ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಹುಲ್‌ ಗಾಂಧಿ ವಿಶ್ವವೇ ಎದುರು ನೋಡುತ್ತಿರುವ ನಾಯಕ ಎಂದ ಡಿಕೆಶಿ

CM DK Shivakumar: ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರು. ಅನೇಕ ವಿದೇಶದ ನಾಯಕರು, ವಿಶ್ವವಿದ್ಯಾಲಯಗಳು ರಾಹುಲ್ ಗಾಂಧಿ ಅವರಿಗೆ ಆಮಂತ್ರಣ ನೀಡುತ್ತಾರೆ. ರಾಹುಲ್ ಗಾಂಧಿ ಅವರು ಇಡೀ ವಿಶ್ವ ಎದುರು ನೋಡುತ್ತಿರುವ ನಾಯಕ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ವಿಶ್ವವೇ ಎದುರು ನೋಡುತ್ತಿರುವ ನಾಯಕ ಎಂದ ಡಿಕೆಶಿ

ಸಿಎಂ ಡಿ.ಕೆ. ಶಿವಕುಮಾರ್ ಮತ್ತು ರಾಹುಲ್‌ ಗಾಂಧಿ (ಸಂಗ್ರಹ ಚಿತ್ರ) -

Profile
Siddalinga Swamy Oct 23, 2026 3:26 PM

ಬೆಂಗಳೂರು, ಅ.23: ಕಾಂಗ್ರೆಸ್ ಪಕ್ಷ (Congress Party) ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿರುವುದರಿಂದಲೇ ಇಂದು ಪ್ರಧಾನಮಂತ್ರಿಗಳು ಆ ಸ್ಥಾನದಲ್ಲಿ ಕೂತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar) ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಅವರು ಪ್ರತಿಕ್ರಿಯೆ ನೀಡಿದರು.

ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ಮೇಲೆತ್ತಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಟೀಕೆ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಕಾಂಗ್ರೆಸ್ ಇಲ್ಲವಾಗಿದ್ದರೆ ಈ ದೇಶ ಪ್ರಜಾಪ್ರಭುತ್ವ ವ್ಯವಸ್ಥೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ವಿಚಾರ ಪ್ರಧಾನಮಂತ್ರಿಗಳಿಗೂ ಗೊತ್ತು. ನಾವು ನಮ್ಮ ಮೂಲ ಮರೆಯಬಾರದು. ನಮ್ಮ ಮೂಲವನ್ನು ಮರೆತರೆ ನಾವು ಯಶಸ್ವಿಯಾಗುವುದಿಲ್ಲ” ಎಂದು ತಿಳಿಸಿದರು.

Private Hospital Charges: ಖಾಸಗಿ ಆಸ್ಪತ್ರೆಗಳ ವಿಪರೀತ ಶುಲ್ಕ ವಸೂಲಿಗೆ ಬ್ರೇಕ್; ಚಿಕಿತ್ಸಾ ದರಪಟ್ಟಿ ಪ್ರದರ್ಶನಕ್ಕೆ ಸಚಿವ ಯು.ಟಿ.ಖಾದರ್‌ ಸೂಚನೆ

ರಾಹುಲ್ ಗಾಂಧಿಗೆ ವಿದೇಶದ ನಾಯಕರು ಆಮಂತ್ರಣ ನೀಡುತ್ತಾರೆ

ರಾಹುಲ್ ಗಾಂಧಿ ಅವರು ಪದೇ ಪದೆ ವಿದೇಶಕ್ಕೆ ಹೋಗಿ ಬರುತ್ತಿರುವುದರ ಬಗ್ಗೆ ಬಿಜೆಪಿ ಎತ್ತಿರುವ ಪ್ರಶ್ನೆಗಳ ಬಗ್ಗೆ ಕೇಳಿದಾಗ, “ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರು. ಅನೇಕ ವಿದೇಶದ ನಾಯಕರು, ವಿಶ್ವವಿದ್ಯಾಲಯಗಳು ರಾಹುಲ್ ಗಾಂಧಿ ಅವರಿಗೆ ಆಮಂತ್ರಣ ನೀಡುತ್ತಾರೆ. ರಾಹುಲ್ ಗಾಂಧಿ ಅವರು ಇಡೀ ವಿಶ್ವ ಎದುರು ನೋಡುತ್ತಿರುವ ನಾಯಕ” ಎಂದು ಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.