Vastu Tips: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಈ ವಸ್ತುಗಳು ಖಾಲಿಯಾದರೆ ಆರ್ಥಿಕ ಸಮಸ್ಯೆ ಗ್ಯಾರಂಟಿ!
ವಾಸ್ತುಶಾಸ್ತ್ರದ ಪ್ರಕಾರ ಮನೆಯನ್ನು ನಿರ್ಮಿಸುವುದು ಮತ್ತು ಅಲಂಕರಿಸುವುದು ಸಂತೋಷ, ಶಾಂತಿ, ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಅಡಿಗೆ ಬಹಳ ಮುಖ್ಯ. ಅಡುಗೆ ಮನೆ ಸರಿಯಾಗಿಲ್ಲದಿದ್ದರೆ ಕುಟುಂಬಸ್ಥರ ಆರೋಗ್ಯ ಹದಗೆಡುವುದರ ಜೊತೆಗೆ ಸಂಪತ್ತು ನಷ್ಟವಾಗುತ್ತದೆ. ಅಡುಗೆ ಮನೆಯಲ್ಲಿ ಕೆಲವು ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ವ್ಯಕ್ತಿಯು ಅದರ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ವಾಸ್ತು ಶಾಸ್ತ್ರದಲ್ಲಿ ವಿವರಣೆ ಇದೆ.


ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಕೋಣೆಗಳೂ ವಾಸ್ತು ನಿಯಮದ ಪ್ರಕಾರ ಇರಬೇಕು, ಇದಕ್ಕೆ ಅಡುಗೆ ಕೋಣೆಯೂ ಹೊರತಾಗಿಲ್ಲ. ಆರೋಗ್ಯದಲ್ಲಿ ಆಹಾರ ಪ್ರಮುಖ ಪಾತ್ರವಹಿಸಿದಂತೆ ಅಡುಗೆ ಮನೆಯ ವಾಸ್ತುವೂ(Vastu Tips) ನಮ್ಮ ಆರೋಗ್ಯ ಹಾಗೂ ಮನೆಯ ಸಮೃದ್ಧಿಗೆ ಪೂರಕವಾಗಿರಬೇಕು. ಪಂಚಭೂತಗಳು ನಮ್ಮ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ, ಅದರಂತೆ ಅಡುಗೆ ಮನೆಯಲ್ಲಿ ಪಂಚಭೂತಗಳಿಗೆ ಮಹತ್ವವಾದ ಸ್ಥಾನವನ್ನು ನೀಡಬೇಕಾಗುತ್ತದೆ. ಹಾಗೇ ಅಡುಗೆಮನೆಯಲ್ಲಿ ಕೆಲವು ವಸ್ತುಗಳನ್ನು ಖಾಲಿಯಾಗಲು ಬಿಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ವಸ್ತುಗಳು ಖಾಲಿಯಾದರೆ ಋಣಾತ್ಮಕತೆ ಹೆಚ್ಚುತ್ತದೆ, ಮನೆಯ ಐಶ್ವರ್ಯ ದೂರವಾಗುತ್ತದೆ ಮತ್ತು ಬಡತನ ಹರಡಲು ಪ್ರಾರಂಭಿಸುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಆ ವಸ್ತುಗಳು ಯಾವುವು...? ಖಾಲಿಯಾದರೆ ಏನಾಗುತ್ತಾದೆ ಎಂಬ ಮಾಹಿತಿ ಇಲ್ಲಿದೆ.
ಅರಿಶಿಣ
ಅಡುಗೆಮನೆಯ ಮಸಾಲೆಗಳಲ್ಲಿ ಒಂದಾದ ಅರಿಶಿನವು ಬಹುತೇಕ ಎಲ್ಲದರಲ್ಲೂ ಬಳಸಲಾಗುವ ವಸ್ತುವಾಗಿದೆ. ಮತ್ತೊಂದೆಡೆ, ಜ್ಯೋತಿಷ್ಯದ ದೃಷ್ಟಿಕೋನದಿಂದ ನೋಡಿದರೆ, ಅರಿಶಿನದ ಸಂಬಂಧವು ಗುರು ಗ್ರಹದೊಂದಿಗೆ ಇದೆ ಎಂದು ನಂಬಲಾಗಿದೆ. ನಿಮ್ಮ ಅಡುಗೆಮನೆಯಲ್ಲಿ ಅರಿಶಿನ ಖಾಲಿಯಾದರೆ, ಅದು ಗುರುದೋಷದಂತೆ. ಗುರುವಿನ ದೋಷದಿಂದ ನಿಮಗೆ ಹಣದ ಕೊರತೆ ಶುರುವಾಗುತ್ತದೆ ಮತ್ತು ವೃತ್ತಿಯಲ್ಲಿ ಹಿನ್ನಡೆಯಾಗುತ್ತದೆ. ಆದ್ದರಿಂದ ಅಡುಗೆಮನೆಯಲ್ಲಿನ ಅರಿಶಿನ ಖಾಲಿಯಾಗುತ್ತಿದೆ ಎಂದಾದಲ್ಲಿ ಅದಕ್ಕೂ ಮುನ್ನ ಹೊಸ ಅರಿಶಿನ ತಂದು ಅರಿಶಿಣದ ಡಬ್ಬ ತುಂಬಿಸಿ. ಮನೆಯಲ್ಲಿ ಅರಿಶಿನದ ಕೊರತೆಯು ಸಂಪತ್ತು ಮತ್ತು ಹಣದ ಕೊರತೆಯನ್ನು ಸೂಚಿಸುತ್ತದೆ ಮತ್ತು ಶುಭ ಕಾರ್ಯಗಳಲ್ಲಿ ಅಡಚಣೆಯನ್ನು ಸೂಚಿಸುತ್ತದೆ. ಅರಿಶಿನವನ್ನು ಯಾರಿಂದಲೂ ಕೇಳಬೇಡಿ ಅಥವಾ ಯಾರಿಗೂ ಕೊಡಬೇಡಿ ಎನ್ನುವುದನ್ನು ನೆನಪಿನಲ್ಲಿಡಿ.
ಈ ಸುದ್ದಿಯನ್ನೂ ಓದಿ: Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕನ್ನಡಿ ಯಾವ ದಿಕ್ಕಿನಲ್ಲಿದ್ದರೆ ಶುಭ?
ಹಿಟ್ಟು
ಕೆಲವರು ಮನೆಯಲ್ಲಿ ಹಿಟ್ಟಿನ ಪಾತ್ರ ಖಾಲಿಯಾದ ನಂತರವೇ ಹಿಟ್ಟು ತುಂಬಿಸುತ್ತಾರೆ. ಈ ರೀತಿ ಯಾವತ್ತೂ ಮಾಡಕೂಡದು. ಹೀಗೆ ಮಾಡುವುದರಿಂದ ನಿಮ್ಮ ಅದೃಷ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀಳುತ್ತದೆ ಮತ್ತು ನಿಮಗೆ ಆರ್ಥಿಕ ಸಂಕಷ್ಟ ಎದುರಾಗಬಹುದು. ಹಾಗಾಗಿ ಹಿಟ್ಟಿನ ಪಾತ್ರೆ ಖಾಲಿಯಾಗುವುದಕ್ಕೂ ಮೊದಲೇ ಅದರಲ್ಲಿ ಹಿಟ್ಟು ತುಂಬಿಸಬೇಕು.
ಅಕ್ಕಿ
ಅಕ್ಕಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ, ಏಕೆಂದರೆ ಇದನ್ನು ಶುಭ ಕಾರ್ಯಗಳಲ್ಲಿಯೂ ಬಳಸಲಾಗುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ಅಕ್ಕಿಗೆ ಕೊರತೆ ಉಂಟಾದರೆ, ನಿಮಗೆ ಶುಕ್ರ ದೋಷ ಉಂಟಾಗಬಹುದು. ಇದರಿಂದ ನಿಮ್ಮ ಸಂತೋಷ, ಪ್ರಗತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀಳಬಹುದು. ಆದ್ದರಿಂದ ಮನೆಯಲ್ಲಿ ಅಕ್ಕಿ ಮುಗಿಯುವುದಕ್ಕೂ ಮೊದಲೇ, ಅಕ್ಕಿಯನ್ನು ತನ್ನಿ.
ಉಪ್ಪು
ಉಪ್ಪಿಲ್ಲದೆ ಆಹಾರ ಹೇಗೆ ಅಪೂರ್ಣವಾಗಿದೆಯೋ, ಅಡಿಗೆ ಕೂಡ ಅಪೂರ್ಣವೇ. ಅಡುಗೆಮನೆಯಲ್ಲಿ ಉಪ್ಪು ಖಾಲಿಯಾದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಬಡತನ ಬರುತ್ತದೆ. ಜಗಳಗಳು ನಡೆಯುತ್ತವೆ, ಹಾಗಾಗಿ ಅಡುಗೆಮನೆಯಲ್ಲಿ ಯಾವತ್ತು ಉಪ್ಪು ಖಾಲಿಯಾಗದಂತೆ ನೋಡಿಕೊಳ್ಳಿ. ಇದಲ್ಲದೆ, ಇದು ಅಡುಗೆಮನೆಯಲ್ಲಿ ಕೆಲಸ ಮಾಡುವ ಮಹಿಳೆಯರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.