Astro Tips: ಶನಿ ದೇವರ ಅನುಗ್ರಹಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ವಿವರ
ಶನಿವಾರ ಶನಿದೇವನನ್ನು ಆರಾಧಿಸುವ ವೇಳೆ ಅವನಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸುವುದರಿಂದ ಶುಭಫಲಗಳು ಲಭಿಸುತ್ತವೆ ಎಂದು ಹೇಳಲಾಗುತ್ತದೆ. ಶನಿದೇವನು ಯಾರ ಮೇಲೆ ಪ್ರಸನ್ನನಾಗುತ್ತಾನೋ ಅವರ ಜೀವನದಲ್ಲಿ ಸಂತೋಷ, ಶಾಂತಿ ಹಾಗೂ ಸುಖ ಸಮೃದ್ಧಿ ನೆಲೆಸುತ್ತದೆ. ಇಂತಹವರಿಗೆ ಜೀವನದಲ್ಲಿ ಯಾವುದೇ ತೊಂದರೆಗಳು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಶನಿ ದೇವ -
ಬೆಂಗಳೂರು, ಜ. 10: ಶನಿವಾರವು (Saturday) ನ್ಯಾಯದ ದೇವರಾದ ಶನಿದೇವನ (Shani Dev) ಆರಾಧನೆಗೆ ಮೀಸಲಾದ ಪವಿತ್ರ ದಿನ. ಈ ದಿನ ಶನಿದೇವನನ್ನು ಭಕ್ತಿಪೂರ್ವಕವಾಗಿ ಪೂಜಿಸಿದರೆ ಅವನ ಅನುಗ್ರಹವನ್ನು ಪಡೆಯಬಹುದು ಎಂಬ ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನು ವ್ಯಕ್ತಿಯ ಕರ್ಮಗಳ ಆಧಾರದಲ್ಲಿ ಫಲ ನೀಡುವ ದೇವರಾಗಿದ್ದು, ಒಳ್ಳೆಯ ಕರ್ಮಗಳಿಗೆ ಶುಭ ಫಲ ಹಾಗೂ ಕೆಟ್ಟ ಕರ್ಮಗಳಿಗೆ ಕಠಿಣ ಫಲವನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ.
ಯಾವ ವ್ಯಕ್ತಿ ಶನಿ ಸಾಡೇಸಾತಿ ಅಥವಾ ಶನಿ ದಶೆಯ ಪ್ರಭಾವಕ್ಕೆ ಒಳಗಾಗುತ್ತಾನೋ ಅಂಥವರು ಮಾನಸಿಕ, ದೈಹಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗಿದೆ. ಇಂತಹ ಸಂದರ್ಭದಲ್ಲಿ ಶನಿವಾರ ಶನಿದೇವನನ್ನು ನಿಷ್ಠೆಯಿಂದ ಹಾಗೂ ಶ್ರದ್ಧಾಭಕ್ತಿಯಿಂದ ಪೂಜಿಸುವುದರಿಂದ ಆತನ ಕೃಪೆ ಲಭಿಸಿ, ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ ಎಂದು ನಂಬಲಾಗಿದೆ.
ಇದಲ್ಲದೆ ಶನಿವಾರ ಶನಿ ಆಶೀರ್ವಾದ ಪಡೆಯಲು ಇಚ್ಚಿಸುವವರು, ಪೂಜೆಯ jತೆಗೆ ಕೆಲ ಕ್ರಮಗಳನ್ನು ಅನುಸರಿಸುವುದರಿಂದ ಜೀವನದಲ್ಲಿನ ದುಃಖ–ಕಷ್ಟಗಳು ದೂರವಾಗುತ್ತವೆ. ಮನೆಯಲ್ಲಿ ಸಂತೋಷ, ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಜತೆಗೆ ಶನಿದೇವನ ವಕ್ರ ದೃಷ್ಟಿಯಿಂದ ಮುಕ್ತಿ ದೊರೆಯುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಶನಿದೇವನ ಕೃಪೆಯನ್ನು ಪಡೆಯುವುದು ಸುಲಭದ ವಿಷಯವಲ್ಲ. ಕರ್ಮಕ್ಕೆ ಅನುಗುಣವಾಗಿ ಫಲ ನೀಡುವ ನ್ಯಾಯದೇವನಾದ ಶನಿಯನ್ನು ಮೆಚ್ಚಿಸುವುದು ಕಷ್ಟವಾದರೂ, ಒಮ್ಮೆ ಅವನ ಆಶೀರ್ವಾದ ದೊರೆತರೆ ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಂದ ರಕ್ಷಣೆ ಸಿಗುತ್ತದೆ. ಹಾಗಾಗಿ ಶನಿದೇವನಿಗೆ ಅರ್ಪಿತವಾದ ಶನಿವಾರ ವಿಧಿ–ವಿಧಾನಗಳ ಮೂಲಕ ಪೂಜಿಸುವುದರಿಂದ ಅವನ ಅನುಗ್ರಹವನ್ನು ಶೀಘ್ರವಾಗಿ ಪಡೆಯಬಹುದು.
ತಪ್ಪಿಯೂ ಪರ್ಸ್‌ನಲ್ಲಿ ಹಣದ ಜೊತೆ ಈ ವಸ್ತು ಇಟ್ಟುಕೊಳ್ಳಬೇಡಿ!
ಹಾಗೇ ಶನಿವಾರ ಶನಿದೇವನನ್ನು ಆರಾಧಿಸುವ ವೇಳೆ ಅವನಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸುವುದರಿಂದ ಶುಭಫಲಗಳು ಲಭಿಸುತ್ತವೆ ಎಂದು ಹೇಳಲಾಗುತ್ತದೆ. ಶನಿದೇವನು ಯಾರ ಮೇಲೆ ಪ್ರಸನ್ನನಾಗುತ್ತಾನೋ ಅವರ ಜೀವನದಲ್ಲಿ ಸಂತೋಷ, ಶಾಂತಿ ಹಾಗೂ ಸುಖ ಸಮೃದ್ಧಿ ನೆಲೆಸುತ್ತದೆ. ಇಂತಹವರಿಗೆ ಜೀವನದಲ್ಲಿ ಯಾವುದೇ ತೊಂದರೆಗಳು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದ್ದರಿಂದ ಶನಿವಾರ ಶನಿ ಪೂಜೆಯ ಜತೆಗೆ ವಿಶಿಷ್ಟ ವಸ್ತುಗಳನ್ನು ಶನಿಗೆ ಅರ್ಪಿಸಿದರೆ ಅವನು ಶೀಘ್ರವಾಗಿ ಸಂತೋಷಗೊಳ್ಳುತ್ತಾನೆ ಎಂಬ ನಂಬಿಕೆ ಇದ್ದು, ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ ಯಾವ ವಸ್ತುಗಳು ಶನಿಯ ಕೃಪೆಯನ್ನು ಪಡೆಯಲು ಸಹಕಾರಿ ಎಂದು ನೋಡೋಣ:
ಶನಿದೇವನು ಆಹಾರ ಸಂಬಂಧಿತ ಕೆಲವು ವಸ್ತುಗಳನ್ನು ವಿಶೇಷವಾಗಿ ಇಷ್ಟಪಡುತ್ತಾನೆ. ಧಾರ್ಮಿಕ ಆಚರಣೆಗಳ ಪ್ರಕಾರ, ಶನಿಗೆ ಪ್ರಿಯವಾದ ಆಹಾರ ವಸ್ತುಗಳನ್ನು ಶನಿವಾರ ಅರ್ಪಿಸುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ. ಜತೆಗೆ ಶನಿಯ ದುಷ್ಪ್ರಭಾವ ಕಡಿಮೆಯಾಗುತ್ತಾ, ಅವನ ಕೃಪೆ ಸಮೃದ್ಧವಾಗಿ ಲಭಿಸುತ್ತದೆ.
ಕಪ್ಪು ಉದ್ದಿನ ಬೇಳೆಯಿಂದ ತಯಾರಿಸಿದ ಖಿಚಡಿಯನ್ನು ಶನಿದೇವನಿಗೆ ಅರ್ಪಿಸುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಈ ನೈವೇದ್ಯವನ್ನು ಅರ್ಪಿಸುವುದರಿಂದ ಶನಿದೇವನ ಕೃಪೆ ದೊರೆಯುತ್ತದೆ. ಇದಲ್ಲದೆ ಶನಿದೇವನಿಗೆ ಕಪ್ಪು ಎಳ್ಳು ಬಹಳ ಪ್ರಿಯ. ಶನಿವಾರ ಕಪ್ಪು ಎಳ್ಳು ಅಥವಾ ಅದರಿಂದ ತಯಾರಿಸಿದ ಯಾವುದೇ ಪದಾರ್ಥವನ್ನು ಶನಿದೇವನಿಗೆ ಅರ್ಪಿಸುವುದರಿಂದ ಅವನು ಸಂತೋಷಗೊಂಡು ಸುಖ ಹಾಗೂ ಸಮೃದ್ಧಿಯನ್ನು ಅನುಗ್ರಹಿಸುತ್ತಾನೆ.