ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi: ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

PM Modi in Srisailam Temple: ಪ್ರಧಾನಿ ನರೇಂದ್ರ ಮೋದಿ ಆಂಧ್ರಪ್ರದೇಶ ಪ್ರವಾಸ ಕೈಗೊಂಡಿದ್ದು, ನಂದ್ಯಾಲ್ ಜಿಲ್ಲೆಯ ಶ್ರೀಶೈಲಂನಲ್ಲಿರುವ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ವರ್ಲ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಹಸುವಿನ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯ ಪವಿತ್ರ ಮಿಶ್ರಣವಾದ ಪಂಚಾಮೃತ ಬಳಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ದೇವಾಲಯದಲ್ಲಿ ಧ್ಯಾನ ಮಾಡುವುದರ ಜೊತೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಶ್ರೀಶೈಲಂ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ

ಪ್ರಧಾನಮಂತ್ರಿ ನರೇಂದ್ರ ಮೋದಿ -

Profile Sushmitha Jain Oct 16, 2025 5:21 PM

ಶ್ರೀಶೈಲಂ: ಆಂಧ್ರಪ್ರದೇಶದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ಗುರುವಾರ ಪ್ರಧಾನಮಂತ್ರಿ(Prime Minister) ನರೇಂದ್ರ ಮೋದಿ(Narendra Modi)ಯವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದು ಈ ಪ್ರಸಿದ್ಧ ದೇವಾಲಯಕ್ಕೆ ಮೋದಿಯವರ ಮೊದಲ ಭೇಟಿಯಾಗಿದ್ದು, ಅರ್ಚಕರು ಹಾಗೂ ದೇವಾಲಯದ ಆಡಳಿತ ಮಂಡಳಿಯವರು ಅವರನ್ನು ಶಾಸ್ತ್ರೋಕ್ತವಾಗಿ ಸ್ವಾಗತಿಸಿದ್ದಾರೆ.

ಬಳಿಕ ಮೋದಿ ಅವರು ಶ್ರೀ ಭ್ರಮರಾಂಬಾ ಮಲ್ಲಿಕಾರ್ಜುನ ಸ್ವಾಮಿ ವರ್ಳ ದೇವಸ್ಥಾನದಲ್ಲಿ ದೇವಿ ಭ್ರಮರಾಂಬಾ(Bhramaramba Devi) ಮತ್ತು ಮಲ್ಲಿಕಾರ್ಜುನ ಸ್ವಾಮಿ(Mallikarjuna Swamy)ಗೆ ಪೂಜೆ ಸಲ್ಲಿಸಿದರು. ಈ ವೇಳ ಪ್ರಧಾನಿ ಮೋದಿಯವರೊಂದಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು(N Chandrababu Naidu) ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್(Pawan Kalyan) ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ: Viral News: ಹೆಂಡತಿಗೆ ಮುತ್ತಿಡಲು ಅಡ್ಡವಾದ ಮೂಗು..! ಅದಕ್ಕೆ ಆ ವ್ಯಕ್ತಿ ಮಾಡಿದ್ದೇನು ಗೊತ್ತಾ..?

ಶ್ರೀಶೈಲಂ ದೇವಾಲಯದ ಭೇಟಿಯ ವೇಳೆ, ಮೋದಿ ಅವರು ಮಲ್ಲಿಕಾರ್ಜುನ ಸ್ವಾಮಿಗೆ ಹಸುವಿನ ಹಾಲು, ತುಪ್ಪ, ಮೊಸರು, ಜೇನುತುಪ್ಪ ಮತ್ತು ಸಕ್ಕರೆಯ ಪವಿತ್ರ ಪಂಚಾಮೃತಗಳಿಂದ ರುದ್ರಾಭಿಷೇಕ ಮಾಡಿದರು. ಸಕಲ ಪೂಜಾ ವಿಧಿಗಳನ್ನು ಪೂರ್ಣಗೊಳಿಸಿದ ಬಳಿಕ, ಅವರು ಶ್ರೀ ಶಿವಾಜಿ ಸ್ಪೂರ್ತಿ ಕೇಂದ್ರಕ್ಕೆ ಭೇಟಿ ನೀಡಿದರು. ಇದು ಛತ್ರಪತಿ ಶಿವಾಜಿ ಮಹಾರಾಜರ ಶ್ರೀಶೈಲಂ ದೈವಿಕ ಬಾಂಧವ್ಯದ ಸ್ಮರಣಾರ್ಥವಾಗಿ ನಿರ್ಮಿಸಲಾಗಿರುವ ಧ್ಯಾನ ಮತ್ತು ಸ್ಮಾರಕ ಕೇಂದ್ರವಾಗಿದೆ.

ಈ ದೇವಾಲಯವು ಭಾರತದಲ್ಲಿನ ಅತ್ಯಂತ ಪವಿತ್ರ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದ್ದು, ಶಿವನಿಗೆ ಸಮರ್ಪಿತವಾದ ಹನ್ನೆರಡು ಜ್ಯೋತಿರ್ಲಿಂಗ(Jyotirlinga)ಗಳಲ್ಲಿ ಒಂದಾಗಿದೆ. ಅಲ್ಲದೇ ದೇವಿ ಪಾರ್ವತಿಗೆ ಮೀಸಲಾದ 52 ಶಕ್ತಿಪೀಠ(Shakti Peetha)ಗಳಲ್ಲಿ ಒಂದಾಗಿದೆ. ಇಲ್ಲಿ ಶಿವನನ್ನು 'ಮಲ್ಲಿಕಾರ್ಜುನ ಸ್ವಾಮಿ' ಎಂತಲೂ ಹಾಗೂ ಪಾರ್ವತಿಯನ್ನು 'ಭ್ರಮರಾಂಭ' ಎಂತಲೂ ಪೂಜಿಸಲಾಗುತ್ತದೆ. ಒಂದೇ ದೇವಾಲಯದ ಸಂಕೀರ್ಣದೊಳಗೆ ಜ್ಯೋತಿರ್ಲಿಂಗ ಮತ್ತು ಶಕ್ತಿಪೀಠಗಳೆರಡು ಇರುವುದು ಈ ದೇವಾಲದ ವಿಶೇಷವಾಗಿದೆ.

ಇನ್ನು ಪ್ರಧಾನಿ ಮೋದಿಯವರ ಈ ದೇವಾಲಯ ಭೇಟಿಯು, ಆಂಧ್ರಪ್ರದೇಶದ ಕರ್ನೂಲ್‌(Kurnool) ಪ್ರವಾಸದ ಒಂದು ಭಾಗವಾಗಿತ್ತು. ಈ ಸಂದರ್ಭದಲ್ಲಿ ಅವರು ಮೂಲಸೌಕರ್ಯ, ವಿದ್ಯುತ್ ಸೇರಿದಂತೆ ₹13,430 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಭೂಮಿಪೂಜೆ ನೆರವೇರಿಸಿದರು.