ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಮಿಳುನಾಡಿನಲ್ಲಿ ಈ ಬಾರಿ ಎಐಎಡಿಎಂಕೆಯತ್ತ ಮತದಾರರ ಚಿತ್ತ; ಚುನಾವಣಾ ಪೂರ್ವ ಸಮೀಕ್ಷೆ ಹೇಳಿದ್ದೇನು?

ಸಿಎನ್ಎನ್ ನ್ಯೂಸ್ 18 ಸಮೀಕ್ಷೆಯ ಪ್ರಕಾರ ತಮಿಳುನಾಡು ಚುನಾವಣೆಯಲ್ಲಿ ಎಐಎಡಿಎಂಕೆ ಮುನ್ನಡೆ ಸಾಧಿಸಲಿದೆ. ಆಡಳಿತರೂಢ ಡಿಎಂಕೆಗೆ ಹಿನ್ನಡೆ ಸಂಭವಿಸುವ ಸಾಧ್ಯತೆಯಿದ್ದು, ಮತದಾರರ ಒಲವು ಎಐಎಡಿಎಂಕೆ ಕಡೆ ಹೆಚ್ಚುತ್ತಿದೆ. ಸೀಟುಗಳ ಅಂದಾಜು ಪ್ರಕಾರ ಎಐಎಡಿಎಂಕೆ ಸ್ಪಷ್ಟ ಬಹುಮತ ಪಡೆಯುವ ಸಾಧ್ಯತೆ ಇದೆ.

ತಮಿಳುನಾಡು ಚುನಾವಣೆ ಸಮೀಕ್ಷೆ: ಎಐಎಡಿಎಂಕೆ ಮುನ್ನಡೆ

ಡಿಎಂಕೆ - ಎಐಎಡಿಎಂಕೆ ಪಕ್ಷದ ನಾಯಕರು (ಸಂಗ್ರಹ ಚಿತ್ರ) -

Profile
Sushmitha Jain Apr 7, 2026 8:38 PM

ಚೆನ್ನೈ, ಏ. 7: ಬಹುನಿರೀಕ್ಷಿತ ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್‌ 23ರಂದು ನಡೆಯಲಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಇತ್ತೀಚಿನ ಸಿಎನ್ಎನ್ ನ್ಯೂಸ್ 18-ವೋಟ್ ಟ್ರ್ಯಾಕರ್ ಸಮೀಕ್ಷೆಯ (CNN News18-Vote Tracker survey) ಪ್ರಕಾರ ತಮಿಳುನಾಡಿನಲ್ಲಿ ಡಿಎಂಕೆ (DMK) ಆಡಳಿತ ಪತನವಾಗಲಿದ್ದು, ಎಐಎಡಿಎಂಕೆ (AIADMK) ಅಧಿಕಾರಕ್ಕೆ ಮರಳುವ ಸಾಧ್ಯತೆಯಿದೆ. ಮಾರ್ಚ್ 23ರಿಂದ ಏಪ್ರಿಲ್ 6ರವರೆಗೆ ನಡೆಸಲಾದ ಈ ಸಮೀಕ್ಷೆಯು ಎಡಪ್ಪಾಡಿ ಕೆ. ಪಳನಿಸ್ವಾಮಿ (Edappadi K. Palaniswami) ನೇತೃತ್ವದ ಪಕ್ಷಕ್ಕೆ ಸ್ಪಷ್ಟ ಮುನ್ನಡೆಯನ್ನು ಸೂಚಿಸಿದೆ. ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಈ ಚುನಾವಣೆ ಅತ್ಯಂತ ಕುತೂಹಲ ಕೆರಲಿಸಿದ್ದು, ಆಡಳಿತ ವಿರೋಧಿ ಅಲೆಯು ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಹಾಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (M K Stalin) ಮತ್ತು ಎಐಎಡಿಎಂಕೆ ನಾಯಕ ಇಪಿಎಸ್ ತಲಾ ಶೇಕಡಾ 39ರಷ್ಟು ಬೆಂಬಲ ಗಳಿಸಿ ಸಮಬಲ ಸಾಧಿಸಿದ್ದಾರೆ. ನಟ ವಿಜಯ್‌ಗೆ ಶೇಕಡಾ 14ರಷ್ಟು ಮಂದಿ ಬೆಂಬಲ ಸೂಚಿಸಿದರೆ ಉಳಿದವರತ್ತ ಶೇಕಡಾ 5ರಷ್ಟು ಮಂದಿ ಒಲವು ತೋರಿದ್ದಾರೆ. ಪಕ್ಷದ ಪ್ರಣಾಳಿಕೆ ವಿಷಯದಲ್ಲಿ ಎಐಎಡಿಎಂಕೆ ಶೇಕಡಾ 39ರಷ್ಟು ಜನರ ಮನ ಗೆದ್ದಿದ್ದು, ಡಿಎಂಕೆ ಶೇಕಡಾ 34ರಷ್ಟು ಮತದಾರರ ಬೆಂಬಲ ಗಳಿಸಿದೆ. ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ (TVK) ಶೇ. 12ರಷ್ಟು ಮಂದಿಗೆ ಮೆಚ್ಚುಗೆಯಾಗಿದೆ. ಮುಂದಿನ ಸರ್ಕಾರ ಯಾರು ರಚಿಸಲಿದ್ದಾರೆ ಎಂಬ ಪ್ರಶ್ನೆಗೆ ಶೇಕಡಾ 42ರಷ್ಟು ಜನರು ಎಐಎಡಿಎಂಕೆ ಪರವಾಗಿದ್ದರೆ, ಶೇಕಡಾ 36ರಷ್ಟು ಡಿಎಂಕೆ ಪರವಾಗಿ ಮತ ಚಲಾಯಿಸಿದ್ದಾರೆ.

ಭಾರತಕ್ಕೆ ಭೇಟಿ ನೀಡಿದ ಬಾಂಗ್ಲಾದೇಶ ವಿದೇಶಾಂಗ ಸಚಿವ; ಎರಡು ದೇಶಗಳ ಸಂಬಂಧ ಮತ್ತೆ ವೃದ್ಧಿಸುತ್ತ?

ಮತ ಹಂಚಿಕೆಯಲ್ಲೂ ಎಐಎಡಿಎಂಕೆ ಶೇಕಡಾ 41ರಷ್ಟು ಮತಗಳೊಂದಿಗೆ ಮುಂಚೂಣಿಯಲ್ಲಿದ್ದು, ಡಿಎಂಕೆಗೆ ಪರವಾಗಿ ಶೇಕಡಾ 39ರಷ್ಟು ಮಂದಿ ಮತ್ತು ವಿಜಯ್ ಅವರ ಟಿವಿಕೆ ಪರ ಶೇಕಡಾ 12ರಷ್ಟು ಮಂದಿ ಆಸಕ್ತಿ ವಹಿಸಿದ್ದಾರೆ. ಸೀಟುಗಳ ಲೆಕ್ಕಾಚಾರದಲ್ಲಿ 234 ಸದಸ್ಯರ ಬಲದ ವಿಧಾನಸಭೆಯಲ್ಲಿ ಎಐಎಡಿಎಂಕೆ 130-140 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆಯುವ ಸಾಧ್ಯತೆಯಿದೆ. ಡಿಎಂಕೆ ಕೇವಲ 90-100 ಸ್ಥಾನಗಳಿಗೆ ತೃಪ್ತಿಪಡಬೇಕಾಗಬಹುದು ಎಂದು ಸಮೀಕ್ಷೆ ಹೇಳಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ನಾಯಕತ್ವದ ಸ್ಪರ್ಧೆ ತೀವ್ರವಾಗಿದ್ದರೂ, ಪ್ರಣಾಳಿಕೆ ಮತ್ತು ಜನರ ಆಶೋತ್ತರಗಳ ವಿಷಯದಲ್ಲಿ ಎಐಎಡಿಎಂಕೆ ಮತದಾರರ ಒಲವು ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಸಮೀಕ್ಷಾ ಫಲಿತಾಂಶಗಳು ತಮಿಳುನಾಡು ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದನ್ನು ಮತ್ತು ಎಐಎಡಿಎಂಕೆ ಭರ್ಜರಿ ಪುನರಾಗಮನ ಮಾಡುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿವೆ.