ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಶುಕ್ರವಾರ ಹೀಗೆ ಮಾಡಿದರೆ ಲಕ್ಷ್ಮೀ ದೇವಿ ಪ್ರಸನ್ನಳಾಗುವಳು!

ಶುಕ್ರವಾರದಂದು, ಈ ವಸ್ತುಗಳನ್ನು ಅರ್ಪಿಸಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಬಹುದು. ಈ ಕೆಲವೊಂದು ಕ್ರಮಗಳೊಂದಿಗೆ ಲಕ್ಷ್ಮೀಯನ್ನು ಆರಾಧಿಸುವುದರಿಂದ ಭಕ್ತರ ಎಲ್ಲಾ ಆಸೆಗಳನ್ನು ನೆರವೇರುತ್ತದೆ. ನೀವು ಲಕ್ಷ್ಮಿ ದೇವಿಯಿಂದ ಸಂಪತ್ತು ಮತ್ತು ಸಮೃದ್ಧಿಯ ಆಶೀರ್ವಾದವನ್ನು ಬಯಸಿದರೆ ತಪ್ಪದೇ ಶುಕ್ರವಾರದಂದು ಈ ವಸ್ತುಗಳನ್ನು ಅರ್ಪಿಸಬೇಕು. ಅವುಗಳು ಯಾವುವು ಗೊತ್ತೇ..?

ಲಕ್ಷ್ಮೀ ದೇವಿ

ಧಾರ್ಮಿಕ ನಂಬಿಕೆಗಳ ಪ್ರಕಾರ, ಶುಕ್ರವಾರದಂದು(Friday) ಲಕ್ಷ್ಮಿ ದೇವಿಯನ್ನು(Goddess Lakshmi) ಪೂಜಿಸುವುದರಿಂದ ಶುಭ ಫಲಿತಾಂಶಗಳು (Good Result) ಸಿಗಲಿದ್ದು, ಈ ದಿನ ಲಕ್ಷ್ಮಿ ದೇವಿಯ ಆರಾಧನೆಗೆ ಬಹಳ ಶೇಷ್ಠವೆಂದು ಪರಿಗಣಿಸಲಾಗುತ್ತದೆ. ಇದರ ಜೊತೆಗೆ ಶುಕ್ರವಾರದಂದು ಲಕ್ಷ್ಮೀ ದೇವಿಗೆ ಪ್ರಿಯವಾದ ಕೆಲ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದರಿಂದ ಆರ್ಥಿಕ ಲಾಭವನ್ನೂ ಪಡೆಯಬಹುದಾಗಿದ್ದು, ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯ ಈ ಪರಿಹಾರಗಳನ್ನು ಅನುಸರಿಸುವುದರಿಂದ ಆಕೆಯ ಅನುಗ್ರಹಕ್ಕೆ ಪಾತ್ರರಾಗಿ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.

ಜ್ಯೋತಿಷ್ಯ ಶಾಸ್ತ್ರದ(Astro Tips) ಪ್ರಕಾರ, ಸಂಪತ್ತು ವೃದ್ಧಿಯಾಗಬೇಕೆಂದರೆ ಲಕ್ಷ್ಮಿ ದೇವಿಯನ್ನು ಪೂಜಿಸುವುದರ ಜೊತೆಗೆ ಈ ಪವಿತ್ರ ದಿನದಂದು ಆಕೆಯನ್ನು ಪ್ರಸನ್ನಗೊಳಿಸಲು ಈ ವಸ್ತುಗಳನ್ನು ಅರ್ಪಿಸಬಹುದು. ಇದರಿಂದ ನಿಮ್ಮ ಜೀವನದಲ್ಲಿ ತಲೆದೋರಿದ ಆರ್ಥಿಕ ಸಮಸ್ಯೆಗಳು(Finacial Problem) ನಿವಾರಣೆಗೊಂಡು ಹಣಕಾಸಿನ ವಿಚಾರದಲ್ಲಿ ಲಾಭವನ್ನು ಪಡೆಯಬಹುದು.

ಹಾಗಾಗಿ, ನೀವು ಲಕ್ಷ್ಮಿ ದೇವಿಯ ಅನುಗ್ರಹ ಪಡೆದುಕೊಳ್ಳಬೇಕು ಎಂದಿದ್ದರೆ ಲಕ್ಷ್ಮೀ ದೇವಿಯ ಪೂಜೆವೇಳೆ ಆಕೆಗೆ ಇಷ್ಟವಾಗುವ ಈ ವಸ್ತುಗಳನ್ನು ಅರ್ಪಿಸಿ. ಹಾಗಾದ್ರೆ ಬನ್ನಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಶುಕ್ರವಾರ ನಾವು ಯಾವೆಲ್ಲಾ ಕೆಲಸಗಳನ್ನು ಮಾಡಬೇಕು ಎಂಬುದನ್ನು ಇಲ್ಲಿ ನೋಡೋಣಾ...

ನೈವೇದ್ಯ ಹೀಗಿರಲಿ

ಸಂಪತ್ತಿನ ಅದಿದೇವತೆಯಾದ ಲಕ್ಷ್ಮಿ ದೇವಿಗೆ ಶುಕ್ರವಾರದಂದು ಹಾಲಿನಿಂದ ಮಾಡಿದ ನೈವೇದ್ಯವನ್ನು ಅರ್ಪಿಸಿ. ಏಕೆಂದರೆ ಆಕೆಗೆ ಕ್ಷೀರದಿಂದ ಮಾಡಿದ ಆಹಾರ ತಿನ್ನಿಸುಗಳು ಪ್ರಿಯವಾಗಿದ್ದು, ಹಾಲು ಮತ್ತು ಅನ್ನದಿಂದ ಮಾಡಿದ ಪಾಯಸ ಅಥವಾ ಖೀರ್‌ನ್ನು ನೈವೇದ್ಯವನ್ನು ಲಕ್ಷ್ಮೀ ಪೂಜೆಯಲ್ಲಿ ಇಡುವುದರಿಂದ ದೇವಿ ಸಂತುಷ್ಟಗೊಂಡು, ನಿಮ್ಮ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾಳೆ.

Vastu Tips: ನಿಮ್ಮ ವಾಸಸ್ಥಳ ಮತ್ತು ಕಚೇರಿ ವಾತಾವರಣವನ್ನು ಪಾಸಿಟಿವ್ ಎನರ್ಜಿ ಭರಿತವನ್ನಾಗಿಸಲು ಇಲ್ಲಿದೆ ಸಿಂಪಲ್ ವಾಸ್ತು ಟಿಪ್ಸ್

ಈ ಹೂಗಳನ್ನು ಅರ್ಪಿಸಿ

ಲಕ್ಷ್ಮೀ ಮಾತೆಗೆ ಅತಿ ಪ್ರಿಯವಾಗಿರುವ ಹೂವಾಗಿದೆ ಕಮಲ. ನೀವು ಲಕ್ಷ್ಮೀ ಮಾತೆಯ ಫೋಟೋಗಳಲ್ಲಿ ಕೈಯಲ್ಲಿ ಹಿಡಿದಿಡಿರುವ ಕಮಲವನ್ನು ಕಂಡಿರಬಹುದು. ಹೀಗಾಗಿ ತಾವರೆ ದೇವಿಗೆ ಹೆಚ್ಚು ಪ್ರಿಯವಾದುದು. ವರಲಕ್ಷ್ಮೀ ಪೂಜೆಯಂದು ದೇವಿಗೆ ಕಮಲವನ್ನು ಅರ್ಪಿಸಬಹುದು. ಇದರೊಂದಿಗೆ ಕೆಂಪು ಮಲ್ಲಿಗೆ, ಕೆಂಪು ಗುಲಾಬಿ ಹೂಗಳನ್ನು ಸಮರ್ಪಿಸಬಹುದು.

ಶ್ರೀಯಂತ್ರವನ್ನು ಪೂಜಿಸಿ

ಹಣದ ಸಮಸ್ಯೆಗಳಿಂದ ಬಳಲುತ್ತಿದ್ದವರು, ಶುಕ್ರವಾರ ಶ್ರೀ ಯಂತ್ರವನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸುವುದರಿಂದ ಆ ಸಮಸ್ಯೆ ನಿವಾರಣೆಗೊಳ್ಳುತ್ತದೆ. ಯಂತ್ರವನ್ನು ದೇವರ ಕೋಣೆ ಉತ್ತರದ ಕಡೆ ಅಥವಾ ಮನೆಗೆ ಪ್ರವೇಶದ ಮುಖ್ಯ ಬಾಗಿಲಿನ ಬಳಿ ಇರಿಸಬಹುದು. ಇದರಿಂದ ಆರ್ಥಿಕ ಸಂಕಷ್ಟ ಕಡಿಮೆಯಾಗುತ್ತದೆ.

ಈ ಕ್ರಮಗಳನ್ನು ಪಾಲಿಸಿ

  • ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಲು ಶುಕ್ರವಾರದಂದು ‘ಓಂ ಶ್ರೀಂ ಶ್ರೀಯೇ ನಮಃ’ ಮಹಾಮಂತ್ರವನ್ನು 108 ಬಾರಿ ಜಪಿಸಬೇಕು. ಇದರಿಂದ ನಿಮಗೆ ಶುಭಕರ ಫಲಗಳು ಸಿಗಲಿದೆ ಎನ್ನಲಾಗುತ್ತದೆ.
  • ದೇವಿಯ ಅನುಗ್ರಹಕ್ಕಾಗಿ, ಶುಕ್ರವಾರದಂದು ದಕ್ಷಿಣಾವರ್ತಿ ಶಂಖದಲ್ಲಿ ಶುದ್ಧ ನೀರನ್ನು ತುಂಬಿ, ಅದರಿಂದ ವಿಷ್ಣುವಿಗೆ ಜಲಾಭಿಷೇಕ ಮಾಡುವುದರಿಂದ ಲಕ್ಷ್ಮೀ ಜೊತೆ, ವಿಷ್ಣುವಿನ ಅನುಗ್ರಹವೂ ದೊರೆಯಲಿದೆ.
  • ಸಂಜೆ ಸಮಯದಲ್ಲಿ ಹಸುವಿನ ತುಪ್ಪದಿಂದ ದೀಪ ಹಚ್ಚಿ, ಅದರೊಳಗೆ ಸ್ವಲ್ಪ ಕುಂಕುಮವನ್ನು ಸೇರಿಸಿದರೆ ಮನೆಗೆ ಐಶ್ವರ್ಯಶಕ್ತಿ ಆಕರ್ಷಿಸುತ್ತದೆ ಎಂದು ಹೇಳಲಾಗಿದೆ.
  • ಶುಕ್ರವಾರದ ದಿನ ಬಿಳಿ ಬಣ್ಣದ ಬಟ್ಟೆ ಅಥವಾ ಅಕ್ಕಿಯನ್ನು ಅಗತ್ಯವಿರುವವರಿಗೆ ದಾನ ಮಾಡಿದರೆ ಪುಣ್ಯ ಹೆಚ್ಚುವುದರ ಜೊತೆಗೆ ಆರ್ಥಿಕ ಸ್ಥಿತಿ ಸುಧಾರಣೆಯತ್ತ ಸಾಗುತ್ತದೆ ಎಂದು ನಂಬಲಾಗುತ್ತದೆ.