ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಎರಡೂ ಕಾಲು ಕತ್ತರಿಸಿದ ಸಿಪಿಐಂ ಕ್ರೌರ್ಯ ರಾಜ್ಯಸಭೆಯಲ್ಲಿ ವಿವರಿಸಿದ ಕೇರಳ ಸಂಸದಗೆ ಪ್ರಧಾನಿ ಮೋದಿ ಮೆಚ್ಚುಗೆ

ಸಂಸತ್ತಿನಲ್ಲಿ ಕೇರಳದ ರಾಜಕೀಯ ಹಿಂಸಾಚಾರವನ್ನು ಎತ್ತಿ ತೋರಿಸುವ ಧೈರ್ಯ ಮಾಡಿದ ಸಂಸದರನ್ನು ಪ್ರಧಾನಿ ಮೋದಿ ಶ್ಲಾಘಿಸಿರುವ ಘಟನೆ ನಡೆದಿದೆ. ರಾಜ್ಯಸಭಾ ಸಂಸದ ಸದಾನಂದನ್ ಮಾಸ್ಟರ್ ಅವರು ರಾಜ್ಯಸಭೆಯಲ್ಲಿ ತಮ್ಮ ಕೃತಕ ಅಂಗವನ್ನು ಪ್ರದರ್ಶಿಸಿದರು. ಈ ಮೂಲಕ ಹಲವು ದಶಕಗಳ ಹಿಂದೆ ರಾಜ್ಯದಲ್ಲಿ ನಡೆದಿದ್ದ ಹಿಂಸಾತ್ಮಕ ದಾಳಿಯ ಬಗ್ಗೆ ಸದನದ ಗಮನ ಸೆಳೆದರು.

ಸಂಗ್ರಹ ಚಿತ್ರ

ನವದೆಹಲಿ: ಲೋಕಸಭೆಯಲ್ಲಿ (Parliament) ತಮ್ಮ ಕೃತಕ ಅಂಗವನ್ನು ಪ್ರದರ್ಶಿಸಿದ ಕೇರಳದ (Kerala) ಬಿಜೆಪಿ ಸಂಸದರೊಬ್ಬರನ್ನು (BJP MP) ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಶ್ಲಾಘಿಸಿದ್ದಾರೆ. ಕೇರಳದಲ್ಲಿ ಮೂರು ದಶಕಗಳ ಹಿಂದೆ ನಡೆದಿದ್ದ ರಾಜಕೀಯ ಹಿಂಸಾಚಾರವನ್ನು ರಾಜ್ಯಸಭಾ ಸಂಸದ ಸದಾನಂದನ್ ಮಾಸ್ಟರ್ (MP Sadanandan Master) ಅವರು ಎತ್ತಿ ತೋರಿಸುವ ಧೈರ್ಯ ಮಾಡಿದರು. ಇದನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಮೂರು ದಶಕಗಳ ಹಿಂದೆ ರಾಜ್ಯದಲ್ಲಿ ನಡೆದ ಹಿಂಸಾತ್ಮಕ ದಾಳಿಯಲ್ಲಿ ಸದಾನಂದನ್ ಮಾಸ್ಟರ್ ಅವರು ತಮ್ಮ ಕಾಲುಗಳನ್ನು ಕಳೆದುಕೊಂಡಿದ್ದರು.

ಮೂರು ದಶಕಗಳ ಹಿಂದೆ ಕೇರಳದಲ್ಲಿ ನಡೆದ ರಾಜಕೀಯ ಹಿಂಸಾಚಾರದ ಕುರಿತು ರಾಜ್ಯಸಭೆಯಲ್ಲಿ ಸದಾನಂದನ್ ಮಾಸ್ಟರ್ ಅವರು ಸಂಸತ್ತಿನ ಗಮನ ಸೆಳೆದರು. ಈ ಬಗ್ಗೆ ಅವರಿಗೆ ಪತ್ರ ಬರೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸದಾನಂದನ್ ಮಾಸ್ಟರ್ ಅವರ ಧೈರ್ಯಕ್ಕೆ ಶ್ಲಾಘಿಸಿದ್ದಾರೆ.

ಯೋಗಿ ಅದಿತ್ಯನಾಥರ ಕನಸು ನನಸಾಗಬಹುದೇ?

ಕೇರಳದ ಕಣ್ಣೂರಿನಲ್ಲಿ ಶಿಕ್ಷಕ ಸದಾನಂದ ಮಾಸ್ಟರ್ ಅವರ ಮೇಲೆ 1994 ರಲ್ಲಿ ಸಿಪಿಐ(ಎಂ) ಜೊತೆ ಸಂಯೋಜಿತವಾಗಿರುವ ಗುಂಪೊಂದು ದಾಳಿ ನಡೆಸಿತ್ತು. ಇದರಿಂದ ಅವರು ಕಾಲುಗಳನ್ನು ಕಳೆದುಕೊಂಡಿದ್ದು, ಕೃತಕ ಅಂಗವನ್ನು ಬಳಸುತ್ತಿದ್ದಾರೆ.

ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಮಾಸ್ಟರ್ ಅವರು ತಮ್ಮ ಕೃತಕ ಅಂಗಗಳನ್ನು ಮೇಜಿನ ಮೇಲೆ ಇರಿಸಿ ಪ್ರಜಾಪ್ರಭುತ್ವ ಎಂದರೇನು ಎಂಬುದನ್ನು ರಾಷ್ಟ್ರ ಮತ್ತು ಜನರಿಗೆ ತೋರಿಸಲು ಬಯಸುವುದಾಗಿ ಹೇಳಿದರು.

ಫೆಬ್ರವರಿ 6ರಂದು ಮೋದಿ ಬರೆದಿರುವ ಪತ್ರದಲ್ಲಿ, ಸದಾನಂದನ್ ಮಾಸ್ಟರ್ ಅವರ ಧೈರ್ಯ ಕೇರಳದಲ್ಲಿ ವ್ಯಾಪಕವಾಗಿ ತಿಳಿದಿದ್ದರೂ ಹಿಂಸಾತ್ಮಕ ಸಿದ್ಧಾಂತದ ಅನುಯಾಯಿಗಳು ನಡೆಸಿದ ದಾಳಿಯಿಂದ ದೇಶಾದ್ಯಂತ ಅನೇಕರು ಆಶ್ಚರ್ಯಚಕಿತರಾಗಿದ್ದಾರೆ ಎಂದು ಹೇಳಿದ್ದಾರೆ.

ಮಾಸ್ಟರ್ ಅವರು ಭಾಷಣದ ವೇಳೆ ತೋರಿದ ಶಾಂತ ಮತ್ತು ಆತ್ಮವಿಶ್ವಾಸದ ರೀತಿಯನ್ನು ಮೆಚ್ಚಿಕೊಂಡಿರುವ ಮೋದಿ, ನಿಮ್ಮನ್ನು ನೀವು ಹೊಸಬರು ಎಂದು ಬಣ್ಣಿಸಿದ್ದೀರಿ. ಇದು ಸದನದಲ್ಲಿ ನಿಮ್ಮ ಮೊದಲ ಭಾಷಣ ಎಂದು ಹೇಳಿದ್ದೀರಿ. ನೀವು ಸಂಸತ್ತಿಗೆ ಹೊಸಬರಾಗಿರಬಹುದು, ಆದರೆ ನಿಮ್ಮ ಜೀವಿತಾವಧಿಯ ಸೇವೆ ಮತ್ತು ರಾಷ್ಟ್ರ ಮೊದಲು ಎಂಬ ಸಿದ್ಧಾಂತಕ್ಕೆ ಬದ್ಧರಾಗಿದ್ದೀರಿ. ನಿಮ್ಮ ಮಾತುಗಳನ್ನು ಕೇಳಿದಾಗ ನಾನು ನಿಮ್ಮ ನೈತಿಕ ಶಕ್ತಿ ಮತ್ತು ದೃಢನಿಶ್ಚಯವನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.

ತಾವು ಮೇಜಿನ ಮೇಲೆ ತಮ್ಮ ಕೃತಕ ಅಂಗಗಳನ್ನು ಇಟ್ಟ ಕ್ರಿಯೆಯು ದೇಶದ ಜನರನ್ನು ಆಶ್ಚರ್ಯಗೊಳಿಸಿತು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಗಾಮಿ ಸಿದ್ಧಾಂತದ ಅನುಯಾಯಿಗಳು ಶ್ರಮಶೀಲ ಶಿಕ್ಷಕನ ಮೇಲೆ ಹೇಗೆ ಈ ರೀತಿ ದಾಳಿ ಮಾಡಬಹುದು ಎಂಬುದನ್ನು ಜನರು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮುಂಬೈ ನೂತನ ಮೇಯರ್ ಆಗಿ ಬಿಜೆಪಿಯ ರಿತು ತಾವ್ಡೆ ಆಯ್ಕೆ: 25 ವರ್ಷಗಳ ಬಳಿಕ ಶಿವಸೇನೆಗೆ ಮುಖಭಂಗ

ಸಿಪಿಐ(ಎಂ) ಮೇಲೆ ವಾಗ್ದಾಳಿ ನಡೆಸಿದ ಮೋದಿ, ನೀವು ಸಂಸತ್ತಿನಲ್ಲಿ ಹೆಮ್ಮೆಯಿಂದ ಕುಳಿತಿರುವಾಗ ಪ್ರತಿಗಾಮಿ ಸಿದ್ಧಾಂತವು ಬಹಳವಾಗಿ ಕುಗ್ಗಿದೆ ಎಂಬುದು ಗಮನಿಸಬೇಕಾದ ಸಂಗತಿ ಎಂದು ಅವರು ತಿಳಿಸಿದ್ದಾರೆ.

ಕೇರಳ ಈಗ ವಿಧಾನ ಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಈ ಹೊತ್ತಿನಲ್ಲಿ ಬಿಜೆಪಿ 1994 ರಲ್ಲಿ ನಡೆದಿರುವ ರಾಜಕೀಯ ಹಿಂಸಾಚಾರದ ವಿಷಯವನ್ನು ಎತ್ತಿ ತೋರಿಸುತ್ತಿದೆ. ಸಿಪಿಐ(ಎಂ) ಕಾರ್ಯಕರ್ತರು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ನಿರಂತರವಾಗಿ ಹಿಂಸಾತ್ಮಕ ದಾಳಿ ನಡೆಸುತ್ತಿದ್ದಾರೆ ಎಂದು ಬಿಜೆಪಿ .ಆರೋಪಿಸಿದೆ.

ವಿದ್ಯಾ ಇರ್ವತ್ತೂರು

View all posts by this author