ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashi Tharoor: ಸಚಿವ ಪಿಯೂಷ್‌ ಗೋಯಲ್‌ ಜೊತೆ ಶಶಿ ತರೂರ್‌ ಸೆಲ್ಫಿ; "ಕೈ" ಕೊಡ್ತಾರಾ ಸಂಸದ?

ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಪಕ್ಷವನ್ನು ಬಿಟ್ಟು ಬಿಜೆಪಿ ಸೇರುತ್ತಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಭಾರತ - ಬ್ರಿಟಿಷ್‌ ವ್ಯಾಪಾರ ಒಪ್ಪಂದದ ಕುರಿತು ಚರ್ಚೆಯ ನಂತರ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್ ಅವರೊಂದಿಗೆ ಇರುವ ಸೆಲ್ಫಿ ಒಂದನ್ನು ತರೂರ್‌ ಪೋಸ್ಟ್‌ ಮಾಡಿದ್ದು, ಮತ್ತಷ್ಟು ವದಂತಿ ಹುಟ್ಟಿಕೊಂಡಿದೆ.

ಬಿಜೆಪಿ ಸೇರ್ತರಾ ಶಶಿ ತರೂರ್‌? ಕೇಂದ್ರ ಸಚಿವರ ಜೊತೆ ಫೊಟೋ ಕ್ಲಿಕ್‌!

ಜೊನಾಥನ್ ರೆನಾಲ್ಡ್ಸ್, ಪಿಯೂಷ್ ಗೋಯಲ್ ಅವರೊಟ್ಟಿಗೆ ಶಶಿ ತರೂರ್‌

Profile Vishakha Bhat Feb 25, 2025 2:07 PM

ನವದೆಹಲಿ: ಕಾಂಗ್ರೆಸ್ ಮತ್ತು ಶಶಿ ತರೂರ್ (Shashi Tharoor) ನಡುವೆ ಬಿರುಕು ಮೂಡಿದೆ ಎನ್ನುವ ವರದಿಗಳ ನಡುವೆ, ಶಶಿ ತರೂರ್‌ ಪೋಸ್ಟ್‌ ಒಂದನ್ನು ಮಾಡಿದ್ದು, ಮತ್ತೆ ಚರ್ಚೆ ಹುಟ್ಟು ಹಾಕಿದೆ. ಭಾರತ - ಬ್ರಿಟಿಷ್‌ ವ್ಯಾಪಾರ ಒಪ್ಪಂದದ ಕುರಿತು ಚರ್ಚೆಯ ನಂತರ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ (Piyush Goyal) ಮತ್ತು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್ ಅವರೊಂದಿಗೆ ಇರುವ ಸೆಲ್ಫಿ ಒಂದನ್ನು ಪೋಸ್ಟ್‌ ಮಾಡಿದ್ದಾರೆ. ಬೆಜೆಪಿ ನಾಯಕನೊಂದಿಗೆ ತರೂರ್‌ ಅವರ ಈ ಫೊಟೋ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.

ಕೇರಳದ ತಿರುವನಂತಪುರಂನಿಂದ ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಸಂಸದರಾಗಿರುವ ತರೂರ್‌ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಬ್ರಿಟನ್‌ನ ವ್ಯವಹಾರ ಮತ್ತು ವ್ಯಾಪಾರದ ವಿದೇಶಾಂಗ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್ ಹಾಗೂ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ FTA ಮಾತುಕತೆಗಳನ್ನು ನಡೆಸಲಾಯಿತು ಎಂದು ಹೇಳಿದ್ದಾರೆ.



ಇತ್ತೀಚೆಗೆ ಶಶಿ ತರೂರ್ ಅವರು ಕೇರಳದ ಸಿಪಿಎಂ ನೇತೃತ್ವದ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ(ಎಲ್‌ಡಿಎಫ್) ಸರ್ಕಾರದ ನೀತಿಗಳನ್ನು ಹೊಗಳಿದ ನಂತರ‌, ಕಾಂಗ್ರೆಸ್ ಜೊತೆಗಿನ ಅವರ ಸಂಬಂಧ ಹಳಸಿದೆ ಎಂದು ಹೇಳಲಾಗುತ್ತಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಯುಡಿಎಫ್) ಪ್ರಮುಖ ವಿರೋಧ ಪಕ್ಷವಾಗಿದ್ದು, ರಾಜ್ಯದ ಉದ್ಯಮಶೀಲತೆಯ ಬೆಳವಣಿಗೆಯನ್ನು ಹೊಗಳಿದ್ದಕ್ಕಾಗಿ ಶಶಿ ತರೂರ್‌ ಮೇಲೆ ಅಸಮಾಧಾನಗೊಂಡಿದೆ.

ಈ ಸುದ್ದಿಯನ್ನೂ ಓದಿ: Shashi Tharoor: ಕಾಂಗ್ರೆಸ್ ಸಂಸದ ಶಶಿ ತರೂರ್ ತೊಡೆಯೇರಿದ ಕೋತಿ ಮಾಡಿದ್ದೇನು?

ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಶಶಿ ತರೂರ್‌, "ನಾನು ಕೇರಳದ ಎಲ್‌ಡಿಎಫ್‌ ಸರ್ಕಾರವನ್ನು ಹೊಗಳಿಲ್ಲ. ಬದಲಾಗಿ ಕೇರಳದ ಸ್ಟಾರ್ಟ್‌ಅಪ್ ವಲಯದ ಪ್ರಗತಿಯನ್ನು ಮಾತ್ರ ಎತ್ತಿ ತೋರಿಸಲು ಪ್ರಯತ್ನಿಸಿದ್ದೇನೆ ಎಂದು ಹೇಳಿದ್ದರು. ಇದಕ್ಕೂ ಮೊದಲು ತರೂರ್‌ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದರು. ಟ್ರಂಪ್‌ ಜೊತೆಗಿನ ಮೋದಿ ಮಾತುಕತೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಶಿ ತರೂರ್‌ ಅವರ ಈ ಹೇಳಿಕೆ ಕೂಡ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿತ್ತು.