ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿ ಅಧಿಸೂಚನೆ ಪ್ರಕಟ

Zilla, Taluk Panchayat polls: ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ನಿಯಮಾವಳಿಗಳ ಅನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.

ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿ ಅಧಿಸೂಚನೆ ಪ್ರಕಟ

-

Prabhakara R
Prabhakara R Oct 7, 2026 8:41 PM

ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಕ್ಷೇತ್ರವಾರು ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆಯನ್ನು ಪ್ರಕಟಿಸಿದೆ. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ನಿಯಮಾವಳಿಗಳ ಅನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಧಿಸೂಚನೆ ಹೊರಡಿಸಿದೆ.

ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ರಾಜ್ಯದ 31 ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 1,129 ಸ್ಥಾನಗಳು ಹಾಗೂ ತಾಲೂಕು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 3,656 ಸ್ಥಾನಗಳಿಗೆ ಮೀಸಲಾತಿ ಅಂತಿಮಗೊಳಿಸಲಾಗಿದೆ. ಮಹಿಳೆಯರಿಗೆ ಶೇಕಡಾ 50ಕ್ಕೂ ಹೆಚ್ಚಿನ ಸ್ಥಾನಗಳು ಮೀಸಲಾಗಿರುವುದು ಈ ಬಾರಿಯ ವಿಶೇಷತೆಯಾಗಿದೆ.

ರಾಜ್ಯದ 31 ಜಿಲ್ಲಾ ಪಂಚಾಯತಿಗಳಲ್ಲಿ ಒಟ್ಟು 1,129 ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದ್ದು, ಈ ಪೈಕಿ ಮಹಿಳೆಯರಿಗೆ ಅರ್ಧಕ್ಕಿಂತ ಹೆಚ್ಚು ಅಂದರೆ ಬರೋಬ್ಬರಿ 571 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

ಜಿಪಂ ಚುನಾವಣೆಗೆ ವರ್ಗವಾರು ಮೀಸಲಾತಿ ವಿವರ:

  • ಅನುಸೂಚಿತ ಜಾತಿ (ಎಸ್‌ಸಿ): ಒಟ್ಟು 225 ಸ್ಥಾನ (ಮಹಿಳೆಯರಿಗೆ 121 ಸ್ಥಾನ)
  • ಅನುಸೂಚಿತ ಪಂಗಡ (ಎಸ್‌ಟಿ): ಒಟ್ಟು 102 ಸ್ಥಾನ (ಮಹಿಳೆಯರಿಗೆ 59 ಸ್ಥಾನ)
  • ಹಿಂದುಳಿದ ವರ್ಗ 'ಅ' (ಬಿಸಿ-ಎ): ಒಟ್ಟು 183 ಸ್ಥಾನ (ಮಹಿಳೆಯರಿಗೆ 98 ಸ್ಥಾನ)
  • ಹಿಂದುಳಿದ ವರ್ಗ 'ಬ' (ಬಿಸಿ-ಬಿ): ಒಟ್ಟು 43 ಸ್ಥಾನ (ಮಹಿಳೆಯರಿಗೆ 25 ಸ್ಥಾನ)
  • ಸಾಮಾನ್ಯ ವರ್ಗ (ಜನರಲ್):‌ ಒಟ್ಟು 576 ಸ್ಥಾನ (ಮಹಿಳೆಯರಿಗೆ 268 ಸ್ಥಾನಗಳು)

ZP Election

ZP Election 1

ZP Election 2

ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿ ಪ್ರಕಟ

ತಾಲೂಕು ಪಂಚಾಯತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ಮಹತ್ವದ ಹೆಜ್ಜೆಯಿಟ್ಟಿದ್ದು, ಕ್ಷೇತ್ರವಾರು ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ನಿಗದಿಪಡಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಸರ್ಕಾರವು ಈ ಹಿಂದೆ ಹೊರಡಿಸಿದ್ದ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಿ, ರಾಜ್ಯದ 31 ಜಿಲ್ಲೆಗಳ ತಾಲೂಕು ಪಂಚಾಯತಿಗಳಿಗೆ ಹೊಸದಾಗಿ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿ ಆದೇಶ ನೀಡಿದೆ.

ರಾಜ್ಯದ ಒಟ್ಟು ತಾಲ್ಲೂಕು ಪಂಚಾಯಿತಿಗಳಲ್ಲಿ 3,656 ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದ್ದು, ಈ ಪೈಕಿ ಮಹಿಳೆಯರಿಗೆ ಸಿಂಹಪಾಲು ದೊರೆತಿದೆ. ಒಟ್ಟು ಸ್ಥಾನಗಳ ಪೈಕಿ ಅರ್ಧಕ್ಕಿಂತ ಹೆಚ್ಚು, ಅಂದರೆ 1,905 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ತಾಪಂ ಚುನಾವಣೆಗೆ ವರ್ಗವಾರು ಮೀಸಲಾತಿ ವಿವರ:

  • ಅನುಸೂಚಿತ ಜಾತಿ (ಎಸ್‌ಸಿ): ಒಟ್ಟು 733 ಸ್ಥಾನ (ಮಹಿಳೆಯರಿಗೆ 429 ಸ್ಥಾನ)
  • ಅನುಸೂಚಿತ ಪಂಗಡ (ಎಸ್‌ಟಿ): ಒಟ್ಟು 394 ಸ್ಥಾನ (ಮಹಿಳೆಯರಿಗೆ 287 ಸ್ಥಾನ)
  • ಹಿಂದುಳಿದ ವರ್ಗ 'ಅ' (ಬಿಸಿ-ಎ): ಒಟ್ಟು 508 ಸ್ಥಾನ (ಮಹಿಳೆಯರಿಗೆ 306 ಸ್ಥಾನ)
  • ಹಿಂದುಳಿದ ವರ್ಗ 'ಬ' (ಬಿಸಿ-ಬಿ): ಒಟ್ಟು 111 ಸ್ಥಾನ (ಮಹಿಳೆಯರಿಗೆ 64 ಸ್ಥಾನ)
  • ಸಾಮಾನ್ಯ ವರ್ಗ (ಜನರಲ್‌): ಒಟ್ಟು 1,910 ಸ್ಥಾನ (ಮಹಿಳೆಯರಿಗೆ 819 ಸ್ಥಾನ)

TP Election

TP Election 1

TP Election 2

TP Election 3

TP Election 4

TP Election 5

TP Election 6

TP Election 7