ಹಿಜಾಬ್ ಬದಲಿಗೆ ಬೇರೆಡೆ ಮುಟ್ಟಿದರೆ ಏನಾಗುತ್ತಿತ್ತು? ನಿತೀಶ್ ಕುಮಾರ್ ಸಮರ್ಥಿಸಿಕೊಂಡ ಯುಪಿ ಸಚಿವ
ಹೊಸದಾಗಿ ನೇಮಕಗೊಂಡ ಆಯುಷ್ ವೈದ್ಯರಿಗೆ ಸೋಮವಾರ ನೇಮಕಾತಿ ಪತ್ರಗಳನ್ನು ವಿತರಿಸುತ್ತಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಸಂದರ್ಭದಲ್ಲಿ ಮಹಿಳಾ ವೈದ್ಯೆಯೊಬ್ಬರ ಹಿಜಾಬ್ ಎಳೆದು ವಿವಾದಕ್ಕೀಡಾದರು. ಇದೀಗ ಅವರ ನಡೆಯನ್ನು ಯುಪಿ ಸಚಿವರು ಸಮರ್ಥಿಸಿಕೊಂಡಿದ್ದು, ಒಂದು ವೇಳೆ ಅವರು ಬೇರೆ ಕಡೆ ಮುಟ್ಟಿದ್ದರೆ ಏನಾಗುತ್ತಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
(ಸಂಗ್ರಹ ಚಿತ್ರ) -
ಪಾಟ್ನಾ: ನೇಮಕಾತಿ ಪತ್ರಗಳನ್ನು (Appointment letter) ಹಸ್ತಾಂತರಿಸುವಾಗ ಮಹಿಳಾ ಆಯುಷ್ ವೈದ್ಯೆಯೊಬ್ಬರ್ ಹಿಜಾಬ್ (Hijab) ಎಳೆದು ವಿವಾದಕ್ಕೀಡಾದ ಬಿಹಾರ ಮುಖ್ಯಮಂತ್ರಿ (Bihar Chief Minister) ನಿತೇಶ್ ಕುಮಾರ್ (Nitish Kumar) ಅವರ ಕೃತ್ಯವನ್ನು ಉತ್ತರಪ್ರದೇಶದ ಸಚಿವರೊಬ್ಬರು ಸಮರ್ಥಿಸಿಕೊಂಡಿದ್ದು ಮಾತ್ರವಲ್ಲ ಒಂದು ವೇಳೆ ನಿತೀಶ್ ಕುಮಾರ್ ಬೇರೆಡೆ ಮುಟ್ಟಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ. ಇದು ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ. ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮುಸ್ಲಿಂ ಮಹಿಳೆಯ ಹಿಜಾಬ್ ತೆಗೆದಿರುವುದನ್ನು ಉತ್ತರ ಪ್ರದೇಶ ಸಚಿವ ಸಂಜಯ್ ನಿಶಾದ್ ಸಮರ್ಥಿಸಿಕೊಂಡಿದ್ದಾರೆ.
ಅಸಭ್ಯ ಮತ್ತು ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡಿ ವಿವಾದ ಉಂಟು ಮಾಡುವ ಉತ್ತರ ಪ್ರದೇಶ ಸಚಿವ ಸಂಜಯ್ ನಿಶಾದ್ ಇದೀಗ ಸಂದರ್ಶನವೊಂದರಲ್ಲಿ ನಿತೀಶ್ ಕುಮಾರ್ ಮಹಿಳೆಯೊಬ್ಬರ ಹಿಜಾಬ್ ಅನ್ನು ಮುಟ್ಟಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಅವರು ಬೇರೆಡೆ ಮುಟ್ಟಿದ್ದರೆ ಏನಾಗುತ್ತಿತ್ತು ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಅವರ ಈ ಹೇಳಿಕೆಗಳು ಇದೀಗ ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ.
ಬುರ್ಖಾ ಧರಿಸದೆ ಹೊರಗೆ ಹೋಗಿದ್ದಕ್ಕೆ ಪತ್ನಿ, ಮಕ್ಕಳನ್ನು ಗುಂಡಿಟ್ಟು ಕೊಂದು ಶೌಚಾಲಯದ ಗುಂಡಿಯಲ್ಲಿ ಶವ ಹೂತ ಪಾಪಿ
10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅವರು ಹೊಸದಾಗಿ ನೇಮಕಗೊಂಡ ಆಯುಷ್ ವೈದ್ಯರಿಗೆ ಸೋಮವಾರ ನೇಮಕಾತಿ ಪತ್ರಗಳನ್ನು ವಿತರಿಸುತ್ತಿದ್ದರು. ಈ ವೇಳೆ ಅವರು ನೇಮಕಾತಿ ಪತ್ರ ಸ್ವೀಕರಿಸಲು ಬಂದ ಮುಸ್ಲಿಂ ಮಹಿಳೆಗೆ ಮುಖ ತೋರಿಸುವಂತೆ ಹೇಳಿ ಹಿಜಾಬ್ ಎಳೆದಿದ್ದಾರೆ. ಈ ವೇಳೆ ಅವರ ಪಕ್ಕದಲ್ಲೇ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಕೂಡ ಇದ್ದರು. ಅವರು ನಿತೀಶ್ ಕುಮಾರ್ ಅವರನ್ನು ತಡೆಯಲು ಪ್ರಯತ್ನಿಸಿದ್ದು ಕೂಡ ವೈರಲ್ ವಿಡಿಯೊದಲ್ಲಿ ಸೆರೆಯಾಗಿದೆ.
ಇದನ್ನು ಸಮರ್ಥಿಸಿಕೊಂಡ ಸಚಿವ ಸಂಜಯ್ ನಿಶಾದ್, ಈ ಘಟನೆಯ ಬಗ್ಗೆ ಜನರು ಏಕೆ ಕೂಗಾಡುತ್ತಾರೆ? ಅವರು ಒಬ್ಬ ಮನುಷ್ಯ. ಮುಸುಕನ್ನು ಮುಟ್ಟಿದರೆ ಇಂತಹ ಗಲಾಟೆ ಯಾಕಾಗಿ ಒಂದು ವೇಳೆ ಅವರು ಬೇರೆಡೆ ಮುಟ್ಟಿದ್ದರೆ ಏನಾಗುತ್ತಿತ್ತು? ಎಂದು ಪ್ರಶ್ನಿಸಿದ ಅವರು, ನಿತೀಶ್ ಅವರು ಪ್ರಮಾಣ ಪತ್ರವನ್ನು ಸರಿಯಾದ ವ್ಯಕ್ತಿಗೆ ನೀಡಲಾಗಿದೆಯೇ ಎಂಬುದನ್ನು ನೋಡಲು ಮುಸುಕನ್ನು ಎಳೆದಿದ್ದಾರೆ ಎಂದು ಹೇಳಿದರು.
ಈ ಘಟನೆಯ ಬಳಿಕ ಸಮಾಜವಾದಿ ಪಕ್ಷದ ನಾಯಕಿ ಸುಮಯ್ಯ ರಾಣಾ ಅವರು ನಿತೀಶ್ ಕುಮಾರ್ ಮತ್ತು ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ವಿರುದ್ಧ ಲಕ್ನೋದಲ್ಲಿ ದೂರು ದಾಖಲಿಸಿದರು. ಇವರಿಬ್ಬರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Spy For Pakistan: ಬಲೂನ್ ಮೂಲಕ ಪಾಕಿಸ್ತಾನ ಬೇಹುಗಾರಿಕೆ; ಹಿಮಾಚಲದಲ್ಲಿ ಪತ್ತೆಯಾಯ್ತು ಸ್ಫೋಟಕ ಮಾಹಿತಿ
ಇದರ ಬಳಿಕ ವಿಡಿಯೊ ಬಿಡುಗಡೆ ಮಾಡಿದ ನಿಶಾದ್, ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ವಿಷಯಗಳನ್ನು ವಿವರಿಸಲು ಕೆಲವು ಅಭಿವ್ಯಕ್ತಿಗಳನ್ನು ಬಳಸುವ ಸಂದರ್ಭವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಅಂತಹ ನುಡಿಗಟ್ಟುಗಳನ್ನು ಸಾಂಪ್ರದಾಯಿಕವಾಗಿ ಪೂರ್ವಾಂಚಲ್‌ನಲ್ಲಿ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ದಂಗಲ್ ಚಿತ್ರದ ನಟಿ ಜೈರಾ ವಾಸಿಮ್, ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯ ಘನತೆ ಮತ್ತು ನಮ್ರತೆಯನ್ನು ಗೌರವಿಸಬೇಕಿದೆ. ಅಧಿಕಾರವು ಅವರ ಗಡಿಗಳನ್ನು ಉಲ್ಲಂಘಿಸಲು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದು, ನಿತೀಶ್ ಅವರು ಮಹಿಳೆಯ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.