Vaastu Tips: ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಬೇಕು ಗೊತ್ತಾ? ಇದರ ಬಗ್ಗೆ ಇರಲಿ ಗಮನ
Vastu Shastra; ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅದರಲ್ಲೂ ಅಡುಗೆ ಮನೆಯನ್ನು ಬಹಳ ಪ್ರಮುಖ ಸ್ಥಳವೆಂದು ಪರಿಗಣಿಸಲಾಗಿದ್ದು, ಪ್ರತಿಯೊಂದೂ ದಿಕ್ಕು ತನ್ನದೇ ಆದ ಮಹತ್ವವನ್ನು ಹೊಂದಿದೆ, ಆದ್ದರಿಂದ ನಾವಿಂದು ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಬೇಕು ಅನೋದನ್ನು ಹೇಳುತ್ತಿದ್ದೇವೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ವಾಸ್ತು ಶಾಸ್ತ್ರದಲ್ಲಿ ನಿತ್ಯ ಜೀವನದಲ್ಲಿ ಮಾಡುವ ಪ್ರತಿ ಕೆಲಸಕ್ಕೂ ವಾಸ್ತು ನಿಯಮಗಳಿವೆ. ಅವುಗಳನ್ನು ಅನುಸರಿಸಿದಾಗ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಜೀವನದಲ್ಲಿ ಉತ್ತಮ ಬೆಳವಣಿಗೆಗಳನ್ನು ಕಾಣಬಹುದಾಗಿರುತ್ತದೆ. ವಾಸ್ತು ದೋಷವಿದ್ದಲ್ಲಿ ಪ್ರತಿಯೊಂದು ಕೆಲಸಕ್ಕೂ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತು ನಿಯಮಗಳ ಗಮನವಿರಿಸಿ, ಅನುಸರಿಸಿದರೆ ಅನೇಕ ಕಷ್ಟ-ನಷ್ಟಗಳಿಂದ ಪಾರಾಗಬಹುದಾಗಿದೆ. ಮನೆ ಕಟ್ಟಲು, ಒಳಾಂಗಣವನ್ನು ಅಲಂಕರಿಸಲು, ದೇವರ ಕೋಣೆಯನ್ನು ನಿರ್ಮಿಸಲು ವಾಸ್ತು ನಿಯಮಗಳಿರುವಂತೆ, ಅಡುಗೆ ಮಾಡುವಾಗ ಸಹ ಪಾಲಿಸಬೇಕಾದ ಕೆಲವು ವಿಚಾರಗಳನ್ನು ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದೆ. ಹಾಗಾದರೆ ಅಡುಗೆ ಮಾಡುವ ಸಮಯದಲ್ಲಿ ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ನಿಯಮಗಳ ಬಗ್ಗೆ ತಿಳಿಯೋಣ.
ಅಡುಗೆ ಮಾಡುವ ಸಮಯದಲ್ಲಿ ಮತ್ತು ಅದನ್ನು ಸೇವಿಸುವಾಗ ಮನಸ್ಸು ಮತ್ತು ಬುದ್ಧಿಯಲ್ಲಿ ಸಾತ್ವಿಕತೆಯ ಭಾವನೆ ಇರಬೇಕು. ಯಾವ ದಿಕ್ಕಿಗೆ ಮುಖಮಾಡಿ ಅಡುಗೆ ಮಾಡುತ್ತೇವೆ ಮತ್ತು ಅದನ್ನು ಸೇವಿಸುವಾಗ ಯಾವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳುತ್ತೇವೆ ಎಂಬುದು ಹೆಚ್ಚು ಮುಖ್ಯವಾಗುತ್ತದೆ. ಮನಸ್ಸು ಮತ್ತು ಸ್ವಾಸ್ಥ್ಯವು ಉತ್ತಮವಾಗಿರಲು ದಿಕ್ಕಿನ ಬಗ್ಗೆ ಗಮನಹರಿಸುವುದು ಆವಶ್ಯಕವಾಗುತ್ತದೆ.
ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆಯ ವಾಸ್ತುವಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಮನೆಯ ಸದಸ್ಯರಲ್ಲಿ ಕಾಡುವ ಹೆಚ್ಚಿನ ಅನಾರೋಗ್ಯ ಮತ್ತು ಇನ್ನಿತರ ಸಮಸ್ಯೆಗಳಿಗೆ ಅಡುಗೆ ಮನೆಯ ವಾಸ್ತು ದೋಷವು ಕಾರಣವಾಗಿರುತ್ತದೆ. ಯಾವ ರೀತಿಯ ಅಡುಗೆಯನ್ನು ಸೇವಿಸುತ್ತೇವೆಯೋ ಮನಸ್ಸು ಅದೇ ರೀತಿ ವರ್ತಿಸುತ್ತದೆ.
ಈ ದಿಕ್ಕಿನಲ್ಲಿ ನಿಂತು ಅಡುಗೆ ಮಾಡುವುದು ಒಳ್ಳೆಯದಲ್ಲ
ವಾಸ್ತು ಶಾಸ್ತ್ರದ ಅನುಸಾರ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದು ಒಳ್ಳೆಯದಲ್ಲವೆಂದು ಹೇಳಲಾಗುತ್ತದೆ. ದಕ್ಷಿಣ ದಿಕ್ಕಿಗೆ ಮುಖಮಾಡಿ ಅಡುಗೆಯನ್ನು ತಯಾರಿಸಿದರೆ ಅದರಿಂದ ಸಮಸ್ಯೆಯು ಉಂಟಾಗುತ್ತದೆ. ಹೀಗೆ ಮಾಡುವುದರಿಂದ ಅಡುಗೆಯನ್ನು ತಯಾರಿಸುವವರ ಮತ್ತು ಅದನ್ನು ಸೇವಿಸುವವರ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಉಂಟಾಗುತ್ತವೆ. ಅಷ್ಟೇ ಅಲ್ಲದೆ ಅನೇಕ ಸ್ವಾಸ್ಥ್ಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. ಹೆಚ್ಚಾಗಿ ತಲೆನೋವು, ಸಂದು ನೋವು ಮತ್ತು ಮೈಗ್ರೇನ್ ಗಳಂತಹ ಕಾಯಿಲೆಗಳು ಸದಾ ಕಾಲ ಕಾಡುತ್ತಿರುತ್ತವೆ. ಹಾಗಾಗಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದು ಮತ್ತುಸೇವಿಸುವುದು ಜ್ಯೋತಿಷ್ಯದ ಪ್ರಕಾರ ನಿಷಿದ್ಧವಾಗಿದೆ ಎಂದು ಹೇಳಲಾಗುತ್ತದೆ.
ಈ ದಿಕ್ಕಿನಲ್ಲಿ ಅಡುಗೆ ಮಾಡಿದರೆ ಹೆಚ್ಚು ಅಶುಭ
ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದು ಅಶುಭವೆಂದು ಹೇಳಲಾಗುತ್ತದೆ. ಪಶ್ಚಿಮ ದಿಕ್ಕಿಗೆ ನಿಂತು ಭೋಜನವನ್ನು ತಯಾರಿಸಿದರೆ ಅದು ಅದು ಹೆಚ್ಚಿನ ಕಲಹಕ್ಕೆ ದಾರಿ ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಅಡುಗೆ ತಯಾರಿಸುವ ಸ್ತ್ರೀಯರ ದಾಂಪತ್ಯ ಜೀವನವು ಚೆನ್ನಾಗಿರುವುದಿಲ್ಲವೆಂದು ಮತ್ತು ಸದಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಸಹ ಹೇಳಲಾಗುತ್ತದೆ.
ಈ ಸುದ್ದಿಯನ್ನು ಓದಿ: Vastu Tips: ಯಾವ ದಿಕ್ಕಿಗೆ ತಲೆ ಇಟ್ಟು ಮಲಗಿದ್ದರೆ ಶುಭ.. ಯಾವ ದಿಕ್ಕಿಗೆ ಮಲಗಿದ್ದರೆ ಅಶುಭ? ಇಲ್ಲಿದೆ ಉತ್ತರ
ಈ ದಿಕ್ಕು ನಷ್ಟಕ್ಕೆ ಕಾರಣವಾಗಬಹುದು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಕ್ಷಿಣ ಮತ್ತು ಪಶ್ಚಿಮ ದಿಕ್ಕನ್ನು ಹೊರತುಪಡಿಸಿದರೆ ಉತ್ತರ ದಿಕ್ಕು ಸಹ ಅಡುಗೆ ತಯಾರಿಸಲು ಉತ್ತಮವಾದ ದಿಕ್ಕಲ್ಲ ಎಂದು ಹೇಳಲಾಗಿದೆ. ಉತ್ತರ ದಿಕ್ಕಿಗೆ ಮುಖ ಮಾಡಿ ನಿಂತ ಅಡುಗೆ ತಯಾರಿಸುವುದರಿಂದ ಅನೇಕ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು, ಹೆಚ್ಚಿನ ತೊಂದರೆಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ.
ಈ ದಿಕ್ಕಿಗೆ ನಿಂತು ಅಡುಗೆ ಮಾಡುವುದು ಒಳ್ಳೆಯದು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಕ್ಷಿಣ ಮತ್ತು ಪಶ್ಚಿಮ ದಿಕ್ಕನ್ನು ಹೊರತುಪಡಿಸಿದರೆ ಉತ್ತರ ದಿಕ್ಕು ಸಹ ಅಡುಗೆ ತಯಾರಿಸಲು ಉತ್ತಮವಾದ ದಿಕ್ಕಲ್ಲ ಎಂದು ಹೇಳಲಾಗಿದೆ. ಉತ್ತರ ದಿಕ್ಕಿಗೆ ಮುಖ ಮಾಡಿ ನಿಂತ ಅಡುಗೆ ತಯಾರಿಸುವುದರಿಂದ ಅನೇಕ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು, ಹೆಚ್ಚಿನ ತೊಂದರೆಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ.ರೆ ಮತ್ತು ಭೋಜನವನ್ನು ಸೇವಿಸಿದರೆ ಮನಸ್ಸು ಮತ್ತು ಬುದ್ಧಿ ಅತ್ಯಂತ ಸಾತ್ವಿಕವಾಗಿ ಇರುವುದಲ್ಲದೆ, ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ. ಇದರಿಂದ ಮನೆಯ ಸದಸ್ಯರು ಎಲ್ಲ ಕಾರ್ಯಗಳನ್ನು ನಿರ್ವಹಿಸಲು ಹೆಚ್ಚಿನ ಹುರುಪನ್ನು ಹೊಂದಿರುವುದಲ್ಲದೆ, ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಹಾಗಾಗಿ ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ನಿಂತು ತಯಾರಿಸಿದರೆ ಅದು ಹೆಚ್ಚಿನ ಶಕ್ತಿಯನ್ನು ಮತ್ತು ಉತ್ತಮ ಆರೋಗ್ಯವನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಭೋಜನವನ್ನು ಮಾಡುವಾಗ ಸಹ ಪೂರ್ವದಿಕ್ಕಿಗೆ ಮುಖಮಾಡಿ ಕುಳಿತು ಭೋಜನ ಸೇವನೆ ಮಾಡಿದರೆ ಅದು ಹೆಚ್ಚಿನ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ.