ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೈಹಿಕ ಶಿಕ್ಷಣ ಶಿಕ್ಷಕರ ಭರ್ತಿ, ಕೆಇಬಿ ಖಾಸಗೀಕರಣಕ್ಕೆ ತಡೆ ಸೇರಿ 10 ಬೇಡಿಕೆಗಳ ಈಡೇರಿಕೆಗೆ ಸಿಎಂಗೆ ಮನವಿ

CM DK Shivakumar: ದೈಹಿಕ ಶಿಕ್ಷಣ ಶಿಕ್ಷಕರ ಭರ್ತಿ ಮಾಡಿ, ಹೆಚ್ಚುವರಿ 1 ಲಕ್ಷ ಹುದ್ದೆಗಳು ಸೇರಿದಂತೆ ಒಂದೇ ಬಾರಿಗೆ 1.56 ಲಕ್ಷ ಹುದ್ದೆಗಳ ನೇಮಕ, ಕೆಇಬಿ ಖಾಸಗೀಕರಣಕ್ಕೆ ತಡೆ ಸೇರಿದಂತೆ ವಿವಿಧ ಸಂಘಟನೆಗಳು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿವೆ.

ದೈಹಿಕ ಶಿಕ್ಷಣ ಶಿಕ್ಷಕರ ಭರ್ತಿ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹ

ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಕೆ. -

Profile
Siddalinga Swamy Jun 15, 2026 9:14 PM

ಬೆಂಗಳೂರು, ಜೂ.15: ದೈಹಿಕ ಶಿಕ್ಷಣ ಶಿಕ್ಷಕರ ಭರ್ತಿ ಮಾಡಿ, ಹೆಚ್ಚುವರಿ 1 ಲಕ್ಷ ಹುದ್ದೆಗಳು ಸೇರಿದಂತೆ ಒಂದೇ ಬಾರಿಗೆ 1.56 ಲಕ್ಷ ಹುದ್ದೆಗಳ ನೇಮಕ, ಕೆಇಬಿ ಖಾಸಗೀಕರಣಕ್ಕೆ ತಡೆ ಸೇರಿ 10 ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಅವರಿಗೆ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಸಲಾಗಿದೆ.

ಕರ್ನಾಟಕ ನಿರುದ್ಯೋಗಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಸೇರಿ ವಿವಿಧ ಸಂಘಟನಗಳ ಪದಾಧಿಕಾರಿಗಳು ಸಿಎಂ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ‘ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಾಲೆಗಳಲ್ಲಿ ಖಾಲಿ ಇರುವ ಕ್ರಮವಾಗಿ 3361 ಮತ್ತು 1861 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಮೌಲಾನಾ ಆಜಾದ್‌ ಮಾದರಿ ಶಾಲೆಗಳಿಗೆ ಅನುಮೋದನೆಯಾಗಿರುವ 700 ಹುದ್ದೆಗಳನ್ನೂ ಭರ್ತಿ ಮಾಡಬೇಕು’ ಎನ್ನುವ ಬೇಡಿಕೆ ಸೇರಿ 10 ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು.

ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ, ದೈಹಿಕ ಶಿಕ್ಷಣ ಸಮಗ್ರ ನಿಯಮ, ನೇಮಕಾತಿ ವೇಳೆ ಅಂಕಗಳ ಪರಿಗಣನೆ, ಹಾಸ್ಟಲ್‌ ವಾರ್ಡನ್‌ ಹುದ್ದೆಗೆ ಪರಿಗಣನೆ ಮಾಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಹೆಚ್ಚುವರಿ 1 ಲಕ್ಷ ಹುದ್ದೆಗಳನ್ನು ಭರ್ತಿಗೊಳಿಸಲು ಮನವಿ

ಇದೇ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಭೇಟಿ ಮಾಡಿ, ʼಸರ್ಕಾರ ಈಗಾಗಲೇ 56 ಸಾವಿರ ಖಾಲಿ ಹುದ್ದೆಗಳ ನೇಮಕಕ್ಕೆ ಮುಂದಾಗಿದೆ. ಇದರ ಜತೆಗೆ ಹೆಚ್ಚುವರಿ 1 ಲಕ್ಷ ಹುದ್ದೆಗಳನ್ನು ಸೇರಿಸಿ ಈ ವರ್ಷ ಡಿಸೆಂಬರ್ ವೇಳೆಗೆ 1.56 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು, ಕೆಪಿಎಸ್‌ಸಿ ಭ್ರಷ್ಟಾಚಾರ ಸಂಸ್ಥೆಯಾಗಿದ್ದು ಎಲ್ಲಾ ಸದಸ್ಯರ ತನಿಖೆ ನಡೆಸಬೇಕು ಮತ್ತು ಪಿಡಿಒ ನೇಮಕಾತಿ ಅಕ್ರಮ ತನಿಖೆ ಹಾಗೂ ಮರುಪರೀಕ್ಷೆ ನಡೆಸಬೇಕುʼ ಎಂದು ಮನವಿ ನೀಡಿದ್ದಾರೆ. ‌

ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾದ ಸಿಎಂ ಡಿಕೆಶಿ; ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ

ವಿದ್ಯುತ್‌ ಸರಬರಾಜು ಕಂಪೆನಿಗಳನ್ನು ಖಾಸಗಿಯವರ ಕೈಗೆ ಒಪ್ಪಿಸದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ್‌ ಗುರೂಜಿ ಮನವಿ ಮಾಡಿದ್ದಾರೆ.