ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nitish Kumar: ವೇದಿಕೆ ಮೇಲೆ ವೈದ್ಯೆಯ ಹಿಜಾಬ್‌ ಎಳೆಯಲು ಮುಂದಾದ ಸಿಎಂ ನಿತೀಶ್‌ ಕುಮಾರ್‌; ವಿಡಿಯೋ ನೋಡಿ

Nitish Kumar pulled a woman’s hijab: ಇತ್ತೀಚೆಗೆ ಬಿಹಾರದಲ್ಲಿ ನಡೆದ ಒಂದು ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಿಳೆಯೊಬ್ಬರ ಹಿಜಾಬ್ ಎಳೆದಿರುವ ಘಟನೆ ರಾಜಕೀಯ ವಲಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಕೃತ್ಯವನ್ನು ನಾಚಿಕೆಗೇಡಿನ ನಡೆ ಎಂದು ಕಾಂಗ್ರೆಸ್ ಹಾಗೂ ಆರ್‌ಜೆಡಿ ಪಕ್ಷಗಳು ತೀವ್ರವಾಗಿ ಖಂಡಿಸಿದೆ.

ಮಹಿಳೆಯ ಹಿಜಾಬ್ ಎಳೆದ ಬಿಹಾರ ಸಿಎಂ ನಿತೀಶ್ ಕುಮಾರ್

ಬಿಹಾರ ಸಿಎಂ ನಿತೀಶ್ ಕುಮಾರ್ -

Priyanka P
Priyanka P Dec 16, 2025 10:08 AM

ಪಟನಾ: ಬಿಹಾರ ಮುಖ್ಯಮಂತ್ರಿ ನಿತೇಶ್ ಕುಮಾರ್ (Nitish Kumar) ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ನೇಮಕಾತಿ ಪತ್ರಗಳನ್ನು ಹಸ್ತಾಂತರಿಸುವಾಗ ಮಹಿಳಾ ಆಯುಷ್ ವೈದ್ಯೆಯೊಬ್ಬರ್ ಹಿಜಾಬ್ (hijab) ಅನ್ನು ಎಳೆದಿದ್ದಾರೆ. ಸೋಮವಾರದಂದು ಪಟನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಯವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಹೊಸದಾಗಿ ನೇಮಕಗೊಂಡ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸುವ ಕಾರ್ಯಕ್ರಮ ಇದಾಗಿದೆ. ನೇಮಕಾತಿಗೊಂಡವರಲ್ಲಿ ಒಬ್ಬರಾದ ಮಹಿಳೆ ನುಸ್ರತ್ ಪರ್ವೀನ್ ಅವರ ಪತ್ರವನ್ನು ಸ್ವೀಕರಿಸಲು ಮುಂದೆ ಬಂದರು. ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ ನಂತರ, ಸಿಎಂ ನಿತೀಶ್ ಕುಮಾರ್ ಮಹಿಳೆಯ ಹಿಜಾಬ್ ಕಡೆಗೆ ಸನ್ನೆ ಮಾಡಿದ್ದಾರೆ. ಬಳಿಕ ಸ್ವತಃ ತಾವೇ ಅದನ್ನು ಕೈಯಿಂದ ಎಳೆದರು.

ನಿತೀಶ್ ಕುಮಾರ್ ಅವರ ರಾಜಕೀಯ ರಂಗ ಪ್ರವೇಶ ಹೇಗಿತ್ತು?

ಈ ಘಟನೆಯಿಂದ ಮಹಿಳೆಗೆ ಮುಜುಗರವಾಗಿದೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಕೆಲವರು ನಕ್ಕಿದ್ದಾರೆ. ಇದರಿಂದ ಮಹಿಳೆಯು ಸ್ವಲ್ಪ ಸಮಯದವರೆಗೆ ಅಸಮಾಧಾನಗೊಂಡಂತೆ ಕಂಡುಬಂದರು. ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ರಾಷ್ಟ್ರೀಯ ಜನತಾ ದಳ ಪಕ್ಷವು ನಿತೀಶ್ ಕುಮಾರ್ ಅವರ ಈ ನಡೆಯನ್ನು ಟೀಕಿಸಿದೆ. ನಿತೀಶ್ ಅವರಿಗೆ ಏನಾಯಿತು? ಅವರ ಮಾನಸಿಕ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆಯೇ ಅಥವಾ ನಿತೀಶ್ ಈಗ ಸಂಘಿಯಾಗಿದ್ದಾರೆಯೇ? ಎಂದು ಪ್ರಶ್ನಿಸಿದೆ.

ಇಲ್ಲಿದೆ ವಿಡಿಯೊ:



ಕಾಂಗ್ರೆಸ್ ಕೂಡ ಸಿಎಂ ನಿತೀಶ್ ಅವರ ಈ ನಡೆಗೆ ಕಿಡಿಕಾರಿದೆ. ಇದೊಂದು ಅಸಹ್ಯಕರ ಕೃತ್ಯ ಎಂದ ಕಾಂಗ್ರೆಸ್, ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡುವಂತೆ ಆಗ್ರಹಿಸಿದೆ. ರಾಜ್ಯದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಆ ರೀತೀ ಅವಮಾನಕರ ರೀತಿಯಲ್ಲಿ ವರ್ತಿಸಿದರೆ, ರಾಜ್ಯದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತರಾಗಿದ್ದಾರೆಂದು ಊಹಿಸಬಹುದು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.

ಈ ಕೃತ್ಯವನ್ನೊಮ್ಮೆ ನೋಡಿ. ಮಹಿಳಾ ವೈದ್ಯೆಯೊಬ್ಬರು ತಮ್ಮ ನೇಮಕಾತಿ ಪತ್ರವನ್ನು ಸ್ವೀಕರಿಸಲು ಬಂದಾಗ, ನಿತೀಶ್ ಕುಮಾರ್ ಅವರು ಆಕೆಯ ಹಿಜಾಬ್ ಅನ್ನು ಎಳೆದರು. ರಾಜ್ಯದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಆ ರೀತೀ ಅವಮಾನಕರ ರೀತಿಯಲ್ಲಿ ವರ್ತಿಸಿದರೆ, ರಾಜ್ಯದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತರಾಗಿದ್ದಾರೆಂದು ಊಹಿಸಬಹುದು. ಈ ಖಂಡನೀಯ ಕೃತ್ಯಕ್ಕಾಗಿ ನಿತೀಶ್ ಕುಮಾರ್ ಕೂಡಲೇ ರಾಜೀನಾಮೆ ನೀಡಬೇಕು. ಈ ರೀತಿಯ ದುಷ್ಕೃತ್ಯ ಕ್ಷಮಿಸಲಾಗದು ಎಂದು ಕಾಂಗ್ರೆಸ್ ಪಕ್ಷವು ಎಕ್ಸ್‌ನಲ್ಲಿ ಬರೆದಿದೆ.

ಕಾಂಗ್ರೆಸ್ ಟ್ವೀಟ್:



ಈ ಕಾರ್ಯಕ್ರಮದಲ್ಲಿ 685 ಆಯುರ್ವೇದ, 393 ಹೋಮಿಯೋಪತಿ ಮತ್ತು 205 ಯುನಾನಿ ವೈದ್ಯರು ಸೇರಿದಂತೆ 1,283 ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ಅಧಿಕಾರಿಗಳ ಪ್ರಕಾರ, ಹೊಸದಾಗಿ ನೇಮಕಗೊಂಡ ವೈದ್ಯರನ್ನು ಆಯುಷ್ ವೈದ್ಯಕೀಯ ಸೇವೆಗಳು ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ನೇಮಿಸಲಾಗುವುದು.

ಈ ವೈದ್ಯರನ್ನು ಹೊರರೋಗಿ ವಿಭಾಗ ಸೇವೆಗಳಿಗೆ ಮತ್ತು ರಾಷ್ಟ್ರೀಯ ಮಕ್ಕಳ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ರೋಮಿಂಗ್ ವೈದ್ಯಕೀಯ ತಂಡದ ಭಾಗವಾಗಿ ನಿಯೋಜಿಸಲಾಗುವುದು. ಇದು ಶಾಲಾ ಆರೋಗ್ಯ ತಪಾಸಣೆಗಳನ್ನು ಸುಧಾರಿಸುವ ಮತ್ತು ರಾಜ್ಯಾದಾದ್ಯಂತ ಆರೋಗ್ಯ ವಿತರಣೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.