ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ನಿಮ್ಮ ಮನದಾಸೆಗಳು ಈಡೇರಬೇಕಾ? ಹಾಗಾದ್ರೆ ಗುರುವಾರ ತಪ್ಪದೇ ಈ ಮಂತ್ರಗಳನ್ನು ಪಠಿಸಿ

ವಿಷ್ಣುವಿಗೆ ಪ್ರಿಯವಾದ ಈ ದಿನದಂದು ಜಪಿಸುವ ಮಂತ್ರಗಳಿಂದಾಗಿ ಭಕ್ತರ ಮನೋಬಿಲಾಷೆಗಳು ನೆರವೇರಲಿದ್ದು, ಶ್ರದ್ಧೆ ಹಾಗೂ ಭಕ್ತಿಯಿಂದ ಆದಿ ಪುರುಷ ವಿಷ್ಣು ದೇವರರನ್ನು ಆರಾಧಿಸಿದರೆ ಆತ ಪ್ರಸನ್ನನಾಗಿ ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಈಡೇರುವಂತೆ ಮಾಡುತ್ತಾನೆ. ಈ ದಿನದಂದು ಜಪಿಸುವ ಕೆಲ ಮಂತ್ರಗಳಿಂದ ಕೇವಲ ವಿಷ್ಣುದೇವನ ಅನುಗ್ರಹವಷ್ಟೇ ಅಲ್ಲ, ಲಕ್ಷ್ಮೀ ದೇವಿಯ ಕೃಪಯು ಸಿಗುತ್ತದೆ.

ವಿಷ್ಣು

ಬೆಂಗಳೂರು: ಗುರುವಾರವು (Thursday) ಹಿಂದೂ ಧಾರ್ಮಿಕ ಸಂಪ್ರದಾಯದಂತೆ (Hindu Religion) ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಭಕ್ತರು ಸಾಯಿಬಾಬಾ, ರಾಯರು (ಶ್ರೀ ರಾಘವೇಂದ್ರ ಸ್ವಾಮಿ) ಮತ್ತು ವಿಷ್ಣುವಿನ (Vishnu) ಪೂಜೆಗೆ (Pooje) ಮೀಸಲಾಗಿದ್ದು, ಜ್ಯೋತಿಷ್ಯ ಹಾಗೂ ಧಾರ್ಮಿಕ (Astro Tips) ಗ್ರಂಥಗಳ ಪ್ರಕಾರ, ಗುರುವಾರದಂದು ವಿಶೇಷವಾಗಿ ವಿಷ್ಣು ಮಂತ್ರಪಠಣ ಮಾಡುವುದರಿಂದ ಜೀವನದಲ್ಲಿ ಧನಾತ್ಮಕ ಶಕ್ತಿ, ಅದೃಷ್ಟ ಹಾಗೂ ಆರ್ಥಿಕ ಸಮೃದ್ಧಿ ಹೆಚ್ಚುತ್ತದೆ.

ಅಲ್ಲದೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವಾರ ಮಾಡುವ ಭಗವಾನ್ ವಿಷ್ಣುವಿನ ಪೂಜೆಗೆ ಅತ್ಯಂತ ಮಹತ್ವ ಇದ್ದು, ಬ್ರಹ್ಮಾಂಡದ ಸೃಷ್ಟಿಕರ್ತನಾದ ಶ್ರೀಮಹಾವಿಷ್ಣುವಿನ ಮಂತ್ರಗಳನ್ನು ಪಠಿಸುವುದರಿಂದ ಭಕ್ತರಿಗೆ ಸುಖ, ಶಾಂತಿ, ಆರೋಗ್ಯ, ಸಮೃದ್ಧಿ ದೊರೆಯುತ್ತದೆ ಎಂದು ಧಾರ್ಮಿಕ ಗ್ರಂಥಗಳು ತಿಳಿಸಿವೆ.

ವಿಷೇಷವಾಗಿ, ವಿಷ್ಣುವಿಗೆ ಪ್ರಿಯವಾದ ಈ ದಿನದಂದು ಜಪಿಸುವ ಮಂತ್ರಗಳಿಂದಾಗಿ ಭಕ್ತರ ಮನೋಬಿಲಾಷೆಗಳು ನೆರವೇರಲಿದ್ದು, ಶ್ರದ್ಧೆ ಹಾಗೂ ಭಕ್ತಿಯಿಂದ ಆದಿ ಪುರುಷ ವಿಷ್ಣು ದೇವರರನ್ನು ಆರಾಧಿಸಿದರೆ ಆತ ಪ್ರಸನ್ನನಾಗಿ ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಈಡೇರುವಂತೆ ಮಾಡುತ್ತಾನೆ.

ಈ ದಿನದಂದು ಜಪಿಸುವ ಕೆಲ ಮಂತ್ರಗಳಿಂದ ಕೇವಲ ವಿಷ್ಣುದೇವನ ಅನುಗ್ರಹವಷ್ಟೇ ಅಲ್ಲ, ಲಕ್ಷ್ಮೀ ದೇವಿಯ ಕೃಪೆಯನ್ನು ಕೂಡ ದೊರೆಯಲಿದ್ದು, ತೊಂದರೆ - ತಾಪತ್ರಯ ನಿವಾರಣೆ ಆಗುತ್ತದೆ.. ಅಲ್ಲದೇ ಗುರುವಾರದಂದು ಪಠಿಸುವ ಕೆಲ ಮಂತ್ರಗಳು ವ್ಯಕ್ತಿಗೆ ಆತ್ಮಸ್ಥೈರ್ಯ ತುಂಬಲಿದ್ದು, ವೃತ್ತಿ ಮತ್ತು ಉದ್ಯೋಗದಲ್ಲಿ ಪ್ರಗತಿ, ಮನಶಾಂತಿ ದೊರೆಯುವಂತೆ ಮಾಡುತ್ತದೆ. ಇವೆಲ್ಲವೂ ಗುರುವಾರದ ಮಂತ್ರಪಠಣದಿಂದ ದೊರೆಯುವ ಫಲಗಳು ಎಂದು ಶಾಸ್ತ್ರಗಳು ಹೇಳುತ್ತವೆ.

ಹಾಗಾದ್ರೆ ಬನ್ನಿ ಶ್ರೀಹರಿಯ ಯಾವ ಮಂತ್ರಗಳನ್ನು ಪಠಿಸುವುದರಿಂದ ಆತನ ಕೃಪೆ ಪಡೆಯಬಹುದು..? ಅವನ ಯಾವ ಮಂತ್ರಗಳಿಗೆ ನಿಮ್ಮ ಕಷ್ಟಗಳು ದೂರ ಮಾಡುವ ಶಕ್ತಿ ಇದೆ ಎಂಬುದನ್ನು ನೋಡೋಣ

ಗುರುವಾರದಂದು ಪಠಿಸಬಹುದಾದ 5 ಪ್ರಮುಖ ವಿಷ್ಣು ಮಂತ್ರಗಳು:

"ಓಂ ನಮೋ ಭಗವತೇ ವಾಸುದೇವಾಯ ನಮಃ"

ಇದು ವಿಷ್ಣುವನ್ನು ಸುಲಭವಾಗಿ ಒಲಿಸಿಕೊಳ್ಳಲು ಇರುವ ಮಂತ್ರಗಳಲ್ಲಿ ಒಂದಾಗಿದ್ದು, ಇದನ್ನು ನೀವು ನಿಯಮಿತವಾಗಿ ಪಠಿಸುವುದರಿಂದ ವಿಷ್ಣು ದೇವರು ಸಂತುಷ್ಟಗೊಂಡು ಅವನ ಕೃಪೆ ದೊರೆಯಲಿದೆ.

"ಓಂ ಶ್ರೀ ವಿಷ್ಣುವೇ ಚ ವಿದ್ಮಹೇ, ವಾಸುದೇವಾಯ ಧೀಮಹಿ, ತನ್ನೋ ವಿಷ್ಣುಃ ಪ್ರಚೋದಯಾತ್"

"ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ, ಪ್ರಣತಃ ಕ್ಲೇಶನಾಶಾಯೇ ಗೋವಿಂದಾಯ ನಮೋ ನಮಃ"

"ಓಂ ಶ್ರೀ ಕೃಷ್ಣಃ ಶರಣಂ ಮಮಃ"

ಹರೆ ಕೃಷ್ಣ ಮಹಾಮಂತ್ರ:

"ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ

ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ"

ಗುರುವಾರದ ದಿನದಂದು ನಾವು ವಿಷ್ಣು ದೇವನ ಈ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎನ್ನುವ ನಂಬಿಕೆಯಿದೆ. ಈ ಮಂತ್ರಗಳ ನಿಯಮಿತವಾದ ಪಠನವು ನಮ್ಮನ್ನು ದುಃಖದಿಂದ ಮುಕ್ತಗೊಳಿಸುತ್ತದೆ. ಭಯವನ್ನು ಕೊನೆಗೊಳಿಸುತ್ತದೆ. ಉದ್ಯೋಗ ಹಾಗೂ ವೃತ್ತಿಯಲ್ಲಿ ಅಭಿವೃದ್ಧಿಯನ್ನು ತರುತ್ತದೆ. ಈ ಮಂತ್ರಗಳನ್ನು ಪಠಿಸುವುದರಿಂದ ಸಮೃದ್ಧಿ, ಸಂತೋಷ ಮತ್ತು ಅದೃಷ್ಟ ಬರುತ್ತದೆ. ಮುಖ್ಯವಾಗಿ, ಇದು ನಿಮ್ಮ ಪೂರ್ವ ಜನ್ಮದ ಪಾಪಗಳನ್ನು ನಿವಾರಣೆಗೊಳ್ಳಲು ಸಹಾಯ ಮಾಡುತ್ತದೆ.