Mahashivratri 2025: ಈ ಹೂಗಳಿಂದ ಪೂಜೆ ಮಾಡಿದ್ರೆ ಪರಮೇಶ್ವರ ಸಂತೃಪ್ತನಾಗುತ್ತಾನೆ...!
ಶಿವನನ್ನು ಒಲಿಸಲು ಶಿವ ಪಂಚಾಕ್ಷರಿಯ ಐದಕ್ಷರ ಸಾಕು. ಅಭಿಷೇಕ ಪ್ರಿಯನಾದ ಶಿವನಿಗೆ ಒಂದು ಬಿಲ್ವಪತ್ರೆಯನ್ನು ಅರ್ಪಿಸಿದರೆ ಸಾಕು ಸಕಲ ಪಾಪಕರ್ಮಗಳಿಂದಲೂ ಮುಕ್ತಿ ಸಿಗುತ್ತೆ. ಹಾಗಾಗಿ ಶಿವಶಂಕರನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲು ಈ ಶಿವರಾತ್ರಿ ಹಬ್ಬದಂದು ಶಿವನಿಗೆ ಯಾವ ಹೂವು ಅರ್ಪಿಸಿದ್ದರೆ ಪರಮೇಶ್ವರ ಮೆಚ್ಚಿಕೊಳ್ಳುತ್ತಾನೆ ಎಂಬುದನ್ನು ನೋಡೋಣ.

ಶಿವ

ಶಿವರಾತ್ರಿ ಶಿವನನ್ನು ಪೂಜಿಸಲು ಮತ್ತು ಬಯಸಿದ ವರವನ್ನು, ಆಶೀರ್ವಾದವನ್ನು ಪಡೆಯಲು, ಈಶನನ್ನು ಒಲಿಸಿಕೊಳ್ಳಲು ಮಂಗಳಕರವಾದ ದಿನ. ಶಿವನನ್ನು ಯಾರು ಯಾವ ಭಾವದಿಂದ ಪೂಜಿಸುತ್ತಾರೋ ಅವರಿಗೆ ಅದೇ ಭಾವದಲ್ಲಿ ಪ್ರತಿಫಲ ಕೂಡ ಸಿಗುತ್ತದೆ ಎಂಬ ನಂಬಿಕೆ ಇದೆ. ಶಿವನನ್ನು ಒಲಿಸಲು ಶಿವ ಪಂಚಾಕ್ಷರಿಯ ಐದಕ್ಷರ ಸಾಕು. ಅಭಿಷೇಕ ಪ್ರಿಯನಾದ ಶಿವನಿಗೆ ಒಂದು ಬಿಲ್ವಪತ್ರೆಯನ್ನು ಅರ್ಪಿಸಿದರೆ ಸಾಕು ಸಕಲ ಪಾಪಕರ್ಮಗಳಿಂದಲೂ ಮುಕ್ತಿ ಸಿಗುತ್ತೆ. ಹಾಗಾಗಿ ಶಿವಶಂಕರನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲು ಈ ಶಿವರಾತ್ರಿ ಹಬ್ಬದಂದು ಶಿವನಿಗೆ ಯಾವ ಹೂವು ಅನ್ನು ಅರ್ಪಿಸಿದ್ದರೆ ಪರಮೇಶ್ವರ ಮೆಚ್ಚಿಕೊಳ್ಳುತ್ತಾನೆ ಎಂಬುದನ್ನು ನೋಡೋಣ.
ಬಿಲ್ವಪತ್ರೆ

ಶಿವ ದೇವರ ಆರಾಧನೆಯಲ್ಲಿ ಬಿಲ್ವಪತ್ರೆಗೆ ಬಲು ಮಹತ್ವವಿದ್ದು, ಶಿವನ ಪೂಜೆಗೆ ಬಿಲ್ವಪತ್ರೆ ಬಹಳ ಅಗತ್ಯ. ಬಿಲ್ವಪತ್ರೆ ಇಲ್ಲದೆ ಶಿವನ ಆರಾಧನೆಯೇ ಅಪೂರ್ಣ ಎಂಬ ನಂಬಿಕೆ ಇದ್ದು, ಬಿಲ್ವಪತ್ರೆ ನೈವೇದ್ಯವಿಲ್ಲದೆ ಶಿವನ ಪೂಜೆಯು ಫಲಪ್ರದವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಬಿಲ್ವಪತ್ರೆಯನ್ನು ಅರ್ಪಿಸಿದರೆ ಶಿವದೇವರು ಪ್ರಸನ್ನರಾಗಲಿದ್ದು, ಈ ಬಿಲ್ವಪತ್ರೆಯನ್ನು ಅರ್ಪಿಸಿದರೆ ಕಷ್ಟಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. ಹಾಗಾಗಿ ಶಿವ ರಾತ್ರಿಯಂದು ಬಿಲ್ವ ಪತ್ರೆ ಅರ್ಪಿಸುವುದು ಮಂಗಳಕರ.
ಧತುರಾ

ಧತುರಾ ಶಿವನ ನೆಚ್ಚಿನ ಹೂವು. ಅಮೃತ ಮಥನದಿಂದ ಹೊರಕ್ಕೆ ಬಂದ ವಿಷವನ್ನು ಶಿವನು ಕುಡಿದಾಗ, ಈ ಹೂವು ಶಿವನ ಎದೆಯಿಂದ ಕಾಣಿಸಿಕೊಂಡಿತು. ಆದ್ದರಿಂದ ಅಹಂಕಾರ, ಪೈಪೋಟಿ, ಅಸೂಯೆ ಮತ್ತು ದ್ವೇಷದ ವಿಷವನ್ನು ತೊಡೆದುಹಾಕಲು ಶಿವಪೂಜೆಯ ಸಮಯದಲ್ಲಿ ಧತುರಾವನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಈ ಹೂವುಗಳಿಂದ ಶಿವನನ್ನು ಪೂಜಿಸಿದರೆ, ವಾಗ್ದಾನ ಮಾಡದ ಕಾರಣದಿಂದ ಉಂಟಾಗುವ ಪಾಪ ಮತ್ತು ಸುಳ್ಳು ಹೇಳುವ ಪಾಪವು ನಾಶವಾಗುತ್ತದೆ.
ದಾಸವಾಳದ ಹೂವು

ಈಶ್ವರನ ಆರಾಧನೆಯಲ್ಲಿ ದಾಸವಾಳ ಹೂವನ್ನು ಬಳಸುವುದರಿಂದ ಕೈಲಾಸದಲ್ಲಿ ವಾಸಿಸುವ ವರವನ್ನು ಶಿವ ಕರುಣಿಸುತ್ತಾನೆ.
ಮಲ್ಲಿಗೆ

ಅಲಂಕಾರ ಪ್ರಿಯ ಶಿವನಿಗೆ ಮಲ್ಲಿಗೆ ಅರ್ಪಿಸುವುದು ಶ್ರೇಷ್ಠ ಎಂದು ನಂಬಲಾಗಿದ್ದು, ಮಲ್ಲಿಗೆಯನ್ನು ಶಿವ ಪೂಜೆಯಲ್ಲಿ ಬಳಸುವುದರಿಂದ ಮನೆಯಲ್ಲಿ ಸಮೃದ್ಧಿ ಮತ್ತು ಸಂಪತ್ತು ತುಂಬುತ್ತದೆ.
ಈ ಸುದ್ದಿಯನ್ನು ಓದಿ: Shivratri Fasting: ಶಿವರಾತ್ರಿ ಉಪವಾಸ- ಆರೋಗ್ಯಕ್ಕೆ ಏನು ಲಾಭವಿದೆ?
ಗುಲಾಬಿ ಹೂವು

ಶಿವನನ್ನು ಗುಲಾಬಿ ಹೂವುಗಳಿಂದ ಪೂಜಿಸಿದಾಗ ಅದು ಹತ್ತು ಕುದುರೆಗಳಿಗೆ ಮಾಡಿದ ಯಜ್ಞಕ್ಕೆ ಸಮನಾಗಿರುತ್ತದೆ ಎಂದು ಹೇಳಲಾಗುತ್ತದೆ.
ಕಾಡು ಮಲ್ಲಿಗೆ
ಕಾಡು ಮಲ್ಲಿಗೆ ಹೂವನ್ನು ಶಿವನಿಗೆ ಅರ್ಪಿಸಿದಾಗ, ಕೌಟುಂಬಿಕ ಸುಖ, ಅವಿವಾಹಿತರಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಪ್ರಾಪ್ತಿಯಾಗಿ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ.
ದೂರ್ವೆ

ದೂರ್ವೆಯು ಸಕಾರಾತ್ಮಕತೆಯ ಪ್ರತೀಕವಾಗಿದ್ದು, ಶಿವನಿಗೆ ಇದನ್ನು ಅರ್ಪಿಸುವುದರಿಂದ ಜೀವನದಲ್ಲಿ ಯಶಸ್ಸು ದೊರೆಯುತ್ತದೆ.
ಕಮಲದ ಹೂವು
ಶಿವನ ಪೂಜೆಯಲ್ಲಿ ಕಮಲದ ಹೂಗಳನ್ನು ಅರ್ಪಿಸುವುದರಿಂದ ನೀವು ಇತರರಿಗೆ ನೋವುಂಟು ಮಾಡಿದ್ದರೆ, ನಿಂದಿಸಿದ ಕಾರಣಕ್ಕೆ ಉಂಟಾಗುವ ಪಾಪಗಳು ನಿವಾರಣೆಯಾಗುತ್ತವೆ.
ನೈದಿಲೆ

ನೈದಿಲೆ ಹೂವುಗಳಿಂದ ಶಿವನನ್ನು ಪೂಜಿಸಿದರೆ ಐದು ಮಹಾ ಪಾಪಗಳ ದೋಷವು ನಿವಾರಣೆಯಾಗುತ್ತದೆ.
ಶಮಿ ಪುಷ್ಪ, ಬೇಲದ ಹೂವು, ಹಲಸಿನ ಪುಷ್ಪ
ಹೌದು, ಹಲಸಿನ ಮರದಲ್ಲಿ ಬೆಳೆವ ಪುಷ್ಪವನ್ನು ಸಾಮಾನ್ಯವಾಗಿ ಯಾವ ದೇವರಿಗೂ ಅರ್ಪಿಸುವುದಿಲ್ಲ. ಆದರೆ, ಶಿವನಿಗೆ ಆ ಹೂವಿನ ಮೇಲೆ ಪ್ರೀತಿ ಇದೆ. ಶಮಿ ಪುಷ್ಪ, ಬೇಲದ ಹೂವು ಬಳಕೆಗೆ ಶಿವನ ಆರಾಧನೆಯಲ್ಲಿ ವಿಶೇಷ ಮಹತ್ವವಿದೆ.