ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಸೋಮವಾರ ಬಂತೆಂದರೆ ಶಿವನ ಪೂಜಿಸಿ : ಪರಶಿವನನ್ನು ಅರ್ಚಿಸುವುದು ಹೇಗೆ ಗೊತ್ತಾ?

ಶಿವನನ್ನು ಆರಾಧಿಸಿದರೆ ವಿಶೇಷ ಅನುಗ್ರಹ ಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆಯಿದೆ. ಶಿವ ಸರ್ವ ಮಾನ್ಯ ಮತ್ತು ಸರ್ವ ವೇದ್ಯ. ಶಿವ ಭಕ್ತರ ಸಂಖ್ಯೆಯೂ ಅಗಣಿತ. ಹಾಗಾಗಿ ಶಿವನನ್ನು ಭಕ್ತಪ್ರಿಯನೆಂದೂ ಕರೆಯಲಾಗುತ್ತದೆ. ಸೋಮವಾರದ ದಿನ ಶಿವನ ಆರಾಧನೆಯನ್ನು ಹೇಗೆ ಮಾಡಬೇಕು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿದ್ದು, ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬೆಂಗಳೂರು: ಕೈಲಾಸ ವಾಸಿ ಶಿವ(God Shiva) ಭಕ್ತ ಪ್ರಿಯ. ಶಿವನನ್ನು ಯಾರೇ ಭಕ್ತಿಯಿಂದ ಆರಾಧಿಸಿದರೂ ಅವರಿಗೆ ಶೀಘ್ರವಾಗಿ ಒಲಿದು ಅನುಗ್ರಹ ಮಾಡುವುದು ಪರಶಿವನ ದಯಾಗುಣವಾಗಿದೆ. ಸೋಮವಾರದಂದು(Monday) ಶಿವನನ್ನು ಆರಾಧಿಸಿದರೆ ವಿಶೇಷ ಅನುಗ್ರಹ ಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆಯಿದೆ. ಶಿವ ಸರ್ವ ಮಾನ್ಯ ಮತ್ತು ಸರ್ವ ವೇದ್ಯ. ಶಿವ ಭಕ್ತರ ಸಂಖ್ಯೆಯೂ ಅಗಣಿತ. ಹಾಗಾಗಿ ಶಿವನನ್ನು ಭಕ್ತಪ್ರಿಯನೆಂದೂ ಕರೆಯಲಾಗುತ್ತದೆ. ಸೋಮವಾರದ ದಿನ ಶಿವನ ಆರಾಧನೆಯನ್ನು ಹೇಗೆ ಮಾಡಬೇಕು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ(Astro Tips) ವಿವರಿಸಲಾಗಿದ್ದು, ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸೋಮವಾರ ಮುಂಜಾನೆ ಎದ್ದು ನಿತ್ಯ ಕರ್ಮಾದಿಗಳನ್ನು ಮುಗಿಸಿ ಶುಚಿಯಾಗಿ ಸ್ನಾನವನ್ನು ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿದ ಬಳಿಕ ಶಿವ ದೇವರ ಪ್ರತಿಮೆ ಅಥವಾ ಫೊಟೋದ ಮುಂದೆ ದೀಪವನ್ನು ಬೆಳಗಿ ಬಳಿಕ ಉಪವಾಸದ ಸಂಕಲ್ಪವನ್ನು ಮಾಡಬೇಕು. ಉಪವಾಸದ ಸಂಕಲ್ಪ ಕೈಗೊಂಡ ಬಳಿಕ ಆ ದಿನ ಒಪ್ಪೊತ್ತಿನ ಊಟವನ್ನು ಮಾಡಬೇಕು. ಸಾಯಂಕಾಲ ಪೂಜೆಯ ಬಳಿಕ ಉಪವಾಸವನ್ನು ಮುರಿದು ಆಹಾರ ಸೇವನೆಯನ್ನು ಮಾಡಬಹುದು.

ಬಳಿಕ, ಶಿವಲಿಂಗ ಸೇರಿದಂತೆ ಎಲ್ಲಾ ದೇವರ ವಿಗ್ರಹಗಳಿಗೆ ಶುದ್ಧ ಜಲಾಭಿಷೇಕವನ್ನು ಮಾಡಿ. ಒಂದು ವೇಳೆ ನಿಮ್ಮ ಮನೆಯಲ್ಲಿ ಶಿವಲಿಂಗವಿಲ್ಲದಿದ್ದರೆ ನೀವು ಹತ್ತಿರದ ಶಿವ ದೇವಾಲಯಕ್ಕೆ ಹೋಗಿ ಅಲ್ಲಿ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿಸಬಹುದು. ಶಿವಲಿಂಗಕ್ಕೆ ಅಭಿಷೇಕ ಮಾಡಿದ ನಂತರ ಸಕ್ಕರೆ ಹಾಲು, ಮೊಸರು, ಜೇನುತುಪ್ಪ, ಬಿಲ್ವಪತ್ರೆ, ಮಲ್ಲಿಗೆ ಅಥವಾ ಎಕ್ಕದ ಹೂವುಗಳನ್ನು ಶಿವಲಿಂಗಕ್ಕೆ ಅರ್ಪಿಸಿ. ಮಂತ್ರಗಳ ಪಠಣದೊಂದಿಗೆ ಶಿವನಿಗೆ ವೀಳ್ಯದೆಲೆ, ಪಂಚಾಮೃತ, ತೆಂಗಿನಕಾಯಿ ಮತ್ತು ಬಿಲ್ವ ಪತ್ರೆಯನ್ನು ಸಮರ್ಪಿಸಿ.

Vastu Tips: ದಿಂಬಿಗೆ ತಲೆ ಇಟ್ಟ ತಕ್ಷಣ ಸುಖ ನಿದ್ರೆ ನಿಮ್ಮದಾಗಬೇಕೇ..? ಅದಕ್ಕಾಗಿ ಈ ಸಿಂಪಲ್ ಟಿಪ್ಸ್ ಗಳನ್ನು ಅನುಸರಿಸಿ

ಆಮೇಲೆ ಶಿವಲಿಂಗದ ಮೇಲೆ ಕುಂಕುಮ ಮತ್ತು ಶ್ರೀಗಂಧವನ್ನು ಅರ್ಪಿಸಿ, ಆ ಬಳಿಕ ಧೂಪ, ದೀಪ ಮತ್ತು ಆರತಿಯನ್ನು ಪರಶಿವನಿಗೆ ಬೆಳಗಿಸಬೇಕು. ಪೂಜೆ ಎಲ್ಲಾ ಆದ ಬಳಿಕ ಶಿವಲಿಂಗಕ್ಕೆ ಅರ್ಧ ಪ್ರದಕ್ಷಿಣೆಯನ್ನು ಹಾಕಿ. ಶಿವನಿಗೆ ಪ್ರದಕ್ಷಿಣೆ ಹಾಕುವಾಗ ಶಿವನನ್ನು ಭಕ್ತಿಯಿಂದ ಧ್ಯಾನಿಸಿ. ಅರೆ ಪ್ರದಕ್ಷಿಣೆ ಎಂದರೆ ಶಿವಲಿಂಗಕ್ಕೆ ಅರ್ಪಿಸಿದ ಅಭಿಷೇಕದ ನೀರು ಹರಿದು ಹೋಗುವ ಸ್ಥಳದವರೆಗೆ ಮಾತ್ರ ಪ್ರದಕ್ಷಿಣೆಯನ್ನು ಹಾಕಿ ಹಿಂದಿರುಗಿ. ಇದರ ನಂತರ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿ.

ಸೋಮವಾರ ಉಪವಾಸ ವ್ರತವನ್ನು ಮಾಡುವಾಗ ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ. ಶಿವ ಪೂಜೆಯನ್ನು ಮಾಡಿದ ನಂತರ ಶಿವ ಚಾಲೀಸಾವನ್ನು ಮತ್ತು ಶಿವ ಆರತಿಯನ್ನು ಪಠಿಸುವುದನ್ನು ಮರೆಯದಿರಿ.

ಶಿವ ಪೂಜೆ ಮುಗಿದ ಬಳಿಕ ಪ್ರಸಾದವನ್ನು ವಿತರಿಸಿ. ಶಿವಪೂಜೆಯ ನಂತರ ಸೋಮವಾರ ಉಪವಾಸದ ಕಥೆಯನ್ನು ಕೇಳುವುದು ಅವಶ್ಯಕ.