ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಸೋಮವಾರ ಈ ಶಿವ ಮಂತ್ರ ಪಠಿಸಿದರೆ ನಿಮ್ಮ ಆಸೆಗಳೆಲ್ಲಈಡೇರುತ್ತೆ

ಸೋಮವಾರ ಶಿವನ ಆರಾಧನೆ ಹಾಗೂ ಉಪವಾಸ ವ್ರತಕ್ಕೆ ವಿಶೇಷ ಮಹತ್ವ ಇದೆ. ಈ ದಿನ ಶಿವೋಪಾಸನೆ ಜತೆಗೆ ಮಾಡುವ ಮಂತ್ರಜಪವು ಭಕ್ತರ ಇಷ್ಟಾರ್ಥಗಳನ್ನು ಈಡೇರುತ್ತದೆ ಎಂಬ ನಂಬಿಕೆ ಇದೆ. ಸೋಮವಾರ ಯಾವ ಶಿವ ಮಂತ್ರ ಜಪಿಸಬೇಕು? ಅವುಗಳನ್ನು ಪಠಿಸುವುದರಿಂದ ಪಡೆಯುವ ಅನುಗ್ರಹವೇನು? ಇಲ್ಲಿದೆ ವಿವರ.

ಸೋಮವಾರ ಯಾವ ಶಿವ ಮಂತ್ರಗಳನ್ನು ಜಪಿಸಬೇಕು?

ಶಿವ -

Profile
Sushmitha Jain Dec 1, 2025 7:00 AM

ಬೆಂಗಳೂರು: ಧಾರ್ಮಿಕ ಶಾಸ್ತ್ರಗಳಲ್ಲಿ(Astrology) ಸೋಮವಾರವನ್ನು ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ದಿನವೆಂದು ವರ್ಣಿಸಲಾಗಿದೆ. ಕೈಲಾಸನಾಥನಾದ ಶಿವಶಂಕರನನ್ನು ಆರಾಧಿಸಿದ್ದರೆ ನೀವು ಬಯಸಿದ ಫಲಿತಾಂಶವನ್ನ ಪಡೆಯಬಹುದು. ಹಿಂದೂ ಪುರಾಣದ ಪ್ರಕಾರ (Hindu Religion) ಸೋಮವಾರ ಭಕ್ತರು ಬ್ರಹ್ಮ ಮುಹೂರ್ತದಲ್ಲಿ ಏಳಬೇಕು. ಶುದ್ಧರಾಗಿ ಶಿವನನ್ನು ಧ್ಯಾನಿಸಬೇಕು. ಶಾಸ್ತ್ರಗಳ ಪ್ರಕಾರ ಈ ದಿನದಂದು ವಿಶೇಷವಾಗಿ ಬ್ರಹ್ಮ ಮುಹೂರ್ತದಲ್ಲಿ ಶಿವನನ್ನು ಧ್ಯಾನಿಸುವುದರ ಜತೆಗೆ ಕೆಲವು ವಿಶೇಷ ಮಂತ್ರಗಳನ್ನು ಪಠಿಸಬೇಕು. ಇದರಿಂದ ನೀವು ಈಶ್ವರನ ಆಶೀರ್ವಾದವನ್ನು ಪಡೆದುಕೊಳ್ಳುತ್ತೀರಿ.

ಸೋಮವಾರದ ನಾವು ಈ ಶಿವ ಮಂತ್ರಗಳನ್ನು ಪಠಿಸಬೇಕು. ಈ ಶಿವ ಮಂತ್ರಗಳನ್ನು ಪಠಿಸುವುದರಿಂದ ವ್ಯಕ್ತಿಯ ಜೀವನದಲ್ಲಿನ ಎಲ್ಲ ನಕಾರಾತ್ಮಕತೆಗಳು ದೂರಾಗುತ್ತದೆ. ಸೋಮವಾರ ನಾವು ಯಾವ ಶಿವ ಮಂತ್ರಗಳನ್ನು ಪಠಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಶಿವ ಪಂಚಾಕ್ಷರಿ ಮಂತ್ರ

ʼಓಂ ನಮಃ ಶಿವಾಯʼ ಸೋಮವಾರ ಈ ಮಂತ್ರವನ್ನು ನೀವು ಜಪಿಸುವುದರಿಂದ
ಆತ್ಮವಿಶ್ವಾಸ ಹೆಚ್ಚಲಿದ್ದು, ಮನೆಯಲ್ಲಿ ಧನಾತ್ಮಕ ಶಕ್ತಿಯ ವಾತಾವರಣ ನಿರ್ಮಾಣವಾಗಲಿದೆ. ಈ ಮಂತ್ರವನ್ನು ನೀವು ನಿಯಮಿತವಾಗಿ ಜಪಿಸುವುದರಿಂದ ಶುಭ ಫಲಗಳು ಸಿಗಲಿದ್ದು, ಇದರಿಂದ ನಿಮ್ಮೆಲ್ಲ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ.

ಮಹಾಮೃತ್ಯುಂಜಯ ಮಂತ್ರ

ಓಂ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಠಿವರ್ಧನಂ |
ಉರ್ವಾರುಕಮಿವ ಬಂಧನಾನ್ ಮೃತ್ತ್ಯೋರ್ಮುಕ್ಷೀಯ ಮಾ ಮೃತಾತ್ ||

ಹಿಂದೂ ಪುರಾಣದಲ್ಲಿ ಈ ಮಂತ್ರಕ್ಕೆ ವಿಶಿಷ್ಟ ಮಹತ್ವವಿದೆ. ಶಾಸ್ತ್ರ ಬದ್ಧವಾಗಿ ಶಿವನನ್ನು ಪೂಜಿಸಬೇಕು. ಈ ಮಂತ್ರ ಪಠಿಸಿದರೆ ಸದೃಢ ಆರೋಗ್ಯ ನಿಮ್ಮದಾಗಲಿದೆ. ರೋಗ ರುಜಿನಗಳು, ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಈ ಮಂತ್ರಕ್ಕೆ ಇದೆ. ಅಲ್ಲದೆ ಸಂಸ್ಕೃತದಲ್ಲಿ ‘ಮೃತ್ಯುಂಜಯ’ ಎಂದರೆ ಸಾವನ್ನು ಕೂಡ ಗೆಲ್ಲುವ ಶಕ್ತಿ ಹೊಂದಿರುವವನು ಎಂಬ ಅರ್ಥವಿದೆ. ದೈಹಿಕ-ಮಾನಸಿಕ ಚೇತರಿಕೆಗೆ ಈ ಮಂತ್ರ ಅತ್ಯಂತ ಪರಿಣಾಮಕಾರಿ.

ಶುಕ್ರವಾರ ಹೀಗೆ ಮಾಡಿದರೆ ಲಕ್ಷ್ಮೀ ದೇವಿ ಪ್ರಸನ್ನಳಾಗುವಳು!

ಶಿವ ಗಾಯತ್ರಿ ಮಂತ್ರ

ಓಂ ಮಹಾದೇವಾಯ ವಿದ್ಯಮಹೇ
ರುದ್ರಮೂರ್ತಯೇ ಧೀಮಹಿ
ತನ್ನಃ ಶಿವಃ ಪ್ರಚೋದಯಾತ್

ಶಿವ ಮಂತ್ರಗಳ ಪೈಕಿ ಈ ಗಾಯತ್ರಿ ಮಂತ್ರವು ಅತಿ ಶಕ್ತಿಶಾಲಿ ಎನಿಸಿಕೊಂಡಿದೆ. ಸೋಮವಾರ ಈ ಮಂತ್ರವನ್ನು ಜಪಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯುವ ಜತೆಗೆ ಮನೆಯಲ್ಲಿ ಸಮಾಧಾನ ಹಾಗೂ ಕುಟುಂಬದಲ್ಲಿ ಸಾಮರಸ್ಯ ಹಾಗೂ ಸೌಹಾರ್ದತೆ ಹೆಚ್ಚುತ್ತದೆ. ಅಲ್ಲದೇ ಶಿವನಿಗೂ ಈ ಮಂತ್ರ ಅತ್ಯಂತ ಪ್ರಿಯವಾಗಿದ್ದು, ಇದನ್ನು ನಿಯಮಿತವಾಗಿ ಪಠಿಸುವುದರಿಂದ ಆತನ ಕೃಪೆಯನ್ನು ಸುಲಭವಾಗಿ ಪಡೆಯಬಹುದು.

ಶಿವ ಧ್ಯಾನ ಮಂತ್ರ

ಕಾರಚಾರಣ ಕೃತಂ ವಾ, ಕೈಜಂ ಕರ್ಮಜಂ ವಾ,
ಶ್ರವಣನಯನಜಂ ವಾ, ಮಾನಸಂ ವಾ ಪರಾಧಂ,
ವಿಹಿತಂ ಅವಿಹಿತಂ ವಾ ಸರ್ವಮೇತತ್ ಕ್ಷಮಸ್ವ,
ಜಯ ಜಯ ಕರುಣಾಬ್ಧೆ ಶ್ರೀ ಮಹಾದೇವ ಶಂಭೋ

ಜೀವನದಲ್ಲಿ ಸಂಕಷ್ಟಗಳು, ಸೋಲುಗಳು ಎದುರಾದಾಗ ಈ ಮಂತ್ರವನ್ನು ಜಪಿಸುವುದರಿಂದ ಆತ್ಮಸ್ಥೈರ್ಯ ಮತ್ತು ಧೈರ್ಯ ಹೆಚ್ಚಾಗಲಿದ್ದು, ಶಿವನ ಕೃಪೆಯಿಂದ ಯಶಸ್ಸಿನ ದಾರಿ ತೆರೆದುಕೊಳ್ಳುತ್ತದೆ.