Astro Tips: ಸೋಮವಾರದ ಪೂಜೆಗಿದೆ ಅಪರಿಮಿತ ಶಕ್ತಿ! ರಾಮಾಯಣ ಪಾರಾಯಣದಿಂದ ಈ ದೋಷ ನಿವಾರಣೆ
ಸೋಮವಾರ ಪೂಜೆ ಸಕಲ ದೋಷ ನಿವಾರಣೆಗೆ ಅತ್ಯಂತ ಫಲಪ್ರದ ದಿನವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ದಿನದಂದು ಮಾಡಿದ ಮಂತ್ರ ಜಪ, ಪೂಜೆ ಹಾಗೂ ಕ್ರಮಗಳು ಶೀಘ್ರವಾಗಿ ಉತ್ತಮ ಫಲವನ್ನು ನೀಡುತ್ತವೆ. ಹಾಗಾದ್ರೆ ಬನ್ನಿ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಮನೆಯಲ್ಲಿನ ದೋಷ ನಿವಾರಣೆಗೊಂಡು ಸುಖ ಶಾಂತಿ ನೆಲೆಸಲು ಮಾಡಬಹುದಾದ ಕೆಲವು ಸರಳ ಪೂಜಾ ವಿಧಾನಗಳು ಇಲ್ಲಿವೆ.
ಶಿವ -
ಬೆಂಗಳೂರು: ಸೋಮವಾರ (Monday) ದಿನವು ಭಗವಾನ್ ಶಿವನ ಆರಾಧನೆಗೆ(Shiva Puja) ಅತ್ಯಂತ ಪವಿತ್ರವಾದದ್ದು ಎಂದು ಪರಿಗಣಿಸಲಾಗಿದೆ. ಈ ದಿನ ಶಿವನನ್ನು ಭಕ್ತಿಭಾವದಿಂದ ಪೂಜಿಸಿದರೆ ಮನದಾಸೆಗಳೆಲ್ಲ ನೆರವೇರುತ್ತವೆ ಎಂಬ ನಂಬಿಕೆ ಇದೆ. ಜೀವನದಲ್ಲಿ ಎದುರಾಗುವ ಅಡೆತಡೆಗಳು, ಸಂಕಷ್ಟಗಳು ನಿಧಾನವಾಗಿ ದೂರವಾಗುತ್ತವೆ. ಇದಲ್ಲದೆ, ಸೋಮವಾರ ಪೂಜೆ ಸಕಲ ದೋಷ ನಿವಾರಣೆಗೆ ಅತ್ಯಂತ ಫಲಪ್ರದ ದಿನವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ದಿನದಂದು ಮಾಡಿದ ಮಂತ್ರ ಜಪ, ಪೂಜೆ ಹಾಗೂ ಕ್ರಮಗಳು ಶೀಘ್ರವಾಗಿ ಉತ್ತಮ ಫಲವನ್ನು ನೀಡುತ್ತವೆ. ಹಾಗಾದ್ರೆ ಬನ್ನಿ ಜ್ಯೋತಿಷ್ಯ ಶಾಸ್ತ್ರ ಪ್ರಕಾರ(Astro Tips) ಮನೆಯಲ್ಲಿನ ದೋಷ ನಿವಾರಣೆಗೊಂಡು ಸುಖಃ ಶಾಂತಿ ನೆಲೆಸಲು ಮಾಡಬಹುದಾದ ಕೆಲವು ಸರಳ ವಿಧಾನಗಳು ಇಲ್ಲಿವೆ.
ನಕಾರಾತ್ಮಕ ಶಕ್ತಿ ನಿವಾರಣೆಗಾಗಿ
ಕೆಲ ಸಮಸ್ಯೆ ಹಾಗೂ ದೋಷಗಳ ಕಾರಣದಿಂದ ಮನೆಯಲ್ಲಿ ಅಶಾಂತಿ, ಪರಸ್ಪರ ಅಸಮಾಧಾನ ಹಾಗೂ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಕುಟುಂಬದಲ್ಲಿ ಸದಾ ಒತ್ತಡ ಮತ್ತು ಕಲಹಗಳು ಆಗುತ್ತಿರುತ್ತದೆ. ಇದಕ್ಕೆ ನಕಾರಾತ್ಮಕ ಶಕ್ತಿಗಳು ಪ್ರಭಾವ ಕಾರಣವಾಗಿರಬಹುದು. ಈ ಸಮಸ್ಯೆಗಳಿಗೆ ಪರಿಹಾರವಾಗಿ, ಸೋಮವಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಶಿವಲಿಂಗವನ್ನು ಸ್ಥಾಪಿಸಿ ರುದ್ರಾಭಿಷೇಕವನ್ನು ನೆರವೇರಿಸಬೇಕು. ಇದರಿಂದ ಮನೆಯ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ, ಕುಟುಂಬ ಸದಸ್ಯರ ನಡುವೆ ಒಗ್ಗಟ್ಟು ಹೆಚ್ಚುತ್ತದೆ ಮತ್ತು ಅನಾರೋಗ್ಯದ ಸಮಸ್ಯೆಗಳೂ ಕ್ರಮೇಣ ಕಡಿಮೆಯಾಗುತ್ತವೆ.
Astro Tips: ತಪ್ಪಿಯೂ ಪರ್ಸ್‌ನಲ್ಲಿ ಹಣದ ಜೊತೆ ಈ ವಸ್ತು ಇಟ್ಟುಕೊಳ್ಳಬೇಡಿ! ದಾರಿದ್ರ್ಯ ಕಾಡಬಹುದು
ಶಿವ ಕುಟುಂಬ ಫೋಟೋವನ್ನು ಇಡಿ
ಸೋಮವಾರ ದಿನದಂದು ಮನೆಯಲ್ಲಿ ಶಿವ ಕುಟುಂಬ ಇರುವ ಫೋಟೋವನ್ನು ಇರಿಸಿ ಆರಾಧನೆ ಮಾಡುವುದು ಅತ್ಯಂತ ಶುಭಕರವೆಂದು ಪರಿಗಣಿಸಲಾಗುತ್ತದೆ. ಶಿವಲಿಂಗ ಅಥವಾ ಶಿವನ ಫೋಟೋದ ಜೊತೆಗೆ ಪಾರ್ವತಿ ದೇವಿ, ಕಾರ್ತಿಕೇಯ ಮತ್ತು ಗಣೇಶನ ಮೂರ್ತಿ ಅಥವಾ ಫೋಟೋವನ್ನು ಸ್ಥಾಪಿಸಿ ಪೂಜೆ ಮಾಡಿದರೆ, ಮನೆಯ ಮಕ್ಕಳು ಪೋಷಕರಿಗೆ ವಿಧೇಯರಾಗುತ್ತಾರೆ ಎಂಬ ನಂಬಿಕೆ ಇದೆ. ಇದರಿಂದ ಕುಟುಂಬದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಾಮರಸ್ಯ ವೃದ್ಧಿಯಾಗುತ್ತದೆ.
ಶಿವನಿಗೆ 108 ಬಿಲ್ವಪತ್ರೆಗಳನ್ನು ಅರ್ಪಿಸಿ
ಈಶ್ವರನ ಆರಾಧನೆಗೆ ಶುಭವದ ಈ ಪವಿತ್ರ ದಿನ ಶಿವನ ಪಂಚಾಕ್ಷರಿ ಮಂತ್ರವಾದ “ಓಂ ನಮಃ ಶಿವಾಯ” ಅನ್ನು ಜಪಿಸುತ್ತಾ ರುದ್ರಾಭಿಷೇಕ ಮಾಡಬೇಕು. ಶಿವನಿಗೆ 108 ಬಿಲ್ವಪತ್ರೆಗಳನ್ನು ಅರ್ಪಿಸಿ, ಕೊನೆಯ ಬಿಲ್ವಪತ್ರೆಯನ್ನು ಶಿವನ ಕೃಪೆಯ ಸಂಕೇತವಾಗಿ ತಿಜೋರಿ ಅಥವಾ ಹಣವನ್ನು ಇಡುವ ಸ್ಥಳದಲ್ಲಿ ಸುರಕ್ಷಿತವಾಗಿ ಇರಿಸಬೇಕು. ಇದರಿಂದ ವಾಸ್ತು ದೋಷಗಳಿಂದ ಉಂಟಾಗುವ ಹಣಕಾಸಿನ ತೊಂದರೆಗಳು ಕಡಿಮೆಯಾಗುತ್ತವೆ ಮತ್ತು ಅನಗತ್ಯ ಖರ್ಚು ನಿಯಂತ್ರಣಕ್ಕೆ ಬರುತ್ತದೆ ಎಂದು ನಂಬಲಾಗುತ್ತದೆ.
ಡಮರುವನ್ನು ಮನೆಯಲ್ಲಿಟ್ಟುಕೊಳ್ಳಿ
ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಸಂಪೂರ್ಣವಾಗಿ ದೂರಮಾಡಲು, ಶಿವನ ಆಯುಧವಾದ ಡಮರುವನ್ನು ಪೂಜಾಕೋಣೆಯಲ್ಲಿ ಸ್ಥಾಪಿಸಬಹುದು. ಪ್ರತಿದಿನ ಆರತಿ ಸಮಯದಲ್ಲಿ ಡಮರುವನ್ನು ಬಾರಿಸುವುದರಿಂದ ಮನೆಯ ಎಲ್ಲಾ ದೋಷಗಳು ನಿವಾರಣೆಯಾಗುತ್ತವೆ. ಇದರ ಪರಿಣಾಮವಾಗಿ ಮನೆಯಲ್ಲಿ ಶಾಂತಿ, ಸಂತೋಷ ಮತ್ತು ಸೌಹಾರ್ದತೆ ಹೆಚ್ಚಾಗುತ್ತದೆ.
ರಾಮಾಯಣ ಪಾರಾಯಣ ಮಾಡಿ
ರಾಮಾಯಣದಲ್ಲಿ ರಾಮನು ಶಿವನನ್ನು ಧ್ಯಾನಿಸುತ್ತಾನೆ ಮತ್ತು ಶಿವನು ರಾಮನನ್ನು ಧ್ಯಾನಿಸುತ್ತಾನೆ ಎಂದು ಉಲ್ಲೇಖಿಸಲಾಗಿದೆ. ಮಹಾಶಿವರಾತ್ರಿಯ ದಿನ ಮನೆಯಲ್ಲಿ ರಾಮಾಯಣ ಪಠಣ ಅಥವಾ ಪಾರಾಯಣ ಮಾಡುವುದರಿಂದ ಶಿವನ ವಿಶೇಷ ಅನುಗ್ರಹ ದೊರೆಯುತ್ತದೆ. ವಿಶೇಷವಾಗಿ ಎಂಟು ಪ್ರಹರಗಳಲ್ಲಿ ರಾಮಾಯಣ ಪಾರಾಯಣ ಮಾಡುವ ಭಕ್ತರ ಮನೆಯಲ್ಲಿ ವಾಸ್ತು ದೋಷಗಳು ನೆಲಸುವುದಿಲ್ಲ ಎಂಬ ನಂಬಿಕೆ ಇದೆ. ಅಂತಹ ಶಿವಭಕ್ತನ ಮೇಲೆ ಮಹಾಲಕ್ಷ್ಮಿ ಹಾಗೂ ಶ್ರೀರಾಮನ ಕೃಪೆಯೂ ಸದಾ ಇರುತ್ತದೆ.