ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಿಳೆಯರ ರಾಜಕೀಯ ವೃತ್ತಿ ಜೀವನ ಪುರುಷರ ಕೊಠಡಿಗಳಲ್ಲಿ ಪ್ರಾರಂಭವಾಗುತ್ತದೆ: ಪಪ್ಪು ಯಾದವ್ ವಿವಾದಾತ್ಮಕ ಹೇಳಿಕೆ

ಪುರುಷರ ಕೊಠಡಿಗಳಲ್ಲಿ ಮಹಿಳೆಯರು ಸಮಯ ಕಳೆಯದೆ ರಾಜಕೀಯ ವೃತ್ತಿ ಜೀವನ ಆರಂಭ ಸಾಧ್ಯವಿಲ್ಲ ಎಂಬುದಾಗಿ ಸಂಸದ ಪಪ್ಪು ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯ ಕುರಿತು ಮಾತನಾಡಿರುವ ಅವರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಇದು ಕಾಂಗ್ರೆಸ್ ನ ಕೀಳು ಮನಃಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಹೇಳಿದೆ.

ಮಹಿಳಾ ಮೀಸಲಾತಿ ಮಸೂದೆ: ಪಪ್ಪು ಯಾದವ್ ವಿವಾದಾತ್ಮಕ ಹೇಳಿಕೆ

ಸಂಗ್ರಹ ಚಿತ್ರ -

ನವದೆಹಲಿ: ಮಹಿಳೆಯರ ರಾಜಕೀಯ ವೃತ್ತಿ ಜೀವನವು ಪುರುಷರ ಕೊಠಡಿಗಳಲ್ಲಿ ಆರಂಭವಾಗುತ್ತದೆ ಎಂದು ಸಂಸದ ಪಪ್ಪು ಯಾದವ್ (MP Pappu Yadav) ಹೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ (BJP), ಇದು ನೀಚ ಹೇಳಿಕೆ. ಕಾಂಗ್ರೆಸ್ (Congress) ನ ಕೀಳು ಮನಃಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಹೇಳಿದೆ. ಮಹಿಳಾ ಮೀಸಲಾತಿ ಮಸೂದೆ (Womens Reservation Bill) ಕುರಿತು ಮಾತನಾಡಿರುವ ಪಪ್ಪು ಯಾದವ್, ಪುರುಷ ರಾಜಕಾರಣಿಯ ಕೊಠಡಿಯಲ್ಲಿ ಸ್ವಲ್ಪ ಸಮಯ ಕಳೆಯದೆ ಹೆಚ್ಚಿನ ಮಹಿಳೆಯರು ರಾಜಕೀಯದಲ್ಲಿರಲು ಸಾಧ್ಯವಿಲ್ಲ ಎಂದು ಹೇಳಿರುವ ಪಪ್ಪು ಯಾದವ್ ಈಗ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಲೋಕಸಭೆಯಲ್ಲಿ ಕೆಲವು ತಿದ್ದುಪಡಿ ಮಸೂದೆಗಳನ್ನು ಕೇಂದ್ರ ಸರ್ಕಾರ ಅಂಗೀಕರಿಸಲು ವಿಫಲವಾದ ಬಳಿಕ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳನ್ನು ಮುಂದುವರಿಸಿವೆ.ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಇದೀಗ ಮಾತನಾಡಿರುವ ಪಪ್ಪು ಯಾದವ್, ಹೆಚ್ಚಿನ ಪುರುಷ ರಾಜಕಾರಣಿಗಳು ರಣಹದ್ದುಗಳು ಎಂದು ಕರೆದಿದ್ದಾರೆ.

ED Raid: ತಂದೆ-ತಾಯಿಗೆ ಒಬ್ಬ ಒಳ್ಳೆಯ ಮಗನಾಗಲು ಆಗಲೇ ಇಲ್ಲ: ನಲಪಾಡ್ ಹೀಗೆ ಹೇಳಿದ್ಯಾಕೆ?

ಅಮೆರಿಕದಿಂದ ಭಾರತದವರೆಗೆ ಗೃಹ ಹಿಂಸೆ ಯಾರಿಂದ ಆಗುತ್ತಿದೆ, ಮಹಿಳೆಯರ ಮೇಲೆ ಯಾರು ಕೆಟ್ಟ ದೃಷ್ಟಿ ಇಡುತ್ತಿದ್ದಾರೆ ಎಂದು ಪ್ರಶ್ನಿಸಿರುವ ಅವರು, ರಾಜಕಾರಣಿಗಳ ಕೊಠಡಿಗೆ ಹೋಗದೆ ಶೇಕಾಡ 90ರಷ್ಟು ಮಹಿಳೆಯರು ರಾಜಕೀಯದಲ್ಲಿರಲು ಸಾಧ್ಯವಿಲ್ಲ. ಇದು ಪ್ರತಿದಿನ ನಡೆಯುತ್ತಿದೆ. ರಾಜಕಾರಣಿಗಳ ಸಿಸಿಟಿವಿ ದೃಶ್ಯಾವಳಿಗಳು ಪ್ರತಿದಿನ ಸಿಗುತ್ತಿದೆ. ಮಹಿಳೆಯರನ್ನು ಶೋಷಿಸುವುದು ಈಗ ಸಂಸ್ಕೃತಿಯಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಜೊತೆ ಸಂಬಂಧ ಹೊಂದಿರುವ ಪೂರ್ಣಿಯಾ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, ಇದೊಂದು ನೀಚ ಹೇಳಿಕೆ. ವಿರೋಧ ಪಕ್ಷದ ಮನಸ್ಥಿತಿಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಟಿಲ್;ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಮತ್ತೊಮ್ಮೆ ತಾವು ಮಹಿಳಾ ವಿರೋಧಿಗಳು ಎಂದು ತೋರಿಸಿವೆ. ರಾಹುಲ್ ಗಾಂಧಿಗೆ ತುಂಬಾ ಹತ್ತಿರವಿರುವ ಮತ್ತು ಕಾಂಗ್ರೆಸ್ ಅನ್ನು ಬೆಂಬಲಿಸುವ ಪಪ್ಪು ಯಾದವ್, ರಾಜಕೀಯದಲ್ಲಿ ಮಹಿಳೆಯರ ಬಗ್ಗೆ ಅತ್ಯಂತ ಅವಹೇಳನಕಾರಿ, ಸ್ತ್ರೀದ್ವೇಷಿ ಮತ್ತು ನೀಚ ಹೇಳಿಕೆ ನೀಡಿದ್ದಾರೆ ಎಂದು ಹೇಳಿರುವ ಪುನವಾಲಾ, ಮಹಿಳಾ ಹಿತಾಸಕ್ತಿಗಳನ್ನು ಹಿಂದೆ ಪ್ರತಿಪಾದಿಸಿದ್ದ ಪ್ರಿಯಾಂಕಾ ಗಾಂಧಿ ಅವರು ಯಾದವ್ ಅವರ ಹೇಳಿಕೆ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕಿ ಚಾರು ಪ್ರಜ್ಞಾ ಪ್ರತಿಕ್ರಿಯಿಸಿ, ಯಾದವ್ ಅವರ ಹೇಳಿಕೆಗಳು ಅವರ ಮನಸ್ಥಿತಿ ಮತ್ತು ಅವರು ಮಹಿಳೆಯರನ್ನು ಹೇಗೆ ನೋಡುತ್ತಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಅವರಂತಹ ವ್ಯಕ್ತಿ ಬಹು ಅವಧಿಯ ಸಂಸತ್ ಸದಸ್ಯನಾಗಿರುವುದು ದುರದೃಷ್ಟಕರ. ಅವರನ್ನು ಸಂಸತ್ತಿನಿಂದ ಅಮಾನತುಗೊಳಿಸಬೇಕು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕು. ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ಮುಖ್ಯಸ್ಥೆ ತೇಜಸ್ವಿ ಯಾದವ್ ಈ ಬಗ್ಗೆ ಏನು ಹೇಳುತ್ತಾರೆ? ಯಾದವ್ ಅವರ ಆಪ್ತ ಮಿತ್ರರಲ್ಲಿ ಅವರು ಒಬ್ಬರು ಎಂದು ಹೇಳಿದರು.

ಪಪ್ಪು ಯಾದವ್ ಹೇಳಿಕೆ ವಿವಾದ ಭುಗಿಲೆದ್ದ ಬಳಿಕ ಬಿಹಾರ ರಾಜ್ಯ ಮಹಿಳಾ ಆಯೋಗವು ಯಾದವ್ ಅವರಿಗೆ ತಮ್ಮ ಹೇಳಿಕೆಗಳಿಗೆ ಸ್ಪಷ್ಟೀಕರಣನೀಡುವಂತೆ ನೊಟೀಸ್ ನೀಡಿದೆ.

ಪ್ರಧಾನಿ ನರೇಂದ್ರ ಮೋದಿಯನ್ನು ಭಯೋತ್ಪಾದಕ ಎಂದು ಕರೆದ ಮಲ್ಲಿಕಾರ್ಜುನ ಖರ್ಗೆ; ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಎಐಎಡಿಎಂಕೆ ವಿರುದ್ಧ ವಾಗ್ದಾಳಿ

ವಿವಾದದ ಬಳಿಕ ಪಪ್ಪು ಯಾದವ್ ಹೇಳಿದ್ದೇನು?

ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿರುವ ಪಪ್ಪು ಯಾದವ್, ರಾಜಕೀಯ ಪ್ರವೇಶಿಸುವ ಮಹಿಳೆಯರು ಹೆಚ್ಚಾಗಿ ಶೋಷಣೆಯನ್ನು ಎದುರಿಸುತ್ತಾರೆ ಎಂಬ ವಿಷಯವನ್ನು ಎತ್ತಿ ತೋರಿಸಲು ನಾನು ಹೇಳಿರುವ ಹೇಳಿಕೆಯನ್ನು ವಿವಾದ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯಾದ್ಯಂತ ಮಹಿಳೆಯರ ವಿರುದ್ಧ ಹಲವಾರು ಅಪರಾಧಗಳು ನಡೆದಾಗ ಬಿಹಾರ ಮಹಿಳಾ ಸಮಿತಿ ನಿಷ್ಕ್ರಿಯವಾಗಿತ್ತು. ಆದರೆ ನಾನು ಮಹಿಳೆಯರ ಪರ ಹೋರಾಡುವುದಕ್ಕಾಗಿ ನೊಟೀಸ್ ಕಳುಹಿಸಿದೆ ಎಂದು ಆರೋಪಿಸಿದರು.