ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಿಳಾ ವಿರೋಧಿ ನಡೆಯಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಮುಖಭಂಗ ಆಗಲಿದೆ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಕಾಂಗ್ರೆಸ್ ಪಕ್ಷ ಇರುವುದೇ ದೇಶವನ್ನು ಪೋಷಣೆ ಮಾಡಲಿಕ್ಕಲ್ಲ. ಶೋಷಣೆ ಮಾಡಲಿಕ್ಕೆ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ. ಮಸೂದೆಗೆ ಕಾಂಗ್ರೆಸ್, ಅವರ ಮಿತ್ರ ಪಕ್ಷಗಳಿಂದ ಆದ ಸೋಲು ದೇಶದಲ್ಲಿರುವ ಶೇ.50 ಮಹಿಳೆಯರಿಗೆ ಮಾಡಿದ ದ್ರೋಹ, ಅನ್ಯಾಯ, ಶೋಷಣೆ ಎಂದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ಮುಖಭಂಗ ಆಗಲಿದೆ: ಛಲವಾದಿ

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (ಸಂಗ್ರಹ ಚಿತ್ರ) -

Profile
Siddalinga Swamy Apr 18, 2026 7:30 PM

ಬೆಂಗಳೂರು, ಏ.18: ಕಾಂಗ್ರೆಸ್ಸಿನ ಮಹಿಳಾ ವಿರೋಧಿ ಕ್ರಮದಿಂದ ಮುಂದಿನ ದಿನಗಳಲ್ಲಿ ಆ ಪಕ್ಷಕ್ಕೆ ಮುಖಭಂಗ ಆಗಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನ ದಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವ ಘೋಷವಾಕ್ಯ ‘ಸಬ್ ಕಾ ಸಾಥ್...’ ಸತ್ಯ ಎಂದು ಎಲ್ಲರಿಗೂ ಮನವರಿಕೆ ಆಗಿರಬೇಕು ಎಂದು ವಿಶ್ಲೇಷಿಸಿದರು. ಇಂಡಿ ಒಕ್ಕೂಟದ ಬ್ರದರ್ಸ್‍ಗೆ ಸಿಸ್ಟರ್‌ಗಳ ಬಗ್ಗೆ ಗೌರವ ಇಲ್ಲ ಎಂದು ಟೀಕಿಸಿದರು.

ಕುತಂತ್ರದಿಂದ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದೆ. ದಲಿತರು, ಹಿಂದುಳಿದವರನ್ನು, ಮುಸ್ಲಿಂ ಹೆಣ್ಮಕ್ಕಳನ್ನು ಕಾಂಗ್ರೆಸ್ ಪಕ್ಷ ಶೋಷಣೆ ಮಾಡಿತ್ತು ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷ ಇರುವುದೇ ದೇಶವನ್ನು ಪೋಷಣೆ ಮಾಡಲಿಕ್ಕಲ್ಲ. ಶೋಷಣೆ ಮಾಡಲಿಕ್ಕೆ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ ಎಂದು ಟೀಕಿಸಿದರು. ಮಸೂದೆಗೆ ಕಾಂಗ್ರೆಸ್, ಅವರ ಮಿತ್ರ ಪಕ್ಷಗಳಿಂದ ಆದ ಸೋಲು ದೇಶದಲ್ಲಿರುವ ಶೇ 50 ಮಹಿಳೆಯರಿಗೆ ಮಾಡಿದ ದ್ರೋಹ, ಅನ್ಯಾಯ, ಶೋಷಣೆ ಎಂದು ಕಿಡಿಕಾರಿದರು.

ಮಹಿಳಾ ಮೀಸಲಾತಿಗೆ ಸೋಲಾಗಬೇಕೆಂಬ ನಿಮ್ಮ ಮನಸ್ಥಿತಿ ಇತ್ತು. ಆ ಸೋಲನ್ನು ಮಹಿಳೆಯರಿಗೆ ಉಣಿಸಿದ್ದೀರಿ ಎಂದು ಆರೋಪಿಸಿದರು. ನೀವು ಮಹಿಳಾ ಸಬಲೀಕರಣಕ್ಕಾಗಿ ಗ್ಯಾರಂಟಿ ತಂದಿದ್ದಲ್ಲವೇ? ಮತ್ತೊಂದು ಕಡೆಯಿಂದ ಶೋಷಣೆ ಆಗುತ್ತಿದೆ. ಅವರಿಗೆ ನಿಮ್ಮ 2 ಸಾವಿರ ರೂ. ಬೇಕಾಗಿರುವುದಲ್ಲ. ಈ ದೇಶದ ಸಂಸತ್ತಿನಲ್ಲಿ ಕುಳಿತು ಕಾನೂನು ರಚನೆ, ನ್ಯಾಯನೀತಿ ನಿರೂಪಣೆಯಲ್ಲಿ ಗಂಡಸರಂತೆ ಸರ್ವರಿಗೂ ಸಮಾನ ಹಕ್ಕು ಬೇಕೆಂದು ಅವರ ಅಪೇಕ್ಷೆ. ನಿಮ್ಮ ಪುಡಿಗಾಸು, ಬಸ್ಸಿನಲ್ಲಿ ಹೋಗಲು ಅವಕಾಶ- ಇವು ಸಬಲೀಕರಣ ಅಲ್ಲ ಎಂದು ಟೀಕಿಸಿದರು.

ರಾಜ್ಯದ ಮಹಿಳೆಯರೇ.. ನಿಮಗೆ ಈ ಗ್ಯಾರಂಟಿಯೇ ಸಾಕೇ? ಸಮಾನ ಹಕ್ಕುಗಳ ಗ್ಯಾರಂಟಿ ಬೇಕೇ ಎಂದು ತೀರ್ಮಾನ ಮಾಡಿ. ಕಾಂಗ್ರೆಸ್ ಯಾವತ್ತೂ ಮಹಿಳಾಪರ ಅಲ್ಲ ಎಂದರು.

Women Reservation Bill: ಮಹಿಳೆಯರ ಶಾಪ ಕಾಂಗ್ರೆಸ್, ಮಿತ್ರ ಪಕ್ಷಗಳಿಗೆ ತಟ್ಟದೇ ಬಿಡುವುದಿಲ್ಲ: ಆರ್. ಅಶೋಕ್

ಸಚಿವ ಜಮೀರ್ ಅಹ್ಮದ್ ಅವರು ಸೆಟೆದು ನಿಂತಿದ್ದಾರೆ. ಈಗ ಭಯ ಪ್ರಾರಂಭವಾಗಿದೆ. ಮುಸಲ್ಮಾನ ಬಂಧುಗಳ ದುಗುಡ ಕಾಂಗ್ರೆಸ್ಸನ್ನು ಡ್ಯಾಮೇಜ್ ಮಾಡಲಿದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ಮಹಿಳಾ ಮೀಸಲಾತಿಗೆ ಬೆಂಬಲಿಸದೇ ಮಹಿಳೆಯರೂ ಕಾಂಗ್ರೆಸ್ಸಿಗೆ ಮತ ಕೊಡುವುದಿಲ್ಲ. ಇದು ಎರಡನೇ ಡ್ಯಾಮೇಜ್ ಎಂದು ಹೇಳಿದರು.