ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತೀಯ ಯೋಧರಿಗೆ ಗುಣಮಟ್ಟದ ʼಭಾರತ್‌ ರೈಸ್‌ʼ; ಸೇನೆಗೆ 1.25 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಮೀಸಲು

Pralhad Joshi: ನಮ್ಮ ಯೋಧರಿಗಾಗಿಯೇ ಆಹಾರ ಇಲಾಖೆಯಿಂದ 1.25 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಪ್ರತ್ಯೇಕವಾಗಿ ಮೀಸಲಿಟ್ಟಿದೆ. ಮುಖ್ಯವಾಗಿ ಗುಣಮಟ್ಟದ ಅಕ್ಕಿ ಪೂರೈಕೆಗೆ ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಭಾರತೀಯ ಯೋಧರಿಗೆ ಗುಣಮಟ್ಟದ 1.25 ಲಕ್ಷ ಮೆಟ್ರಿಕ್ ಟನ್ ʼಭಾರತ್‌ ರೈಸ್‌ʼ

-

Profile
Siddalinga Swamy Oct 12, 2026 9:18 PM

ನವದೆಹಲಿ, ಅ.12: ಭಾರತೀಯ ಸೇನೆಗಾಗಿ ಆಹಾರ ಇಲಾಖೆ 1.25 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಪ್ರತ್ಯೇಕವಾಗಿ ಮೀಸಲಿರಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದರು. ದೆಹಲಿಯಲ್ಲಿ ಸೋಮವಾರ ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರ ಸಮ್ಮುಖದಲ್ಲಿ ಭಾರತೀಯ ಸೇನೆಗಾಗಿ ಉತ್ತಮ ಗುಣಮಟ್ಟದ ʼಭಾರತ್‌ ರೈಸ್‌ʼ ಪೂರೈಕೆ ಕಾರ್ಯಕ್ರಮ ಉದ್ದೇಶಿಸಿ, ಅವರು ಮಾತನಾಡಿದರು.

ನಾಫೆಡ್ (NAFED) ಜತೆಗಿನ ಸಾಂಸ್ಥಿಕ ವ್ಯವಸ್ಥೆ ಮೂಲಕ ಭಾರತೀಯ ಸೇನೆಗೆ ಗುಣಮಟ್ಟದ ಆಹಾರ ಪೂರೈಸಲು ಆಹಾರ ಇಲಾಖೆ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದರು.

Union Minister Pralhad Joshi

ನಮ್ಮ ಯೋಧರಿಗಾಗಿಯೇ ಆಹಾರ ಇಲಾಖೆಯಿಂದ 1.25 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಪ್ರತ್ಯೇಕವಾಗಿ ಮೀಸಲಿಟ್ಟಿದೆ. ಮುಖ್ಯವಾಗಿ ಗುಣಮಟ್ಟದ ಅಕ್ಕಿ ಪೂರೈಕೆಗೆ ಆದ್ಯತೆ ನೀಡಲಾಗಿದೆ. ʼಭಾರತ್ ರೈಸ್' ಮಾನದಂಡಗಳಿಗೆ ಅನುಗುಣವಾಗಿ ಗರಿಷ್ಠ ಶೇ.5ರಷ್ಟು ಮಾತ್ರ ಒಡೆದ ಅಕ್ಕಿಯಿರುವ, ನಿಗದಿತ ಗುಣಮಟ್ಟದ ಆಹಾರ ಲಭ್ಯವಾಗುವುದನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.‌

RRB Recruitment 2026: ಪದವೀಧರರಿಗೆ ಭರ್ಜರಿ ಗುಡ್‌ನ್ಯೂಸ್‌; 3,548 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ

ಒಪ್ಪಂದಕ್ಕೆ ಸಹಿ: ಕಾರ್ಯಾಚರಣೆಗಳ ತುರ್ತು ಸಂದರ್ಭಗಳಲ್ಲಿ ನಮ್ಮ ಸೈನಿಕರಿಗೆ ಆಹಾರ ಪೂರೈಕೆಯನ್ನು ಖಾತ್ರಿಪಡಿಸಲು ಭಾರತೀಯ ಸೇನೆ ಹಾಗೂ ಭಾರತೀಯ ಆಹಾರ ನಿಗಮ FCI ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹ ಇದೇ ಸಂದರ್ಭದಲ್ಲಿ, ಸಚಿವದ್ವಯರ ಸಮ್ಮುಖದಲ್ಲಿ ಸಹಿ ಹಾಕಲಾಯಿತು.