ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಸ್ಸಾಂ 'ಶೂಟಿಂಗ್' ವಿಡಿಯೊ ವಿವಾದ: ದ್ವೇಷ ಪ್ರಚೋದನೆ ಆರೋಪದಡಿ ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ FIR

ಅಸ್ಸಾಂನಲ್ಲಿ ನಡೆದ ‘ಶೂಟಿಂಗ್’ ವಿಡಿಯೊ ಸಂಬಂಧ ವಿವಾದ ಉಂಟಾಗಿದ್ದು, ಅದನ್ನು ಶೇರ್‌ ಮಾಡಿ ದ್ವೇಷ ಪ್ರಚೋದನೆಗೆ ಕಾರಣವಾದ ಆರೋಪದಡಿ ಕರ್ನಾಟಕದಲ್ಲಿ ಇಬ್ಬರ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ. ಫೆಬ್ರವರಿ 12ರಂದು ಉದ್ಯಮಿ ರಂಜಿತ್ ಕುಮಾರ್ ಆರ್. ನೀಡಿದ ದೂರಿನ ಮೇರೆಗೆ ಬೆಂಗಳೂರಿನಲ್ಲಿ ಈ ಪ್ರಕರಣ ದಾಖಲಾಗಿದೆ.

ವಿವಾದಿತ ‘ಶೂಟಿಂಗ್’ ವಿಡಿಯೊ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ -

Profile
Sushmitha Jain Feb 18, 2026 5:20 PM

ಬೆಂಗಳೂರು, ಫೆ. 18: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ಮುಸ್ಲಿಂ ಸಮುದಾಯವನ್ನು ಹೋಲುವ ವ್ಯಕ್ತಿಗಳ ಮೇಲೆ ಗುಂಡು ಹಾರಿಸುವಂತೆ ಬಿಂಬಿಸುವ AI (ಕೃತಕ ಬುದ್ಧಿಮತ್ತೆ) ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಅಸ್ಸಾಂ (Assam) ಬಿಜೆಪಿ (BJP) ಘಟಕದ ಇಬ್ಬರು ಪದಾಧಿಕಾರಿಗಳ ವಿರುದ್ಧ ಬೆಂಗಳೂರು (Bengaluru) ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ಫೆಬ್ರವರಿ 12ರಂದು ಉದ್ಯಮಿ ರಂಜಿತ್ ಕುಮಾರ್ ಆರ್. ನೀಡಿದ ದೂರಿನ ಮೇರೆಗೆ ಬೆಂಗಳೂರಿನಲ್ಲಿ ಈ ಪ್ರಕರಣ ದಾಖಲಾಗಿದೆ. ಅಸ್ಸಾಂ ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ "ಪಾಯಿಂಟ್ ಬ್ಲಾಂಕ್ ಶಾಟ್..." ಎಂಬ ಶೀರ್ಷಿಕೆಯಡಿ ಈ ವಿಡಿಯೊ ಹಂಚಿಕೊಳ್ಳಲಾಗಿತ್ತು. ಇದು ಅತ್ಯಂತ ಆಕ್ಷೇಪಾರ್ಹ ಮತ್ತು ಸಮಾಜದ ಶಾಂತಿ ಕದಡುವಂತಿದೆ ಎಂದು ದೂರುದಾರರು ತಿಳಿಸಿದ್ದಾರೆ.

ಈ ಸಂಬಂಧ ಅಸ್ಸಾಂ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ಬಿಸ್ವಜಿತ್ ಖೌಂಡ್ ಹಾಗೂ ಸಂಹ ಸಂಚಾಲಕ ರೋನ್ ಬಿಕಾಶ್ ಗೌರವ್ ವಿರುದ್ಧ ಪ್ರಕರಣ ದಾಖಲಾಗಿದೆ.

ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಮಹಿಳೆಯ ಮೇಲೆ ಬೀದಿನಾಯಿಗಳ ಏಕಾಏಕಿ ದಾಳಿ; ಭಯಾನಕ ವಿಡಿಯೊ ವೈರಲ್!

ವಿಡಿಯೊದಲ್ಲೇನಿತ್ತು?

FIRನಲ್ಲಿ ಉಲ್ಲೇಖಿಸಿರುವಂತೆ, ವಿಡಿಯೊದಲ್ಲಿ ಮುಖ್ಯಮಂತ್ರಿ ಶರ್ಮಾ ಮುಸ್ಲಿಮರು ಧರಿಸುವ ಉಡುಪನ್ನು ಹೋಲುವ ಬಟ್ಟೆ ತೊಟ್ಟ ವ್ಯಕ್ತಿಗಳ ಮೇಲೆ ಗನ್‌ನಂತಹ ಆಯುಧದಿಂದ ಗುಂಡು ಹಾರಿಸುವಂತೆ ತೋರಿಸಲಾಗಿದೆ. ವಿಡಿಯೊದ ಕೊನೆಯಲ್ಲಿ ಶರ್ಮಾ ಕೌಬಾಯ್ ಉಡುಪಿನಲ್ಲಿ ಗನ್ ಹಿಡಿದಿರುವ ಚಿತ್ರವಿದ್ದು, ಅದರಲ್ಲಿ ಈ ಕೆಳಗಿನ ಪ್ರಚೋದನಾಕಾರಿ ವಾಕ್ಯಗಳನ್ನು ಬಳಸಲಾಗಿತ್ತು:

"ಬಾಂಗ್ಲಾದೇಶಿಗಳ ಮೇಲೆ ಯಾವುದೇ ಕರುಣೆ ಇಲ್ಲ" (No mercy to Bangladeshis), "ನೀವು ಪಾಕಿಸ್ತಾನಕ್ಕೆ ಏಕೆ ಹೋಗಿದ್ದೀರಿ?" (Why did you go to Pakistan?), "ವಿದೇಶಿ ಮುಕ್ತ ಅಸ್ಸಾಂ" (Foreigner-free Assam) ಎಂದು ಬರೆಯಲಾಗಿತ್ತು.

ಸಿಎಂ ಪ್ರತಿಕ್ರಿಯೆ

ಈ ವಿವಾದಾತ್ಮಕ ವಿಡಿಯೊ ಕುರಿತು ಪ್ರತಿಕ್ರಿಯಿಸಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ, ತಮಗೆ ಈ ವಿಡಿಯೊದ ಬಗ್ಗೆ ಯಾವುದೇ ಅರಿವಿಲ್ಲ ಎಂದು ತಿಳಿಸಿದ್ದಾರೆ. ವಿವಾದ ತೀವ್ರಗೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಿಂದ ಈ ವಿಡಿಯೊವನ್ನು ಡಿಲೀಟ್ ಮಾಡಲಾಗಿದೆ.

ಕಾನೂನು ಕ್ರಮ

ಸಾರ್ವಜನಿಕ ಶಾಂತಿ ಕದಡುವುದು ಮತ್ತು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಉದ್ದೇಶದಿಂದ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಈ ಸಮಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.