Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕನ್ನಡಿ ಯಾವ ದಿಕ್ಕಿನಲ್ಲಿದ್ದರೆ ಶುಭ?
ಕನ್ನಡಿಯನ್ನು ಮನೆಯ ಅಲಂಕಾರಕ್ಕಾಗಿ, ಮನೆಯ ಒಳಾಂಗಣ ಸೌಂದರ್ಯ ಹೆಚ್ಚಿಸಲು ಬಳಸುತ್ತಾರೆ. ಆದರೆ ಕನ್ನಡಿ ಇಡುವ ದಿಕ್ಕು ವಾಸ್ತು ಪ್ರಕಾರ ಸರಿಯಾಗಿರಬೇಕು. ಹಾಗಾದರೆ ಯಾವ ದಿಕ್ಕಿನಲ್ಲಿ ಇಡಬೇಕು, ಯಾವ ದಿಕ್ಕಿನಲ್ಲಿ ಇಡಬಾರದು ಎನ್ನುವುದರ ಕುರಿತಾಗಿ ಇಲ್ಲಿದೆ ಮಾಹಿತಿ.


ನಮ್ಮ ಸೌಂದರ್ಯವನ್ನು ಅಂದವನ್ನು ಪ್ರತಿಬಿಂಬಿಸುವ ಕನ್ನಡಿಗೆ ವಾಸ್ತು ಶಾಸ್ತ್ರದಲ್ಲಿ ಬಹಳಷ್ಟು ಮಹತ್ವವನ್ನು ನೀಡಲಾಗಿದೆ. ಹೌದು ಪ್ರತಿಯೋರ್ವರ ಮನೆಯಲ್ಲಿ ಕನ್ನಡಿ ಇದ್ದೆ ಇರುತ್ತದೆ. ಬೆಳಿಗ್ಗೆಯಿಂದ ಎದ್ದು ಒಂದು ರಾತ್ರಿ ಮಲಗುವವರೆಗೂ ಒಂದು ನೂರು ಸಲವಾದರೂ
ಕನ್ನಡಿ ನೋಡಿರುತ್ತೇವೆ. ಅದರಲ್ಲಿಯೂ ಇತ್ತೀಚಿಗೆ ಕನ್ನಡಿಯನ್ನು ಮನೆಯ ಅಲಂಕಾರಿಕ ವಸ್ತು ಆಗಿಯೂ ಬಳಸುತ್ತಿದ್ದು, ಈಗ ಈ ಕನ್ನಡಿಗಳು ಮುಖ ನೋಡಲು ಮಾತ್ರವಲ್ಲದೆ ಮನೆಗಳ ಅಂದವನ್ನು ಹೆಚ್ಚಿಸಲೂ ಬಳಸಲಾಗುತ್ತದೆ. ಆದರೆ ಮನೆಯಲ್ಲಿ ಇಡುವಂತಹ ಪುಟ್ಟ ಕನ್ನಡಿಯೂ ಕೂಡ ನಿಮ್ಮ ಮನೆ, ಜೀವನದಲ್ಲಿ ಬದಲಾವಣೆಗೆ ಕಾರಣವಾಗಲಿದ್ದು, ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಕನ್ನಡಿಯನ್ನು ಸರಿಯಾದ ಸ್ಥಳದಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿಯು ಕಡಿಮೆಯಾಗಿ, ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದ್ರೆ ಮನೆಯಲ್ಲಿ ಕನ್ನಡಿಯನ್ನು ಇಡಲು ಸೂಕ್ತ ದಿಕ್ಕು ಯಾವುದು ಮತ್ತು ಮನೆಯ ಯಾವ ಭಾಗದಲ್ಲಿ ಕನ್ನಡಿಯನ್ನು ಇಡಬೇಕು?(Vastu Tips) ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಮನೆಯ ಈ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸಿ..
ವಾಸ್ತು ಶಾಸ್ತ್ರದ ಪ್ರಕಾರ ಮನೆಯೊಳಗೆ ಕನ್ನಡಿಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಕನ್ನಡಿಯನ್ನು ಹಾಕುವುದು ಉತ್ತಮವೆಂದು ಪರಿಗಣಿಸಲಾಗಿದೆ. ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ಮನೆಯ ಈ ಭಾಗದಲ್ಲಿ ಎಲ್ಲಾ ಕನ್ನಡಿ ಇಡಬಹುದು
ಮನೆಯಲ್ಲಿ ಡ್ರೆಸ್ಸಿಂಗ್ ರೂಮ್ ಮತ್ತು ವಾಶ್ ರೂಂ ಅಲ್ಲದೆ, ಡೈನಿಂಗ್ ಟೇಬಲ್ ಎದುರು ಇರುವ ಡೈನಿಂಗ್ ಏರಿಯಾದಲ್ಲೂ ಕನ್ನಡಿ ಇಡಬಹುದು. ಆದ್ದರಿಂದ ಇಡೀ ಕುಟುಂಬವು ತಿನ್ನುವಾಗ ಕನ್ನಡಿಯಲ್ಲಿ ಪ್ರತಿಫಲಿಸುತ್ತದೆ. ವಾಸ್ತು ಪ್ರಕಾರ, ಇದು ಸಮೃದ್ಧಿಯನ್ನು ತರುತ್ತದೆ, ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ಬಾಂಧವ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ಲಾಕರ್ ಒಳಗೆ ಕನ್ನಡಿ ಇಡುವುದರಿಂದ ನಿಮ್ಮ ಸಂಪತ್ತನ್ನು ಹೆಚ್ಚಿಸಬಹುದು.
ಇದನ್ನು ಓದಿ: Vastu tips: ವಾಸ್ತು ಪ್ರಕಾರ ಲಾಫಿಂಗ್ ಬುದ್ಧನ ಪ್ರತಿಮೆ ಮನೆಯ ಈ ಭಾಗದಲ್ಲಿಟ್ಟರೆ ಸುಖ ಸಂತೋಷ ನೆಲೆಸುತ್ತೆ
ವಾಸ್ತು ಪ್ರಕಾರ ಮನೆಯಲ್ಲಿ ಕನ್ನಡಿ ಇಡುವಾಗ ಪರಸ್ಪರ ಮುಖ ಮಾಡಿ ಕನ್ನಡಿಗಳನ್ನು ಮಾಡಬಾರದು. ಒಂದು ಕನ್ನಡಿಯ ಎದುರು ಮತ್ತೊಂದು ಕನ್ನಡಿಯನ್ನು ತೂಗು ಹಾಕಿದರೆ ಮನೆಯಲ್ಲಿ ಟೆನ್ಷನ್, ಜಗಳ ಹೆಚ್ಚುತ್ತದೆ.
ಇನ್ನೂ ಮನೆಯಲ್ಲಿ ಎಂದಿಗೂ ಒಡೆದ ಕನ್ನಡಿ ಇರಬಾರದು ಎಂಬುದನ್ನು ನೆನಪಿಡಿ. ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಬೆಳಗ್ಗೆ ಎದ್ದು ಕನ್ನಡಿ ಒಡೆದು ನೋಡಿದರೆ ದಿನವಿಡೀ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಅಡುಗೆ ಮನೆಯಲ್ಲೂ ಕನ್ನಡಿ ಇಡಬಾರದು. ಇದು ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.