ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pawan Kalyan: ವೇದಿಕೆಯಲ್ಲಿ ಖಡ್ಗ ಬೀಸಿದ ಪವನ್ ಕಲ್ಯಾಣ್- ಜತೆಗಿದ್ದ ಬಾಡಿಗಾರ್ಡ್ ಜಸ್ಟ್‌ ಮಿಸ್‌!

ಹೈದರಾಬಾದ್‌ನಲ್ಲಿ ಭಾನುವಾರ ನಡೆದ 'ದೆ ಕಾಲ್ ಹಿಮ್ ಒಜಿ' ಯ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ನಟ ಪವನ್ ಕಲ್ಯಾಣ್ ಅವರು ವೇದಿಕೆಯ ಮೇಲೆ ಖಡ್ಗ ಬೀಸಿದರು. ಇದು ಅವರ ಅಂಗರಕ್ಷಕನಿಗೆ ತಾಗುವುದರಲ್ಲಿ ಆದರೆ ಅವರು ಕ್ಷಣ ಮಾತ್ರದಲ್ಲಿ ಅಪಾಯದಿಂದ ತಪ್ಪಿಸಿಕೊಂಡರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ವೇದಿಕೆಯಲ್ಲಿ ಖಡ್ಗ ಬೀಸಿದ ಪವನ್ ಕಲ್ಯಾಣ್- ಬಾಡಿಗಾರ್ಡ್ ಜಸ್ಟ್‌ ಮಿಸ್‌!

-

ಹೈದರಾಬಾದ್: ವೇದಿಕೆಯಲ್ಲಿ ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Andhra Deputy CM Pawan Kalyan) ಅವರು ಖಡ್ಗ ಬೀಸಿದ್ದು ಅವರ ಬಾಡಿಗಾರ್ಡ್ (Bodyguard) ಸ್ವಲ್ಪದರಲ್ಲೇ ಪಾರಾದ ಘಟನೆ ಹೈದರಾಬಾದ್‌ನ (Hyderabad) ಎಲ್‌ಬಿ ಕ್ರೀಡಾಂಗಣದಲ್ಲಿ (LB Stadium) ನಡೆದಿದೆ. ತಮ್ಮ ಮುಂಬರುವ ಚಿತ್ರ ದೆ ಕಾಲ್ ಹಿಮ್ ಒಜಿ (Call Him OG) ಯ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಪವನ್ ಕಲ್ಯಾಣ್ ಅವರು ವೇದಿಕೆ ಮೇಲೆಯೇ ಖಡ್ಗ ಬೀಸಿದರು. ಭಾರೀ ಮಳೆಯ ನಡುವೆಯೂ ಸಾವಿರಾರು ಅಭಿಮಾನಿಗಳು ಹರ್ಷೋದ್ಗಾರ ಮಾಡುತ್ತಿದ್ದಾಗ ಅವರ ಅಂಗರಕ್ಷಕ ಸ್ವಲ್ಪದರಲ್ಲೇ ಪಾರಾದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಹೈದರಾಬಾದ್‌ನಲ್ಲಿ ಭಾನುವಾರ ನಡೆದ 'ದೆ ಕಾಲ್ ಹಿಮ್ ಒಜಿ' ಯ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ನಟ ಪವನ್ ಕಲ್ಯಾಣ್ ಅವರು ವೇದಿಕೆಯ ಮೇಲೆ ಖಡ್ಗ ಬೀಸಿದರು. ಇದು ಅವರ ಅಂಗರಕ್ಷಕನಿಗೆ ತಾಗುವುದರಲ್ಲಿ ಆದರೆ ಅವರು ಕ್ಷಣ ಮಾತ್ರದಲ್ಲಿ ಅಪಾಯದಿಂದ ತಪ್ಪಿಸಿಕೊಂಡರು.



ನಟ ಪವನ್ ಕಲ್ಯಾಣ್ ಅವರು ಖಡ್ಗದೊಂದಿಗೆ ವೇದಿಕೆ ಏರಿದರು. ಬಳಿಕ ಅದನ್ನು ಹಿಡಿದು ಬೀಸತೊಡಗಿದರು. ಅದು ಅವರ ಅಂಗರಕ್ಷಕನಿಗೆ ತಾಗುವುದರಲ್ಲಿತ್ತು. ಆದರೆ ಅವರು ತಪ್ಪಿಸಿಕೊಂಡರು. ಆಗ ಅವರ ಪಕ್ಕದಲ್ಲಿದ್ದ ಇನ್ನೊಬ್ಬ ಅಂಗರಕ್ಷಕ ಎಚ್ಚರಿಕೆ ಹೇಳಿದರು. ಈ ಎಲ್ಲ ದೃಶ್ಯವಳಿಗಳ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. .

ನಟ ಪವನ್ ಕಲ್ಯಾಣ್ ಅವರ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಭಾರಿ ಮಳೆಯ ನಡುವೆಯೂ ಸಾವಿರಾರು ಮಂದಿ ಸೇರಿದ್ದರು. ನಟ-ರಾಜಕಾರಣಿ ಓಜಸ್ ಗಂಭೀರ ಅಕಾ ಒಜಿ ವೇಷ ಧರಿಸಿ ವೇದಿಕೆ ಏರಿದರು. ಈ ಕಾರ್ಯಕ್ರಮವನ್ನು ಹೈದರಾಬಾದ್‌ನ ಎಲ್‌ಬಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.

ಇದನ್ನೂ ಓದಿ: Viral Video: ಸಿಂಗರ್‌ ಚಾಹತ್ ಫತೇಹ್ ಅಲಿ ಖಾನ್‌ ಮೇಲೆ ಮೊಟ್ಟೆ ಎಸೆತ; ವಿಡಿಯೋ ವೈರಲ್‌

ತೆಲುಗು ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ ತಮ್ಮ ಸಾಹಸ ದೃಶ್ಯಗಳಿಂದಾಗಿ ಹೆಚ್ಚಿನ ಜನರ ಅಭಿಮಾನ ಗಳಿಸಿಕೊಂಡಿದ್ದಾರೆ. ಇವರು 1996 ರಲ್ಲಿ ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಬಳಿಕ ತೆಲುಗಿನಲ್ಲಿ ಅತ್ಯುತ್ತಮ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ಗೆದ್ದ ಥೋಲಿ ಪ್ರೇಮ ಮೂಲಕ ಜನಪ್ರಿಯತೆ ಗಳಿಸಿದರು. ಈ ಚಿತ್ರ 1998ರಲ್ಲಿ ಬಿಡುಗಡೆಯಾಗಿತ್ತು. ಇದಾದ ಬಳಿಕ ಇವರು ಗಬ್ಬರ್ ಸಿಂಗ್ (2012), ಅತ್ತಾರಿಂಟಿಕಿ ದಾರೇದಿ (2013) ನಂತಹ ಬ್ಲಾಕ್‌ಬಸ್ಟರ್‌ ಚಿತ್ರದಲ್ಲಿ ಅಭಿನಯಿಸಿದ್ದರು.