ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr. Sudha Yadav: ಯಾರು ಈ ಡಾ. ಸುಧಾ ಯಾದವ್?; ಕರ್ನಾಟಕದ ನೂತನ ರಾಜ್ಯಪಾಲರ ಪರಿಚಯ ಇಲ್ಲಿದೆ

Karnataka's new governor Dr. Sudha Yadav: ಹರಿಯಾಣ ಮೂಲದ ಬಿಜೆಪಿಯ ಪ್ರಭಾವಿ ಮಹಿಳಾ ನಾಯಕಿ ಡಾ. ಸುಧಾ ಯಾದವ್ ಅವರಿಗೆ ಕರ್ನಾಟಕದ ಲೋಕಭವನದ ಅತ್ಯುನ್ನತ ಸಾಂವಿಧಾನಿಕ ಜವಾಬ್ದಾರಿಯನ್ನು ವಹಿಸಲಾಗಿದೆ. ಇವರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾರು ಈ ಡಾ. ಸುಧಾ ಯಾದವ್?; ನೂತನ ರಾಜ್ಯಪಾಲರ ಪರಿಚಯ ಇಲ್ಲಿದೆ

ಡಾ.ಸುಧಾ ಯಾದವ್‌. -

Prabhakara R
Prabhakara R Oct 12, 2026 10:39 PM

ಬೆಂಗಳೂರು: ಕರ್ನಾಟಕ ಸೇರಿ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಕೃತ ಆದೇಶ ಹೊರಡಿಸಿದ್ದಾರೆ. ರಾಜ್ಯ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರ ಸ್ಥಾನಕ್ಕೆ ಡಾ.ಸುಧಾ ಯಾದವ್‌ (Dr. Sudha Yadav) ಅವರು ನೇಮಕಗೊಂಡಿದ್ದಾರೆ. ಬಿಜೆಪಿಯ ಹಿರಿಯ ನಾಯಕಿ ಮತ್ತು ಸಂಸದೀಯ ಮಂಡಳಿಯ ಸದಸ್ಯೆಯಾಗಿರುವ ಇವರ ಸಂಪೂರ್ಣ ಪರಿಚಯ ಇಲ್ಲಿದೆ.

ವೈಯಕ್ತಿಕ ಜೀವನ ಮತ್ತು ಶಿಕ್ಷಣ:

ಹರಿಯಾಣ ಮೂಲದವರಾದ ಇವರು ಬಿಜೆಪಿ ಸಂಸದೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. 1965ರ ಅಕ್ಟೋಬರ್ 16ರಂದು ಹರಿಯಾಣದ ರೇವಾರಿ ಜಿಲ್ಲೆಯ ಮೋತ್ಲಾ ಕಲಾನ್ ಗ್ರಾಮದಲ್ಲಿ ಜನಿಸಿದ ಇವರು, ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ರೂರ್ಕಿ ವಿಶ್ವವಿದ್ಯಾಲಯದಿಂದ (ಪ್ರಸ್ತುತ ಐಐಟಿ ರೂರ್ಕಿ) ಪಿಎಚ್.ಡಿ ಪದವಿ ಪಡೆದಿದ್ದಾರೆ.

ಇವರು 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಗಡಿ ಭದ್ರತಾ ಪಡೆಯ (BSF) ಡೆಪ್ಯುಟಿ ಕಮಾಂಡೆಂಟ್ ಸುಖಬೀರ್ ಸಿಂಗ್ ಯಾದವ್ ಅವರ ಪತ್ನಿಯಾಗಿದ್ದಾರೆ.

ರಾಜಕೀಯ ಜೀವನ:

ಪತಿ ಹುತಾತ್ಮರಾದ ನಂತರ, ಅಂದಿನ ಬಿಜೆಪಿ ಹರಿಯಾಣ ರಾಜ್ಯ ಉಸ್ತುವಾರಿಯಾಗಿದ್ದ ನರೇಂದ್ರ ಮೋದಿ ಅವರ ವಿಶೇಷ ವಿನಂತಿಯ ಮೇರೆಗೆ ಇವರು 1999 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು. 13ನೇ ಲೋಕಸಭೆ ಚುನಾವಣೆಯಲ್ಲಿ ಹರಿಯಾಣದ ಮಹೇಂದ್ರಗಢ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ರಾವ್ ಇಂದರ್ಜಿತ್ ಸಿಂಗ್ ಅವರನ್ನು ಸೋಲಿಸುವ ಮೂಲಕ ಸಂಸತ್ (1999–2004) ಪ್ರವೇಶಿಸಿದರು.

ಪ್ರಮುಖ ಜವಾಬ್ದಾರಿಗಳು:

  • ಇವರು 2019 ರಿಂದ 2022 ರವರೆಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ (NCBC) ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
  • 2022ರ ಆಗಸ್ಟ್‌ನಲ್ಲಿ ಇವರನ್ನು ಬಿಜೆಪಿಯ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾದ ಬಿಜೆಪಿ ಸಂಸದೀಯ ಮಂಡಳಿಯ (BJP Parliamentary Board) ಸದಸ್ಯರನ್ನಾಗಿ ನೇಮಿಸಲಾಯಿತು. ಇದೀಗ ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ.