ಬೆಂಗಳೂರು: ಹಿಂದೂ ಧರ್ಮದಲ್ಲಿ(Hindu Religion) ಪ್ರತಿಯೊಂದು ಕೆಲಸಕ್ಕೂ ಘಳಿಗೆ - ಸಮಯ ನೋಡುತ್ತೇವೆ. ಯಾವುದಾದರೂ ಶುಭ ಕಾರ್ಯ ಮಾಡಬೇಕು ಎಂದರೆ ಮದುವೆ, ಉಪನಯನ ಹೀಗೆ ಯಾವುದೇ ಕೆಲಸ ಮಾಡಬೇಕಾದರೆ ಶುಭ ಸಮಯ ಅಥವಾ ಮುಹೂರ್ತವನ್ನು ನೋಡಿಯೇ ಮುಂದುವರಿಯುತ್ತೇವೆ. ಏಕೆಂದರೆ ಶುಭ ಸಮಯದಲ್ಲಿ ಮಾಡಿದರೆ ಅದರ ಫಲ ಸಿಗುತ್ತದೆ ಹಾಗೂ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಹೇಗೆ ಜ್ಯೋತಿಷ್ಯ ಶಾಸ್ತ್ರದ (Astro Tips) ಪ್ರಕಾರ ಶುಭ ಮುಹೂರ್ತ, ಘಳಿಗೆಗಳು ಇದೆಯೋ, ಹಾಗೆಯೇ ಅಶುಭ ಸಮಯ, ಘಳಿಗೆಗಳೂ ಇವೆ.
ಅಲ್ಲದೇ ಕೆಲವೊಂದು ಸಮಯದಲ್ಲಿ ಕೆಲ ಕೆಲಸಗಳನ್ನು ಮಾಡಬಾರದು ಎಂಬ ನಿಯಮಗಳು ಇವೆ. ಅದರಲ್ಲಿಯೂ ಮುಸ್ಸಂಜೆ ವೇಳೆ ಮಾಡಬಾರದ ಕೆಲ ವಿಚಾರಗಳ ಕುರಿತು ಉಲ್ಲೇಖವಿದ್ದು, ಸಂಜೆಯ ವೇಳೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿದರೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಲಿದೆ.
ಹೌದು, ಸಂಜೆ ವೇಳೆ ಕೆಲ ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮೀ ದೇವಿ ಕೋಪಗೊಳ್ಳಲಿದ್ದು, ನಿಮ್ಮ ಸಂಪತ್ತು ಮತ್ತು ಆಯಸ್ಸು ಕಡಿಮೆಯಾಗುತ್ತದೆ. ಇದರಿಂದ ಬಡತನವು ಮನೆಯಲ್ಲಿ ನೆಲೆಸುವುದು ಮತ್ತು ಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆ ಬರುತ್ತಲೇ ಇರಬಹುದು. ಹಾಗಾದ್ರೆ ಸಂಜೆ ಯಾವ ಕೆಲಸ ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ಸಾಲ ನೀಡಬೇಡಿ
ಸೂರ್ಯಾಸ್ತದ ನಂತರ ಸಾಲ ನೀಡಬಾರದು ಹಾಗೂ ಪಡೆಯಬಾರದು ಎಂದು ಶಾಸ್ತ್ರ ಹೇಳುತ್ತದೆ. ಹೀಗೆ ಮಾಡುವುದರಿಂದ ಲಕ್ಷ್ಮೀ ಕೋಪಗೊಳ್ಳುತ್ತಾರೆ ಹಾಗೂ ಸಾಲ ನೀಡುವುದರಿಂದ ಮನೆಯ ಲಕ್ಷ್ಮೀ ಹೊರಹೋಗುತ್ತಾಳೆ ಎಂದು ನಂಬಲಾಗಿದ್ದು, ಸಂಜೆಯ ವೇಳೆಯಲ್ಲಿ ಹಣವನ್ನು ತೆಗೆದುಕೊಳ್ಳುವುದರಿಂದ ಮನೆಗೆ ಬಡತನ ಬರಲಿದೆ ಹಾಗೂ ಸಾಲ ತೀರುವುದಿಲ್ಲ ಎನ್ನಲಾಗಿದೆ.
ಉಗುರುಗಳನ್ನು ಕತ್ತರಿಸಬಾರದು
ಹಿಂದೂ ಧರ್ಮದ ಪ್ರಕಾರ ಸೂರ್ಯಾಸ್ತದ ನಂತರ ಉಗುರುಗಳನ್ನು ಕತ್ತರಿಸುವುದು ಅಮಂಗಳಕರವಾಗಿದ್ದು, ಇದು ದರಿದ್ರ ತರುತ್ತದೆ ಎಂದು ಹೇಳಲಾಗುತ್ತದೆ. ಹಾಗೇ ಮನೆಯೊಳಗೆ
ಉಗುರು ಕಚ್ಚಿ ಬೀಸಾಕುವುದು ಅಶುಭವಾಗಿದ್ದು, ಮನೆಯಲ್ಲಿ ಅಶಾಂತಿಯನ್ನು ಉಂಟು ಮಾಡುತ್ತದೆ. ಅದರಿಂದ ತಪ್ಪಿಯೂ ಸೂರ್ಯ ಮುಳುಗಿದ ನಂತರ ಉಗುರು ಅನ್ನು ಕತ್ತರಿಸಬೇಡಿ.
‘ಶುಕ್ರವಾರದ ಪೂಜೆಯ ವೇಳೆಗೆ..’: ಲಕ್ಷ್ಮೀ ದೇವಿಯನ್ನು ಸುಪ್ರಸನ್ನಗೊಳಿಸಲು ಹೀಗಿರಲಿ ನಿಮ್ಮ ಆರಾಧನೆ
ಕೂದಲು ಬಾಚುವುದು ಒಳ್ಳೆಯದಲ್ಲ
ಹೇಗೆ ಮಂಗಳವಾರ - ಶುಕ್ರವಾರ ಕೂದಲನ್ನು ಕತ್ತರಿಸಬಾರದು ಶುಭ ಲಕ್ಷಣವಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆಯೇ ಹಾಗೇ ಸಂಜೆ ಕೂದಲನ್ನು ಕತ್ತರಿಸುವುದು ಅಥವಾ ಬಾಚುವುದು ಅಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆಯ ಜೊತೆಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. ಕುಟುಂಬದಲ್ಲಿ ಕಲಹ ಹೆಚ್ಚಾಗುತ್ತದೆ, ಆದ್ದರಿಂದ ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಿ.
ಸಂಜೆ ವೇಳೆ ಕಸವನ್ನು ಹೊರ ಹಾಕಬೇಡಿ
ಸೂರ್ಯಾಸ್ತದ ನಂತರ ಮನೆಯ ಕಸ ಗುಡಿಸುವುದು ಸರಿಯಲ್ಲ. ಸಂಜೆ ಮನೆಯನ್ನು ಸ್ವಚ್ಛಗೊಳಿಸಬಾರದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಗುಡಿಸಿ ಸ್ವಚ್ಛಗೊಳಿಸುವ ಮೂಲಕ ಮನೆಯ ಆಶೀರ್ವಾದ ಮತ್ತು ಸಂತೋಷ ಮತ್ತು ಸಮೃದ್ಧಿ ಹೊರಟು ಹೋಗುತ್ತದೆ. ಈ ಕಾರಣದಿಂದ ಮನೆಯ ಹಿರಿಯರು ಸಂಜೆ ಮನೆಯನ್ನುನ ಗುಡಿಸಬಾರದು ಎಂಬುದಾಗಿ ಸಲಹೆ ನೀಡುತ್ತಾರೆ. ಸಂಜೆ ಈ ರೀತಿ ಮಾಡುವುದರಿಂದ ಜೀವನದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಬಹುದು ಮತ್ತು ಪಿತೃಗಳು ಕೂಡ ನಿಮ್ಮ ಮೇಲೆ ಕೋಪಿಸಿಕೊಳ್ಳಬಹುದು.