ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಒಡಿಐ ಕ್ರಿಕೆಟ್‌ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ ರೋಹಿತ್‌ ಶರ್ಮಾ!

ಭಾರತ ಏಕದಿನ ತಂಡದ ನಾಯಕ ರೋಹಿತ್‌ ಶರ್ಮಾ ಕ್ರಿಕೆಟ್‌ ಅಭ್ಯಾಸವನ್ನು ಆರಂಭಿಸಿದ್ದಾರೆ. ಆ ಮೂಲಕ ಅವರು 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯವರೆಗೂ ಆಡುವುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಅವರ ಪ್ರದರ್ಶನದ ಮೇಲೆ ಇದೆಲ್ಲಾವೂ ಅವಲಂಬನೆಯಾಗಿದೆ.

ಒಡಿಐ ನಿವೃತ್ತಿ ಬಗ್ಗೆ ರೋಹಿತ್‌ ಶರ್ಮಾ ಮಹತ್ವದ ಹೇಳಿಕೆ!

ರೋಹಿತ್‌ ಶರ್ಮಾ ತಮ್ಮ ಒಡಿಐ ನಿವೃತ್ತಿ ಬಗ್ಗೆ ಹೇಳಿಕೆ ನೀಡಿದ್ದಾರೆ.

Profile Ramesh Kote Aug 12, 2025 11:11 PM

ನವದೆಹಲಿ: ಭಾರತ ಏಕದಿನ ತಂಡದ (India ODI Team) ನಾಯಕ ರೋಹಿತ್‌ ಶರ್ಮಾ(Rohit Sharma) ಇತ್ತೀಚೆಗೆ ತಮ್ಮ ತಮ್ಮ ಕುಟುಂಬದ ಜೊತೆ ಇಂಗ್ಲೆಂಡ್‌ ಪ್ರವಾಸವನ್ನು ಹಮ್ಮಿಕೊಂಡಿದ್ದರು. ಇದೀಗ ಭಾರತಕ್ಕೆ ಮರಳಿರುವ ಅವರು ಜಿಮ್‌ ಸೇರಿದಂತೆ ಕ್ರಿಕೆಟ್‌ ಅಭ್ಯಾಸವನ್ನು ಆರಂಭಿಸಿದ್ದಾರೆ. ಭಾರತ ತಂಡದ ಮಾಜಿ ಬ್ಯಾಟಿಂಗ್‌ ಕೋಚ್‌ ಅಭಿಷೇಕ್‌ ನಾಯರ್‌ (ABhishek Nayar)ಅವರೊಂದಿನ ಫೋಟೋವನ್ನು ಹಿಟ್‌ಮ್ಯಾನ್‌ ಇತ್ತೀಚೆಗೆ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಮೂಲಕ ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಹಿಟ್‌ಮ್ಯಾನ್‌ ಎದುರು ನೋಡುತ್ತಿದ್ದಾರೆ.

ರೋಹಿತ್‌ ಶರ್ಮಾ ಅವರ ಈ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಾಗೂ ತಮ್ಮ ಇತ್ತೀಚಿನ ಹೇಳಿಕೆಯ ಮೂಲಕ ತಾವು 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯವರೆಗೂ ಆಡುವ ಇಂಗಿತವನ್ನು ಹೊಂದಿರುವುದಾಗಿ ಖಚಿತಪಡಿಸಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್‌ ಟೂರ್ನಿಯು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ನಡೆಯಲಿದೆ.

2025ರ ಮೇ ತಿಂಗಳಿನಲ್ಲಿ ಭಾಗವಹಿಸಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ರೋಹಿತ್‌ ಶರ್ಮಾ, "ತಮ್ಮ ಮನಸಿನಲ್ಲಿ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯವರೆಗೂ ಆಡುವ ಗುರಿಯಿದೆ. ಇದು ನನ್ನ ಮನಸಿನಲ್ಲಿದೆ," ಎಂದು ಹೇಳಿದ್ದಾರೆ.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಟೆಸ್ಟ್‌ ನಿವೃತ್ತಿ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಆಕಾಶ್‌ ಚೋಪ್ರಾ!

"ನನ್ನ ವೃತ್ತಿ ಜೀವನದಲ್ಲಿ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯನ್ನು ಸೇರಿಸಬೇಕಾಗಿದೆ. ಇದು ನಡೆದರೆ ಅತ್ಯಂತ ಶ್ರೇಷ್ಠವಾಗಿರುತ್ತದೆ," ಎಂದು ಕ್ರೀಡಾ ಪತ್ರಕರ್ತರಾದ ವಿಮಲ್‌ಕುಮಾರ್‌ ಅವರ ಸಂದರ್ಶನದಲ್ಲಿ ಹಿಟ್‌ಮ್ಯಾನ್‌ ತಿಳಿಸಿದ್ದರು.

ರೋಹಿತ್‌ ಶರ್ಮಾ ಅವರಯ 273 ಪಂದ್ಯಗಳಿಂದ 48.77 ರ ಸರಾಸರಿಯಲ್ಲಿ 11,168 ರನ್‌ಗಳನ್ನು ಕಲೆ ಹಾಕಿದ್ದಾರೆ. ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರ ಬಳಿ ಚರ್ಚೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ಮೂಲಗಳು ಇತ್ತೀಚೆಗೆ ಪಿಟಿಐಗೆ ತಿಳಿಸಿದ್ದವು.

"ಅವರು ವಿಜಯ್ ಹಜಾರೆ ಆಡಿದರೂ, ಅದಕ್ಕೂ ಮೊದಲು ಆರು ಏಕದಿನ ಪಂದ್ಯಗಳನ್ನು ಆಡಬೇಕಾಗುತ್ತದೆ. ಆಸ್ಟ್ರೇಲಿಯಾ ಏಕದಿನ ಸರಣಿ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ನಡುವೆ, ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ಸರಣಿಯನ್ನು ಆಡಲಿದೆ. ಈ ಪಂದ್ಯಗಳು ನವೆಂಬರ್ 13, 16 ಮತ್ತು 19 ರಂದು ಕ್ರಮವಾಗಿ ರಾಜ್‌ಕೋಟ್‌ನಲ್ಲಿ ಮೂರು ಲಿಸ್ಟ್ ಎ ಪಂದ್ಯಗಳು (50 ಓವರ್‌ಗಳು) ನಡೆಯಲಿವೆ," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

IND vs ENG: ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅನುಪಸ್ಥಿತಿ ಕಾಡುತ್ತಿದೆ ಎಂದ ಕೆಎಲ್‌ ರಾಹುಲ್!

"ಇದೀಗ ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಈ ಜೋಡಿ ಮೂರು ಎ ಪಂದ್ಯಗಳನ್ನು ಆಡಲು ಬಯಸುತ್ತಾರೆಯೇ ಅಥವಾ ಬಹುಶಃ ಎರಡು ಪಂದ್ಯಗಳನ್ನು ಆಡಲು ಬಯಸುತ್ತಾರೆಯೇ ಎಂಬುದು ಪ್ರಶ್ನೆ. ಅಜಿತ್ ಅಗರ್ಕರ್ ಮತ್ತು ಅವರ ಸಹೋದ್ಯೋಗಿಗಳು ಅದನ್ನು ಬಯಸುತ್ತಾರೆಯೇ ಎಂಬುದು ಇನ್ನೂ ಮುಖ್ಯವಾಗಿದೆ," ಎಂದು ಮೂಲಗಳು ಹೇಳಿವೆ.

"ವಿಜಯ್ ಹಜಾರೆ ಟ್ರೋಫಿ (ಡಿಸೆಂಬರ್ 24, 2025 - ಜನವರಿ 18, 2025), ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಏಕದಿನ ಪಂದ್ಯಗಳು (ಜನವರಿ 11, 14, 18) ಏಕ ಕಾಲದಲ್ಲಿ ನಡೆಯಲಿವೆ. ಆದ್ದರಿಂದ ಅವರು ವಿಜಯ್ ಹಜಾರೆ ಟ್ರೋಫಿಯನ್ನು ಆಡಿದರೂ ಅದು ಎರಡರಿಂದ ಮೂರು ಪಂದ್ಯಗಳಲ್ಲಿ ಮಾತ್ರ ಆಡಬಹದು," ಎಂದು ಮೂಲಗಳು ತೀರ್ಮಾನಿಸಿವೆ.