Astro Tips: ಜೀವನದಲ್ಲಿ ಯಶಸ್ಸು ಬೇಕಾ? ತಾವರೆಯಿಂದ ಹೀಗೆ ಮಾಡಿದರೆ ಅದೃಷ್ಟ ನಿಮ್ಮದಾಗುತ್ತೆ
ಕಮಲ ಹೂವಿಗೆ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನವಿದ್ದು, ಲಕ್ಷ್ಮೀ ದೇವಿ ಕೃಪೆಯ ಸಂಕೇತ ಎನಿಸಿಕೊಂಡಿದೆ. ಶುಕ್ರವಾರ, ಬುಧವಾರ ಮತ್ತು ಏಕಾದಶಿಯಂದು ಕಮಲದಿಂದ ಪೂಜೆ ಮಾಡಿದರೆ ಧನಲಾಭ, ಸಂತಾನ ಭಾಗ್ಯ, ಕುಟುಂಬ ಶಾಂತಿ ಮತ್ತು ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಬನ್ನಿ ಜ್ಯೋತಿಷ್ಯ ಶಾಸ್ತ್ರದ ಸಲಹೆಯ ಪ್ರಕಾರ ಕಮಲದ ಹೂವಿನಿಂದ ಯಾವೆಲ್ಲ ದೋಷ ನಿವಾರಣೆಯಾಗಬಹುದು ಎಂಬುದನ್ನು ನೋಡೋಣ.
ಲಕ್ಷ್ಮೀ ದೇವಿ (ಎಐ ಚಿತ್ರ) -
ಬೆಂಗಳೂರು, ಏ. 6: ಹಿಂದೂ ಸಂಪ್ರದಾಯದಲ್ಲಿ(Hindu Tradition) ತಾವರೆಗೆ (Lotus) ಅತ್ಯಂತ ಪವಿತ್ರ ಸ್ಥಾನವಿದೆ ಮತ್ತು ಶ್ರೇಷ್ಠ ಹೂವೆಂದು ಪರಿಗಣಿಸಲಾಗುತ್ತದೆ. ಇದು ನೈಸರ್ಗಿಕ ಸೌಂದರ್ಯಕ್ಕೆ ಮಾತ್ರ ಸೀಮಿತವಾಗದೆ, ಧಾರ್ಮಿಕ ಮತ್ತು ಜ್ಯೋತಿಷ್ಯ ದೃಷ್ಟಿಯಿಂದಲೂ ಮಹತ್ವವನ್ನು ಹೊಂದಿದೆ. ಧರ್ಮಗ್ರಂಥಗಳಲ್ಲಿ ಲಕ್ಷ್ಮೀ ದೇವಿಯನ್ನು ಕಮಲಾಸನ ಎಂದು ವರ್ಣಿಸಲಾಗಿದೆ. ಕಮಲವೇ ಲಕ್ಷ್ಮೀಯ ಆಸನ ಎಂದರ್ಥ. ಇದೇ ಕಾರಣಕ್ಕೆ ಲಕ್ಷ್ಮೀ ಪೂಜೆಯಲ್ಲಿ (Godess Lakshmi) ತಾವರೆಗೆ ವಿಶೇಷ ಸ್ಥಾನ ದೊರೆತಿದೆ.
ಕಮಲ ಹೂವು ಶುದ್ಧತೆ, ಐಶ್ವರ್ಯ ಮತ್ತು ದೈವಿಕ ಶಕ್ತಿಯ ಸಂಕೇತ. ಭಕ್ತಿಯಿಂದ ಇದನ್ನು ಪೂಜೆಯಲ್ಲಿ ಬಳಸುವುದರಿಂದ ಪಾಪಗಳು ನಿವಾರಣೆಯಾಗುತ್ತವೆ ಮತ್ತು ಮನಸ್ಸಿನ ದುಃಖಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ತಾವರೆ ನಮ್ಮ ಜೀವನದಲ್ಲಿ ಶುಭಫಲ ತರುತ್ತದೆ ಎಂಬ ನಂಬಿಕೆ ಇದೆ. ಹಣವನ್ನು ಆಕರ್ಷಿಸುವ ಶಕ್ತಿ ಇದಕ್ಕಿದೆ ಎಂದು ಶಾಸ್ತ್ರ ಹೇಳುತ್ತದೆ.
ಆದ್ದರಿಂದ ತಾವರೆಯನ್ನು ಲಕ್ಷ್ಮೀ ಪೂಜೆಯಲ್ಲಿ ಬಳಸಿದರೆ ಧನಲಾಭ ಪಡೆಯಬಹುದು ಮತ್ತು ಜೀವನದ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎನ್ನುತ್ತದೆ ಪುರಾಣ ಗ್ರಂಥ. ಇದರಿಂದ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಯಶಸ್ಸು ದೊರೆಯುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಬನ್ನಿ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ (Astro Tips) ಕಮಲದ ಹೂವಿನಿಂದ ಯಾವ ಪರಿಹಾರಗಳನ್ನು ಮಾಡಿದ್ದರೆ ಏನು ಪ್ರಯೋಜನ ಎಂಬುದನ್ನು ತಿಳಿದುಕೊಳ್ಳೋಣ.
ಆರ್ಥಿಕ ಅಭಿವೃದ್ಧಿ
ಶುಕ್ರವಾರ ಕಮಲದ ಹೂವನ್ನು ಲಕ್ಷ್ಮೀ ದೇವಿ ಪಾದಗಳಿಗೆ ಅರ್ಪಿಸಿ. ಇದನ್ನು ನಿರಂತರವಾಗಿ 5 ಶುಕ್ರವಾರಗಳವರೆಗೆ ಮಾಡಿದರೆ ಹಣಕಾಸಿನ ತೊಂದರೆ ಕಡಿಮೆಯಾಗುತ್ತದೆ. ನಿಮ್ಮ ಶ್ರಮಕ್ಕೆ ಫಲ ಸಿಗದಿದ್ದರೆ, ಕಮಲದ ಹೂವನ್ನು ಪೂಜಿಸಿ ಕೆಂಪು ಬಟ್ಟೆಯಲ್ಲಿ ಕಟ್ಟಿ ಹಣ ಇಡುವ ಸ್ಥಳದಲ್ಲಿ ಇರಿಸಬೇಕು.
ಲಕ್ಷ್ಮೀ ದೇವಿಯ ಕೃಪೆ ಪಡೆಯಲು
11 ಶುಕ್ರವಾರಗಳ ಕಾಲ ಒಂದು ತೆಂಗಿನಕಾಯಿ ಮತ್ತು ಬಿಳಿ ಕಮಲವನ್ನು ಲಕ್ಷ್ಮೀ ದೇವಿಗೆ ಅರ್ಪಿಸಿ ಪೂಜೆ ಮಾಡಬೇಕು. ನಂತರ ನವಮಿ ದಿನ ಕಮಲ ಹೂವನ್ನು ಹರಿಯುವ ನೀರಿನಲ್ಲಿ ಬಿಡಿ ಮತ್ತು ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ತಿಜೋರಿಯಲ್ಲಿ ಇಡಿ.
ಧ್ಯಾನಕ್ಕೆ ಯಾವ ಜಪಮಾಲೆ ಸೂಕ್ತ? ಇಲ್ಲಿದೆ ಜ್ಯೋತಿಷ್ಯ ಶಾಸ್ತ್ರದ ಸಲಹೆ
ಸಂತಾನ ಭಾಗ್ಯಕ್ಕಾಗಿ
ಪ್ರತಿ ಏಕಾದಶಿಯಂದು ಶ್ರೀ ಕೃಷ್ಣನಿಗೆ 2 ತಾವರೆ ಅರ್ಪಿಸಿದರೆ ಸಂತಾನ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಇದೆ.
ಕೌಟುಂಬಿಕ ಕಲಹ ನಿವಾರಣೆಗೆ
ಬುಧವಾರ ಕಮಲ ಹೂವಿಗೆ ಚಂದನ ಹಚ್ಚಿ ಲಕ್ಷ್ಮೀ ದೇವಿ ಮತ್ತು ಗಣೇಶ ಅವರಿಗೆ ಅರ್ಪಿಸಿ. ಇದನ್ನು 11 ಬುಧವಾರ ಮಾಡಿದರೆ ಮನೆಯಲ್ಲಿನ ಕಲಹ ಕಡಿಮೆಯಾಗುತ್ತದೆ.
ಇಷ್ಟಾರ್ಥ ಸಿದ್ಧಿಗಾಗಿ
ಒಂದು ವಾರ ಶಿವಲಿಂಗಕ್ಕೆ ತಾವರೆ ಅರ್ಪಿಸಿದರೆ ನಿಮ್ಮ ಮನದ ಆಸೆ ಈಡೇರುತ್ತದೆ ಎಂಬ ನಂಬಿಕೆ ಇದೆ. ಒಟ್ಟಿನಲ್ಲಿ ತಾವರೆ ಧಾರ್ಮಿಕವಾಗಿ ಅತ್ಯಂತ ಪವಿತ್ರವಾಗಿದ್ದು, ಅದನ್ನು ಭಕ್ತಿಯಿಂದ ಉಪಯೋಗಿಸಿದರೆ ಜೀವನದಲ್ಲಿ ಶಾಂತಿ, ಸಂಪತ್ತು ಮತ್ತು ಸಂತೋಷ ಕಾಣಬಹುದು.