Maha Shivratri: ಆಸ್ತಿಕರನ್ನು ತನ್ನತ್ತ ಸೆಳೆಯುವ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆಷ್ಟು ತಿಳಿದಿದೆ?
ಜ್ಯೋತಿರ್ಲಿಂಗಗಳಲ್ಲಿ ಶಿವ ಸಾನ್ನಿಧ್ಯವು ಪ್ರಬಲವಾಗಿರುತ್ತದೆ ಎಂಬುದನ್ನು ಆಸ್ತಿಕರು ನಂಬುತ್ತಾರೆ. ಹಾಗಾದರೆ ನಮ್ಮ ದೇಶದ ವಿವಿಧ ಕಡೆಗಳಲ್ಲಿರುವ ಜ್ಯೋತಿರ್ಲಿಂಗಗಳು ಯಾವವು ಮತ್ತು ಇವುಗಳ ಮಹತ್ವವೇನು? ಎಂಬ ವಿಚಾರವನ್ನು ಮಹಾಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ ನಾವಿಂದು ತಿಳಿದುಕೊಳ್ಳೋಣ ಬನ್ನಿ...

ಶಿವ ಶಕ್ತಿ ಸಾನ್ನಿಧ್ಯ ಭರಿತ ಜ್ಯೋತಿರ್ಲಿಂಗಗಳು

ಯಸ್ಯಂ ಪೀಠ ಧರಿತ್ರಿ.. ಎಂಬ ಉಕ್ತಿಯಂತೆ ಪುಣ್ಯ ಭೂಮಿಯಾಗಿರುವ ಭಾರತದ 12 ಕಡೆಗಳಲ್ಲಿ ಜ್ಯೋತಿರ್ಲಿಂಗಗಳನ್ನು ಸ್ಥಾಪಿಸಲಾಗಿದೆ. ಈ ಜ್ಯೋತಿರ್ಲಿಂಗಗಳಲ್ಲಿ ಶಿವ ಸಾನ್ನಿಧ್ಯವು ಪ್ರಬಲವಾಗಿರುತ್ತದೆ ಎಂಬುದನ್ನು ಆಸ್ತಿಕರು ನಂಬುತ್ತಾರೆ. ಮತ್ತು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಈ ಜ್ಯೊತಿರ್ಲಿಂಗಗಳ ದರ್ಶನವನ್ನು ಪಡೆದುಕೊಂಡು ಭಕ್ತರು ತಮ್ಮ ಜೀವನವನ್ನು ಪಾವನರನ್ನಾಗಿಸಿಕೊಳ್ಳುತ್ತಾರೆ. ಗುಜರಾತ್, ಆಂಧ್ರಪ್ರದೇಶ, ಉಜ್ಜಯಿನಿ, ಮಹಾರಾಷ್ಟ್ರ, ತಮಿಳುನಾಡು, ಉತ್ತರಪ್ರದೇಶ, ಜಾರ್ಖಂಡ್ ನ ವಿವಿಧ ಕಡೆಗಳಲ್ಲಿ ಈ ಜ್ಯೋತಿರ್ಲಿಂಗಗಳು ಸ್ಥಾಪಿಸಲ್ಪಟ್ಟಿದ್ದು ಭಕ್ತರಿಂದ ವಿವಿಧ ರೀತಿಯಲ್ಲಿ ಪೂಜೆಗೊಳ್ಳುತ್ತಿದೆ. ಹಾಗಾದರೆ ನಮ್ಮ ದೇಶದ ವಿವಿಧ ಕಡೆಗಳಲ್ಲಿರುವ ಜ್ಯೋತಿರ್ಲಿಂಗಗಳು ಯಾವವು ಮತ್ತು ಇವುಗಳ ಮಹತ್ವವೇನು? ಎಂಬ ವಿಚಾರವನ್ನು ಮಹಾಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ ನಾವಿಂದು ತಿಳಿದುಕೊಳ್ಳೋಣ ಬನ್ನಿ.
1 ಸೋಮನಾಥ ಜ್ಯೋತಿರ್ಲಿಂಗ: ಗುಜರಾತಿನ ಸೋಮನಾಥ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಇದು ಕೆಲವು ಬಾರಿ ನವೀಕರಿಸಲಾದ ಪ್ರಮುಖ ಯಾತ್ರಿಕ ತಾಣವಾಗಿದೆ. ಇದರ ಜನಪ್ರಿಯತೆಯ ಹಿಂದಿನ ಕಾರಣವೆಂದರೆ ಇದು ತ್ರಿವೇಣಿ ಸಂಗಮದ ಬಳಿ ಇದೆ, ಎಂದರೆ ಹಿರಾನ್, ಕಪಿಲಾ ಮತ್ತು ಸರಸ್ವತಿ ಎಂಬ ಮೂರು ನದಿಗಳ ಸಂಗಮವಾಗಿದೆ.

2 ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ: ಮಲ್ಲಿಕಾರ್ಜುನ ಸ್ವಾಮಿ ದೇವಾಲಯವು ದಕ್ಷಿಣ ಭಾರತದ ಜನಪ್ರಿಯ ಶಿವ ದೇವಾಲಯವಾಗಿದ್ದು, ಇದು ಧಾರ್ಮಿಕ ದೇವಾಲಯ ಪಟ್ಟಣವಾದ ಶ್ರೀಶೈಲಂನಲ್ಲಿದೆ. ಮಲ್ಲಿಕಾರ್ಜುನ ಸ್ವಾಮಿಯ ಮಹಾಶಿವರಾತ್ರಿ ಆಚರಣೆ ಭಾರತದಾದ್ಯಂತ ಪ್ರಸಿದ್ಧವಾಗಿದೆ ಮತ್ತು ನೋಡಲು ತುಂಬಾನೇ ಚೆನ್ನಾಗಿರುತ್ತದೆ.

3 ಮಹಾಕಾಳೇಶ್ವರ ಜ್ಯೋತಿರ್ಲಿಂಗ: ಕುಂಭ ಮೇಳಕ್ಕೆ ಉಜ್ಜಯಿನಿ ಆತಿಥ್ಯ ವಹಿಸುತ್ತದೆ ಮತ್ತು ಮಹಾಕಾಳೇಶ್ವರ ದೇವಾಲಯವು ಅತಿದೊಡ್ಡ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ರುದ್ರ ಸಾಗರ ಸರೋವರದ ಬಳಿ ಇದೆ, ಈ ದೇವಾಲಯಕ್ಕೆ ಪ್ರತಿದಿನ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ.

4 ಓಂಕಾರೇಶ್ವರ ಜ್ಯೋತಿರ್ಲಿಂಗ: ನರ್ಮದಾ ನದಿಯ ದಡದಲ್ಲಿರುವ ಪವಿತ್ರ ದ್ವೀಪ ಓಂಕಾರೇಶ್ವರದಲ್ಲಿರುವ ಓಂಕಾರಂ ಅಮಲೇಶ್ವರ ಜ್ಯೋತಿರ್ಲಿಂಗ. ಇಲ್ಲಿರುವ ಲಿಂಗವು ವರ್ಷವಿಡೀ ಭಕ್ತರ ಗುಂಪನ್ನು ಸೆಳೆಯುತ್ತದೆ.

5 ವೈದ್ಯನಾಥ ಜ್ಯೋತಿರ್ಲಿಂಗ: ವೈದ್ಯನಾಥ ಜ್ಯೋತಿರ್ಲಿಂಗವನ್ನು ಬಾಬಾ ಧಾಮ್ ಮತ್ತು ಬೈದ್ಯನಾಥ ಧಾಮ ಎಂದು ಕರೆಯಲಾಗುತ್ತದೆ. ಮತ್ತು ಇದನ್ನು ಪರಲಿಯಲ್ಲಿದೆ ಎಂದು ವಾದಿಸಲಾಗುತ್ತದೆ. ಆದರೆ ಕೆಲವರು ಈ ಜ್ಯೋತಿರ್ಲಿಂಗದ ಸ್ಥಳವು ಜಾರ್ಖಂಡ್‌ನ ದೇವಘರ್ ಅಥವಾ ಹಿಮಾಚಲ ಪ್ರದೇಶದ ಬೈಜ್‌ನಾಥ್‌ನಲ್ಲಿದೆ ಎಂದು ಹೇಳುತ್ತಾರೆ. ಈ ಭೂಮಿ ಹಿಂದೆ ಶವಸಂಸ್ಕಾರದ ಸ್ಥಳವಾಗಿತ್ತು ಮತ್ತು ಆದ್ದರಿಂದ ಶಿವನನ್ನು ಆರಾಧಿಸುತ್ತಿದ್ದ ಭೈರವನಂತಹ ತಾಂತ್ರಿಕರ ವಾಸಸ್ಥಾನವಾಗಿತ್ತು ಎಂದು ನಂಬಲಾಗಿದೆ.

6 ಗುಜರಾತಿನಲ್ಲಿರುವ ನಾಗೇಶ್ವರ ಜ್ಯೋತಿರ್ಲಿಂಗ: ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ನಾಗೇಶ್ವರ ಜ್ಯೋತಿರ್ಲಿಂಗವು ದುರ್ಕವನದಲ್ಲಿದೆ ಎಂದು ಹೇಳಲಾಗುತ್ತದೆ.

7 ಉತ್ತರಾಖಂಡದ ಕೇದಾರನಾಥದಲ್ಲಿರುವ ಕೇದಾರೇಶ್ವರ ಜ್ಯೋತಿರ್ಲಿಂಗ: ಹಿಂದೂಗಳಿಗಾಗಿ ಚಾರ್ ಧಾಮ್ ತೀರ್ಥ ಯಾತ್ರೆಯನ್ನು ರೂಪಿಸುವ ನಾಲ್ಕು ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದಾದ ಕೇದಾರನಾಥ ಉತ್ತರಾಖಂಡದ ಪರ್ವತಗಳಲ್ಲಿದೆ ಮತ್ತು ಪ್ರತಿ ವರ್ಷ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುವರು.

ಇದನ್ನೂ ಓದಿ: Mahashivratri 2025: ಈ ಹೂಗಳಿಂದ ಪೂಜೆ ಮಾಡಿದ್ರೆ ಪರಮೇಶ್ವರ ಸಂತೃಪ್ತನಾಗುತ್ತಾನೆ...!
8 ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ತ್ರಯಂಬಕೇಶ್ವರ ಜ್ಯೋತಿರ್ಲಿಂಗ: ನಮ್ಮಲ್ಲಿ ಹೆಚ್ಚಿನವರು ಶಿರಡಿಯ ಬಗ್ಗೆ ಕೇಳಿದ್ದೇವೆ. ಆದರೆ ಯಾತ್ರಿ ಕೇಂದ್ರ ತ್ರಯಂಬಕೇಶ್ವರದ ಬಗ್ಗೆ ಹೆಚ್ಚಿನವರು ತಿಳಿದಿಲ್ಲ. ಇದು ಭಾರತದ ಹಿಂದೂಗಳಿಗೆ ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ತ್ರಯಂಬಕ್ ಪಟ್ಟಣದಲ್ಲಿರುವ ಇದು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಹೊಂದಿದ್ದು, ತುಂಬಾನೇ ಜನಪ್ರಿಯವಾಗಿದೆ.

9 ತಮಿಳುನಾಡಿನ ರಾಮೇಶ್ವರದಲ್ಲಿರುವ ರಾಮೇಶ್ವರ ಜ್ಯೋತಿರ್ಲಿಂಗ: ಭಾರತದ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಒಂದಾದ ರಾಮೇಶ್ವರ ದೇವಾಲಯವು ಅದ್ಭುತ ವಾಸ್ತುಶಿಲ್ಪ ಮತ್ತು ಜ್ಯೋತಿರ್ಲಿಂಗಕ್ಕೆ ಹೆಸರುವಾಸಿಯಾಗಿದೆ.

10 ಮಹಾರಾಷ್ಟ್ರದ ದಕಿನಿಯಲ್ಲಿ ಭೀಮಾಶಂಕರ ಜ್ಯೋತಿರ್ಲಿಂಗ: ಮಹಾರಾಷ್ಟ್ರ ರಾಜ್ಯದಲ್ಲಿರುವ ಮತ್ತೊಂದು ಜ್ಯೋತಿರ್ಲಿಂಗ ಎಂದು ಹೇಳಬಹುದು. ಭೀಮಾಶಂಕರ ಪುಣೆ ನಗರದ ಬಳಿ ಅತ್ಯಂತ ಜನಪ್ರಿಯ ತಾಣವಾಗಿದೆ. ಈ ಸ್ಥಳವು ಭೀಮ ಎಂಬ ದುಷ್ಟ ಅಸುರನಿಂದ ತನ್ನ ಹೆಸರನ್ನು ಪಡೆಯುತ್ತದೆ, ಅವನು ಯುಗಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದನು ಮತ್ತು ಯುದ್ಧದ ನಂತರ ಶಿವನಿಂದ ಬೂದಿಯಾದನು. ಇತರ ದೇವತೆಗಳ ಕೋರಿಕೆಯ ಮೇರೆಗೆ ಶಿವನು ಈ ಸ್ಥಳದಲ್ಲಿ ಭೀಮಾಶಂಕರ ಜ್ಯೋತಿರ್ಲಿಂಗದ ರೂಪದಲ್ಲಿ ಪ್ರಕಟಗೊಂಡನು.

11 ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ವಿಶ್ವೇಶ್ವರ ಜ್ಯೋತಿರ್ಲಿಂಗ: ವಾರಾಣಾಸಿಯು ಭಾರತದಲ್ಲಿ ಭೇಟಿ ನೀಡುವ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಕಾಶಿ ವಿಶ್ವನಾಥ ದೇವಾಲಯವು ಇಲ್ಲಿನ ವಿಶ್ವೇಶ್ವರ ಜ್ಯೋತಿರ್ಲಿಂಗದಿಂದಾಗಿ ತುಂಬಾನೇ ಜನಪ್ರಿಯತೆಯನ್ನು ಪಡೆದಿದೆ. ಪ್ರಮುಖ ಹಬ್ಬಗಳಲ್ಲಿ, ವಿಶೇಷವಾಗಿ ಮಹಾಶಿವರಾತ್ರಿಯಲ್ಲಿ ಇಲ್ಲಿ ನಡೆಯುವ ಭವ್ಯ ಆರತಿಗಳು ನೀವು ನೋಡಲೆಬೇಕು.

12 ಮಹಾರಾಷ್ಟ್ರದ ದೇವಗಿರಿಯಲ್ಲಿರುವ ಗೃಷ್ಣೇಶ್ವರ ಜ್ಯೋತಿರ್ಲಿಂಗ: ದೇವಗಿರಿ ಮತ್ತು ಮಹಾರಾಷ್ಟ್ರದ ಔರಂಗಾಬಾದ್ ಬಳಿಯ ವೆರುಲ್ ಎಂಬ ಸಣ್ಣ ಹಳ್ಳಿಯಲ್ಲಿ ನೆಲೆಗೊಂಡಿರುವ ಗೃಷ್ಣೇಶ್ವರ ಪ್ರಾಚೀನ ಶಿವ ಪುರಾಣದಲ್ಲಿ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸಿದ್ದಾರೆ
