ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಜುಲೈ 22, 2026: ರಾಹುವಿನ ಪ್ರಭಾವದಿಂದ ವೈಯಕ್ತಿಕ ಸಮಸ್ಯೆ ಹೆಚ್ಚಾಗಲಿದೆ

Horoscope Today July 22nd: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರದ, ಜುಲೈ 22ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಈ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ

ಇಂಟರ್‌ನೆಟ್ ಚಿತ್ರ -

Profile
Pushpa Kumari Jul 22, 2026 6:00 AM

ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ, ಸ್ವಾತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ವ್ಯಾಪಾರ ಹಾಗೂ ವಹಿವಾಟಿನಲ್ಲಿ ಲಾಭ ಗಳಿಸುತ್ತೀರಿ. ಅದೇ ರೀತಿ ದಾಂಪತ್ಯದಲ್ಲೂ ನೆಮ್ಮದಿ ಸಿಗಲಿದೆ. ಎಲ್ಲ ರೀತಿಯಿಂದಲೂ ನಿಮಗೆ ಸಹಕಾರ ಪ್ರಾಪ್ತಿಯಾಗಲಿದೆ.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಆತ್ಮವಿಶ್ವಾಸ ಚೆನ್ನಾಗಿರುತ್ತದೆ. ಸ್ವಾತಿ ನಕ್ಷತ್ರದ ಅಧಿಪತಿ ರಾಹು ಆಗಿರುವುದರಿಂದ ಶತ್ರುಗಳು ಹಿಮ್ಮೆಟ್ಟಬಹುದು. ಎಲ್ಲ ಕೆಲಸದಲ್ಲಿ ನೀವೇ ಮೇಲುಗೈ ಸಾಧಿಸುತ್ತೀರಿ.

ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಪ್ರೇಮ, ಪ್ರೀತಿ ಪ್ರಕರಣದಲ್ಲಿ ದೊಡ್ಡದಾದ ತೊಂದರೆ ಎದುರಿಸಬೇಕಾಗಿ ಬರಬಹುದು. ನಿಮ್ಮ ಪ್ರೀತಿಪಾತ್ರರಲ್ಲಿ ಸಂದೇಹ ಮೂಡಿ ಕ್ಷೇಶ ಉಂಟಾಗಬಹುದು.

ಕಟಕ ರಾಶಿ: ಕಟಕ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಹಾಗೂ ಹಣಕಾಸಿನ ವಿಚಾರದಲ್ಲಿ ತಿಳಿಯದಂತೆಯೇ ಬದಲಾವಣೆ ಕಂಡು ಬರಬಹುದು. ಕೋರ್ಟ್, ಕಚೇರಿ ವ್ಯವಹಾರದಲ್ಲಿ ಸವಾಲು ಎದುರಾಗಲಿದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಮಾತಿನ ಮೂಲಕ ಇಂದು ಯಶಸ್ಸು ಗಳಿಸುತ್ತೀರಿ. ನೆರೆ- ಹೊರೆಯವರು ಹಾಗೂ ಬಂಧು- ಬಾಂಧವರು ಸಂಪೂರ್ಣ ಸಹಕಾರ ನೀಡುತ್ತಾರೆ.

ಕನ್ಯಾ ರಾಶಿ: ಕನ್ಯಾ ರಾಶಿಯವರು ಮನೆಯಲ್ಲಿ ಮುಖ್ಯವಾದ ಕೆಲಸ ನಿಭಾಯಿಸಬೇಕಾಗುತ್ತದೆ. ಕುಟುಂಬದ ಜವಾಬ್ದಾರಿಗಳು ಹಾಗೂ ಹಣಕಾಸಿನ ವಿಚಾರದತ್ತ ಹೆಚ್ಚಿನ ಗಮನ ನೀಡಬೇಕಾಗುತ್ತದೆ.

ಸಾಕುಪ್ರಾಣಿಗಳಿಗೂ ವಾಸ್ತು ಇದೆ! ಯಾವ ಪ್ರಾಣಿಗೆ ಯಾವ ದಿಕ್ಕು ಶುಭ ಗೊತ್ತಾ?

ತುಲಾ ರಾಶಿ: ತುಲಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ನಿಮ್ಮ ವ್ಯಕ್ತಿತ್ವದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಂದು ಸವಾಲು ಎದುರಿಸಬೇಕಾಗಿ ಬರಬಹುದು.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಯಾರ ಜತೆಗೂ ವ್ಯವಹಾರ ಮಾಡಲು ಹೋಗಬೇಡಿ. ಮುಖ್ಯವಾದ ಸಂಬಂಧದಲ್ಲಿ ಒಡಕು ಉಂಟಾಗುವ ಸಾಧ್ಯತೆ ಇದೆ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ದೊಡ್ಡದಾದ ಯಶಸ್ಸು ಸಿಗುತ್ತದೆ. ಮನಸ್ಸಿಗೆ ನೆಮ್ಮದಿ ಇದ್ದು, ಮಿತ್ರರಿಂದ ಆಹ್ಲಾದಕರ ಸುದ್ದಿ ಕೇಳಲಿದ್ದೀರಿ. ಆದರೆ ದಾಂಪತ್ಯ ಹಾಗೂ ಪ್ರೀತಿ ಪ್ರಕರಣದಲ್ಲಿ ಕ್ಷೇಶ ಉಂಟಾಗಬಹುದು.

ಮಕರ ರಾಶಿ: ಮಕರ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ದೊಡ್ಡದಾದ ಯಶಸ್ಸು ಕಾಣುತ್ತೀರಿ. ಕೆಲಸ ಕಾರ್ಯದಲ್ಲಿ ಗೌರವ, ಪ್ರತಿಷ್ಠೆ ಪ್ರಾಪ್ತಿಯಾಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಕೆಲಸ ಕಾರ್ಯದಲ್ಲಿ ತೊಂದರೆ ಎದುರಿಸಬೇಕಾಗಿಬರಬಹುದು.

ಮೀನ ರಾಶಿ: ಮೀನ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮನಸ್ಸಿಗೆ ಹೆಚ್ಚಿನ ಬೇಸರ ಉಂಟಾಗಬಹುದು. ಆಧ್ಯಾತ್ಮಿಕವಾಗಿ ಇಂದು ದಿನ ಕಳೆಯುತ್ತೀರಿ.‌‌