Vastu Tips: ಎಚ್ಚರ ಮನೆಯಲ್ಲಿ ಸಮಸ್ಯೆಗಳನ್ನು ಉಂಟು ಮಾಡಬಹುದು ಪೊರಕೆ
ಪೊರಕೆಗೆ ಸಂಬಂಧಿಸಿ ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ಲಕ್ಷ್ಮೀ ದೇವಿಯ ಕೃಪಾಕಟಾಕ್ಷವನ್ನು ಪಡೆಯಬಹುದು ಎನ್ನುತ್ತಾರೆ ವಾಸ್ತು ತಜ್ಞರು. ಲಕ್ಷ್ಮೀ ದೇವಿಯ ಆಶೀರ್ವಾದ ಮನೆಗೆ ಸಿಕ್ಕಿದರೆ ಮನೆಯಲ್ಲಿ ಸುಖ, ಶಾಂತಿ ನೆಲೆಸುವುದು, ಆರ್ಥಿಕ ಸಮೃದ್ಧಿಯಾಗುವುದು. ಅದೇ ಪೂರಕೆಗೆ ಅಗೌರವ ತೋರಿದರೆ ಮನೆಯಲ್ಲಿ ವಾಸ್ತು ದೋಷಗಳು (Vastu Tips) ಕಾಣಿಸಿಕೊಳ್ಳುತ್ತದೆ. ಇದರಿಂದ ಹಲವಾರು ಸಮಸ್ಯೆಗಳು ಉದ್ಭವವಾಗುವುದು.


ಮನೆಯನ್ನು ಸ್ವಚ್ಛ ಮಾಡಲು ಬಳಸುವ ಪೊರಕೆ (Vastu for brooms) ಮನೆಗೆ ಸುಖ, ಶಾಂತಿಯನ್ನು ತರಬಹುದು ಅಥವಾ ದುಷ್ಟ ಶಕ್ತಿ, ನಕಾರಾತ್ಮಕತೆಯನ್ನು ಆಹ್ವಾನಿಸಬಹುದು. ಹೀಗಾಗಿ ಪೊರಕೆಗೆ ವಾಸ್ತು ಶಾಸ್ತ್ರದಲ್ಲಿ (vastu for home) ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪೊರಕೆಗೆ ಸಂಬಂಧಿಸಿ ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ಲಕ್ಷ್ಮೀ ದೇವಿಯ ಕೃಪಾಕಟಾಕ್ಷವನ್ನು ಪಡೆಯಬಹುದು ಎನ್ನುತ್ತಾರೆ ವಾಸ್ತು ತಜ್ಞರು. ಲಕ್ಷ್ಮೀ ದೇವಿಯ ಆಶೀರ್ವಾದ ಮನೆಗೆ ಸಿಕ್ಕಿದರೆ ಮನೆಯಲ್ಲಿ ಸುಖ, ಶಾಂತಿ ನೆಲೆಸುವುದು, ಆರ್ಥಿಕ ಸಮೃದ್ಧಿಯಾಗುವುದು. ಅದೇ ಪೂರಕೆಗೆ ಅಗೌರವ ತೋರಿದರೆ ಮನೆಯಲ್ಲಿ ವಾಸ್ತು ದೋಷಗಳು (Vastu Tips) ಕಾಣಿಸಿಕೊಳ್ಳುತ್ತದೆ. ಇದರಿಂದ ಹಲವಾರು ಸಮಸ್ಯೆಗಳು ಉದ್ಭವವಾಗುವುದು.
ಹಿಂದೂ ಧರ್ಮದಲ್ಲಿ ಪೊರಕೆಯನ್ನು ಲಕ್ಷ್ಮೀ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ಪೊರಕೆಯನ್ನು ಪಾದಗಳಿಂದ ಮುಟ್ಟುವುದನ್ನು ನಿಷೇಧಿಸಲಾಗಿದೆ. ಇದಲ್ಲದೆ ಪೊರಕೆಗೆ ಸಂಬಂಧಿಸಿ ಕೆಲವೊಂದು ವಾಸ್ತು ನಿಯಮಗಳನ್ನು ಹೇಳಲಾಗಿದೆ.

ಸಾಮಾನ್ಯವಾಗಿ ಪೊರಕೆಯನ್ನು ದೃಷ್ಟಿ ತೆಗೆಯಲು, ಮನೆಯ ದೃಷ್ಟಿ ದೋಷಗಳನ್ನು ದೂರಮಾಡಲು ಬಳಸಲಾಗುತ್ತದೆ. ಒಂದು ಕಡೆ ವಾಸ್ತು ಶಾಸ್ತ್ರವು ಪೊರಕೆಗೆ ಸಂಬಂಧಿಸಿ ಅನೇಕ ತಂತ್ರಗಳನ್ನು ಹೇಳಿದರೆ ಮತ್ತೊಂದೆಡೆ ಪೊರಕೆಗೆ ಸಂಬಂಧಿಸಿ ಕೆಲವೊಂದು ಪರಿಹಾರ ವಿಧಿವಿಧಾನಗಳನ್ನು ತಿಳಿಸಿದೆ. ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಪೊರಕೆಗೆ ಸಂಬಂಧಿಸಿದ ಕೆಲವು ವಾಸ್ತು ಪರಿಹಾರಗಳ ಕುರಿತು ವಾಸ್ತು ತಜ್ಞರಾದ ರಾಧಾಕಾಂತ್ ವತ್ಸ್ ಹೇಳುವುದು ಹೀಗೆ.
ಮನೆಯಲ್ಲಿ ಪೊರಕೆಯನ್ನು ಯಾವಾಗಲೂ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲೇ ಇಡಬೇಕು. ಯಾಕೆಂದರೆ ಪಶ್ಚಿಮ ದಿಕ್ಕನ್ನು ದೇವಿ ಲಕ್ಷ್ಮೀ ಯ ದಿಕ್ಕು ಎಂದು ಪರಿಗಣಿಸಲಾಗಿದೆ. ಪೊರಕೆಯು ದೇವಿ ಲಕ್ಷ್ಮೀಯ ಸಂಕೇತವಾಗಿದೆ. ಅಲ್ಲದೇ ದಕ್ಷಿಣ ದಿಕ್ಕನ್ನು ಯಮನೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಯಮ ಅಂದರೆ ಮರಣವನ್ನು ತಪ್ಪಿಸಲು ಪೊರಕೆಯನ್ನು ಆ ದಿಕ್ಕಿನಲ್ಲಿ ಇಡುವುದು ಒಳ್ಳೆಯದು ಎನ್ನಲಾಗುತ್ತದೆ.
ಕೆಲವರು ಮನೆಯ ಮುಖ್ಯ ದ್ವಾರದಲ್ಲಿ ಪೊರಕೆಯನ್ನು ಇಡುವ ಅಭ್ಯಾಸ ಹೊಂದಿರುತ್ತಾರೆ. ಪೊರಕೆಯನ್ನು ಲಕ್ಷ್ಮೀ ದೇವಿಯ ಸಂಕೇತವೆಂದು ಪರಿಗಣಿಸಲಾಗಿದ್ದರೂ ಅದು ಕಸವನ್ನು ಸ್ವಚ್ಛಗೊಳಿಸಲು ಬಳಸುವ ವಸ್ತುವಾಗಿದೆ. ಹೀಗಾಗಿ ಮನೆಯ ಮುಖ್ಯ ದ್ವಾರದ ಬಳಿ ಪೊರಕೆಯನ್ನು ಇಡುವುದನ್ನು ನಿಷೇಧಿಸಲಾಗಿದೆ. ಮನೆಯ ಮುಖ್ಯ ದ್ವಾರದಲ್ಲಿ ಪೊರಕೆಯನ್ನು ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಇದರಿಂದ ತೊಂದರೆಗಳು ಉಂಟಾಗುತ್ತದೆ.
ಇದನ್ನೂ ಓದಿ: Vastu Tips: ಆಯುಧಗಳು ಮನೆಯಲ್ಲಿ ಇಡುವುದರಿಂದ ಎದುರಾಗುವ ಆಪತ್ತುಗಳೇನು?
ಪೊರಕೆಯನ್ನು ಖರೀದಿಸುವ ಮೊದಲು ಅದರ ಬಣ್ಣಕ್ಕೆ ಗಮನ ಕೊಡುವುದು ಬಹಳ ಮುಖ್ಯ. ಮನೆಗೆ ಪೊರಕೆಯನ್ನು ಖರೀದಿಸುತ್ತಿದ್ದರೆ ಬಿಳಿ ಅಥವಾ ನೀಲಿ ಪೊರಕೆಯನ್ನು ಖರೀದಿಸಿ. ಬಿಳಿ ಪೊರಕೆಯನ್ನು ಮನೆಗೆ ತರುವುದರಿಂದ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ ಮತ್ತು ತೊಂದರೆಗಳು ದೂರವಾಗುತ್ತವೆ. ನೀಲಿ ಬಣ್ಣದ ಪೊರಕೆಯು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪೊರಕೆ ಹೊಸದಾಗಿದ್ದರೆ ಅದನ್ನು ಬಳಸುವ ಮೊದಲು ಗಂಗಾಜಲದಿಂದ ಸ್ನಾನ ಮಾಡುವುದು ಉತ್ತಮ. ಅಲ್ಲದೇ ಪೊರಕೆಯನ್ನು ಮಧ್ಯದಲ್ಲಿ ಕೆಂಪು ಬಟ್ಟೆಯಿಂದ ಕಟ್ಟಿದರೆ ಪೊರಕೆಗೆ ಸಂಬಂಧಿಸಿದ ಯಾವುದೇ ವಾಸ್ತು ದೋಷವಿದ್ದರೂ ಅದು ನಿವಾರಣೆಯಾಗುತ್ತದೆ.