ್ತಾರೆ. ಯಾಕೆಂದರೆ ಅವರು ಅವರಲ್ಲಿ ತಮ್ಮದೇ ಆದ ಪ್ರತಿಬಿಂಬವನ್ನು ನೋಡುತ್ತಾರೆ. ಅವರು ತಮ್ಮನ್ನು 'ಭಾರತ' ಎಂದು ಕರೆದುಕೊಳ್ಳುತ್ತಾರೆ, ಆದರೆ ಅವರು ಮಾತನಾಡುವಾಗ, ಅವರು ಪಾಕಿಸ್ತಾನದ ವಕ್ತಾರರಂತೆ ಭಾಸವಾಗುತ್ತದೆ ಎಂದು ದೂರಿದರು.

ಲೋಕಸಭೆಯಲ್ಲಿಯೂ ಸಹ ವಿರೋಧ ಪಕ್ಷದ ಸದಸ್ಯರು ಆಪರೇಷನ್ ಸಿಂಧೂರ್‌ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ. ಅವರು ತಮ್ಮದೇ ಆದ ಸೈನ್ಯವನ್ನು, ತಮ್ಮದೇ ಆದ ಪ್ರಧಾನಿಯನ್ನು ನಂಬುವುದಿಲ್ಲ, ಆದರೆ ಅವರು ವಿದೇಶಗಳನ್ನು ನಂಬುತ್ತಾರೆ ಎಂದು ಆರೋಪಿಸಿದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಎನಂತರದ ಮಿಲಿಟರಿ ಪ್ರತಿಕ್ರಿಯೆಯ ಯಶಸ್ಸಿಗೆ ಗುಪ್ತಾ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದರು. ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಅನಂತರ ಆಪರೇಷನ್ ಸಿಂದೂರ್ ಪಾಕಿಸ್ತಾನಕ್ಕೆ ಸೂಕ್ತವಾದ ಉತ್ತರವಾಗಿತ್ತು. ಅಲ್ಲಿ ಅನೇಕ ಮಹಿಳೆಯರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡರು. ನಮ್ಮ ಸಹೋದರಿಯರ ಘನತೆಯನ್ನು ರಕ್ಷಿಸುವಲ್ಲಿ ಪ್ರಧಾನಿ ಮೋದಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: IND vs ENG: ಭಾರತ ಗೆಲುವಿಗೆ ಗವಾಸ್ಕರ್‌ 'ಲಕ್ಕಿ ಜಾಕೆಟ್‌' ಕಾರಣ!

ಸಶಸ್ತ್ರ ಪಡೆಗಳ ಧೈರ್ಯ ಮತ್ತು ಬದ್ಧತೆಗೆ ಗೌರವ ಸಲ್ಲಿಸಿದ ಅವರು, ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ, ಭಾರತವು ಧೈರ್ಯಶಾಲಿ ತಂದೆ, ಕರುಣಾಳು ಸಹೋದರ ಮತ್ತು ದೃಢನಿಶ್ಚಯದ ರಾಷ್ಟ್ರೀಯ ನಾಯಕನನ್ನು ಕಂಡುಕೊಂಡಿದೆ ಎಂದು ತಿಳಿಸಿದರು.