ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

15 ಓವರ್ ಬಾಕಿ ಇರುವಾಗಲೇ ಪಂದ್ಯ ಡ್ರಾ ಮಾಡಿಕೊಂಡಿದ್ದೇಕೆ? ಟೀಮ್ ಇಂಡಿಯಾವನ್ನು ಪ್ರಶ್ನಿಸಿದ ಕೆ ಶ್ರೀಕಾಂತ್!

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 15 ಓವರ್ ಬಾಕಿ ಇರುವಾಗಲೇ ಪಂದ್ಯ ಡ್ರಾ ಮಾಡಿಕೊಂಡ ಭಾರತ ತಂಡದ ನಿರ್ಧಾರವನ್ನು ಕೃಷ್ಣಮಾಚಾರಿ ಶ್ರೀಕಾಂತ್ ಪ್ರಶ್ನಿಸಿದ್ದಾರೆ. ಬುಮ್ರಾ ಬೌಲಿಂಗ್ ವೇಳೆ ಸ್ಲಿಪ್ ಫೀಲ್ಡರ್‌ಗಳನ್ನು ನಿಯೋಜಿಸದ ಭಾರತದ ತಂತ್ರಗಾರಿಕೆಯನ್ನೂ ಅವರು ಟೀಕಿಸಿದ್ದಾರೆ.

15 ಓವರ್ ಬಾಕಿ ಇರುವಾಗಲೇ ಡ್ರಾ ಮಾಡಿಕೊಂಡಿದ್ದೇಕೆ? ಶ್ರೀಕಾಂತ್‌ ಪ್ರಶ್ನೆ!

ವೆಲ್ಲಿಂಗ್ಟನ್‌ ಟೆಸ್ಟ್‌ ಡ್ರಾ ಮಾಡಿಕೊಂಡ ಭಾರತವನ್ನು ಟೀಕಿಸಿದ ಕೆ ಶ್ರೀಕಾಂತ್‌. -

Profile
Ramesh Kote Nov 23, 2026 11:20 PM

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು (IND vs NZ) ಭಾರತ ತಂಡ ಡ್ರಾ ಮಾಡಿಕೊಂಡ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ (K Srikkanth) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದಲ್ಲಿ ಇನ್ನೂ 15 ಓವರ್‌ಗಳು ಬಾಕಿ ಇರುವಾಗಲೇ ಉಭಯ ತಂಡಗಳ ನಾಯಕರು ಕೈಕುಲುಕಿ ಡ್ರಾಗೆ ಒಪ್ಪಿಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಕೊನೆಯ ದಿನ ಭಾರತದ ಫೀಲ್ಡಿಂಗ್ ವ್ಯವಸ್ಥೆ ಹಾಗೂ ಬೌಲಿಂಗ್ ತಂತ್ರಗಳನ್ನೂ ಟೀಕಿಸಿದ್ದಾರೆ.

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆದಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನವೆಂಬರ್ 23ರಂದು ಡ್ರಾದಲ್ಲಿ ಅಂತ್ಯಗೊಂಡಿತ್ತು. ನ್ಯೂಜಿಲೆಂಡ್ ತಂಡ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಕಳೆದುಕೊಂಡಿದ್ದಾಗಲೇ ಉಭಯ ತಂಡಗಳ ನಾಯಕರು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನಿರ್ಧರಿಸಿದ್ದರು.

ಈ ನಿರ್ಧಾರವನ್ನು ಪ್ರಶ್ನಿಸಿರುವ ಶ್ರೀಕಾಂತ್, ಭಾರತಕ್ಕೆ ಗೆಲುವು ಸಾಧಿಸುವ ಉತ್ತಮ ಅವಕಾಶವಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಒಂದು ಗಂಟೆ ಸಮಯವಿದ್ದಾಗ ಐದು ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸಬೇಕಿತ್ತು. ಆದರೆ ಭಾರತ ತಂಡ ಗೆಲುವಿಗಾಗಿ ಕೊನೆಯ ಹಂತದವರೆಗೂ ಹೋರಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

IND vs NZ: ʻ ಚೆಂಡಿಗೆ ಎಂಜಲು ಬಳಸಲು ಅನುಮತಿ ನೀಡಿʼ-ಐಸಿಸಿಗೆ ಮನವಿ ಮಾಡಿದ ಶುಭಮನ್‌ ಗಿಲ್‌!

"ಇನ್ನೂ ಒಂದು ಗಂಟೆ ಬಾಕಿ ಇರುವಾಗಲೇ ಏಕೆ ಕೈಕುಲುಕಿ ಪಂದ್ಯವನ್ನು ಡ್ರಾ ಮಾಡಿಕೊಂಡಿರಿ? ಒಂದು ಗಂಟೆಯಲ್ಲಿ ಐದು ವಿಕೆಟ್‌ಗಳನ್ನು ಪಡೆಯಲು ಸಾಧ್ಯವಿರಲಿಲ್ಲವೇ? ನಾನು ಆಗಿದ್ದರೆ ಖಂಡಿತವಾಗಿಯೂ ಗೆಲುವಿಗಾಗಿ ಪ್ರಯತ್ನಿಸುತ್ತಿದ್ದೆ. ನಿಮ್ಮ ಬೌಲರ್‌ಗಳು ದಣಿದಿರಬಹುದು. ಆದರೆ ನೀವು ಗೆಲುವಿನ ಸನಿಹದಲ್ಲಿದ್ದಿರಿ. ಇನ್ನೊಂದು ವಿಕೆಟ್ ಪಡೆದಿದ್ದರೆ ನ್ಯೂಜಿಲೆಂಡ್ ತಂಡದಲ್ಲಿ ಕೆಳ ಕ್ರಮಾಂಕದ ಬ್ಯಾಟರ್‌ಗಳು ಮಾತ್ರ ಉಳಿಯುತ್ತಿದ್ದರು. ಹೀಗಿರುವಾಗ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಒಪ್ಪಿಕೊಂಡಿದ್ದೇಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ," ಎಂದು ಶ್ರೀಕಾಂತ್ ಹೇಳಿದ್ದಾರೆ.

ಶುಭಮನ್‌ ಗಿಲ್‌ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತ ನಾಯಕ ಶುಭಮನ್ ಗಿಲ್, ವೇಗದ ಬೌಲರ್‌ಗಳು ಈಗಾಗಲೇ ಸಾಕಷ್ಟು ಓವರ್‌ಗಳನ್ನು ಬೌಲಿಂಗ್ ಮಾಡಿದ್ದರಿಂದ ಮತ್ತಷ್ಟು ಓವರ್‌ಗಳನ್ನು ಮುಂದುವರಿಸಿದರೂ ಪಂದ್ಯದ ಫಲಿತಾಂಶ ಬದಲಾಗುವ ಸಾಧ್ಯತೆ ಕಡಿಮೆ ಇತ್ತು ಎಂದು ಸಮರ್ಥಿಸಿಕೊಂಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 368 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ 9 ವಿಕೆಟ್ ನಷ್ಟಕ್ಕೆ 720 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 5 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು.

720, 352 ರನ್‌ ಲೀಡ್‌; ವೆಲ್ಲಿಂಗ್ಟನ್‌ನಲ್ಲಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಭಾರತ!

ಬುಮ್ರಾ ಬೌಲ್‌ ಮಾಡುವಾಗ ಸ್ಲಿಪ್ ಫೀಲ್ಡರ್‌ಗಳೇ ಇರಲಿಲ್ಲ

ಪಂದ್ಯದ ಡ್ರಾ ನಿರ್ಧಾರ ಮಾತ್ರವಲ್ಲದೆ, ಕೊನೆಯ ದಿನ ಭಾರತ ತಂಡ ಅನುಸರಿಸಿದ ಫೀಲ್ಡಿಂಗ್ ವ್ಯವಸ್ಥೆ ಹಾಗೂ ಬೌಲಿಂಗ್ ತಂತ್ರಗಳ ಬಗ್ಗೆಯೂ ಶ್ರೀಕಾಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಭಾರತದ ಪ್ರಮುಖ ವೇಗದ ಬೌಲರ್ ಬುಮ್ರಾ ಬೌಲ್‌ ಮಾಡುವಾಗ ಸ್ಲಿಪ್ ಫೀಲ್ಡರ್‌ಗಳನ್ನು ನಿಯೋಜಿಸದಿರುವುದನ್ನು ಅವರು ಪ್ರಶ್ನಿಸಿದ್ದಾರೆ.

"ಭಾರತದ ಫೀಲ್ಡಿಂಗ್ ಮತ್ತು ತಂತ್ರಗಾರಿಕೆ ಇನ್ನಷ್ಟು ಉತ್ತಮವಾಗಿರಬೇಕಿತ್ತು. ಐದನೇ ದಿನವೂ ಸ್ಲಿಪ್ ಫೀಲ್ಡರ್ ಇಲ್ಲದೆ ಬೌಲ್‌ ಮಾಡಿದ್ದೇಕೆ? ಬುಮ್ರಾ ಬೌಲ್‌ ಮಾಡುವಾಗಲೂ ಸ್ಲಿಪ್‌ನಲ್ಲಿ ಒಬ್ಬ ಫೀಲ್ಡರ್ ಇರಲಿಲ್ಲ. ಕೇವಲ ಗಲ್ಲಿ ಫೀಲ್ಡರ್ ಮಾತ್ರ ಇದ್ದರು. ನ್ಯೂಜಿಲೆಂಡ್ ಐದು ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲೂ ಕೆಲವು ಸಮಯ ಸ್ಲಿಪ್ ಫೀಲ್ಡರ್‌ಗಳೇ ಇರಲಿಲ್ಲ. ಬುಮ್ರಾ ಬೌಲ್‌ ಮಾಡುವಾಗ ಸ್ಲಿಪ್ ಫೀಲ್ಡರ್‌ಗಳನ್ನು ಏಕೆ ನಿಯೋಜಿಸಲಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ," ಎಂದು ಶ್ರೀಕಾಂತ್ ಟೀಕಿಸಿದ್ದಾರೆ.