Vastu Tips: ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಚಿತ್ರ ಇಡಬಹುದೇ? ಏನು ಹೇಳುತ್ತದೆ ವಾಸ್ತು?
ಸಾಮಾನ್ಯವಾಗಿ ರಾಧಾಕೃಷ್ಣನ ಚಿತ್ರವನ್ನು ಮನೆಯಲ್ಲಿ ಇಡಬಾರದು ಎಂದು ಅನೇಕರು ಹೇಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರ ಅಪೂರ್ಣ ಪ್ರೇಮ ಕಥೆಯಾಗಿದೆ. ಆದರೆ ಈ ಬಗ್ಗೆ ವಾಸ್ತು ಏನು ಹೇಳುತ್ತದೆ? ಅದರಲ್ಲೂ ಮುಖ್ಯವಾಗಿ ಮಲಗುವ ಕೋಣೆಯಲ್ಲಿ ರಾಧಾ ಕೃಷ್ಣನ ಚಿತ್ರವನ್ನು ಇಡುವ ಬಗ್ಗೆ ವಾಸ್ತು ಶಾಸ್ತ್ರ ಹೇಳುವುದೇನು? ಇಲ್ಲಿದೆ ಮಾಹಿತಿ.

-

ಬೆಂಗಳೂರು: ಮಲಗುವ ಕೋಣೆ (Vastu tips for bedroom) ಸ್ವಚ್ಛ ಮತ್ತು ಸುಂದರವಾಗಿರಬೇಕು ಎಂದು ಕೆಲವೊಂದು ಅಲಂಕಾರಿಕ ವಸ್ತುಗಳನ್ನು (vastu about Decorative item) ಇಡುತ್ತೇವೆ. ಹೀಗೆ ನಾವು ಇಡುವ ವಸ್ತುಗಳು ನಮ್ಮ ವಿಶ್ರಾಂತಿಯ ಮೇಲೆ ಪರಿಣಾಮ ಬೀರುತ್ತದೆ. ಅನೇಕರು ಮಲಗುವ ಕೋಣೆಗಳನ್ನು (bedroom) ಅಲಂಕರಿಸಲು ವಿವಿಧ ರೀತಿಯ ಚಿತ್ರಗಳನ್ನು ಬಳಸುತ್ತಾರೆ. ಇದರಲ್ಲಿ ರಾಧಾ ಮತ್ತು ಕೃಷ್ಣನ (Radhakrishna)ಚಿತ್ರಗಳೂ ಸೇರಿವೆ. ಆದರೆ ಇದು ಸರಿಯೇ ? ಈ ಬಗ್ಗೆ ವಾಸ್ತು ತಜ್ಞರು (Vastu Tips) ಹೇಳುವುದೇನು ಗೊತ್ತೇ?
ಮಲಗುವ ಕೋಣೆಗಳನ್ನು ಅಲಂಕರಿಸಲು ರಾಧಾ ಮತ್ತು ಕೃಷ್ಣನ ಚಿತ್ರವನ್ನು ಹೆಚ್ಚಿನವರು ಆಯ್ಕೆ ಮಾಡುತ್ತಾರೆ. ಕೆಲವರು ಇದು ಸರಿಯಲ್ಲ ಎಂದರೆ ಇನ್ನು ಕೆಲವರು ಇದು ಸೂಕ್ತ ಎನ್ನುತ್ತಾರೆ. ಈ ಬಗ್ಗೆ ವಾಸ್ತು ಶಾಸ್ತ್ರಜ್ಞರಾದ ಪಂಡಿತ್ ಜನ್ಮೇಶ್ ದ್ವಿವೇದಿ ಹೇಳುವುದು ಹೀಗೆ.
ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಚಿತ್ರಗಳನ್ನು ತೂಗು ಹಾಕಬಹುದು. ಆದರೆ ಇದಕ್ಕಾಗಿ ಕೆಲವು ನಿಯಮಗಳಿವೆ. ರಾಧಾಕೃಷ್ಣರ ಚಿತ್ರವು ಪ್ರೀತಿಯ ಸಂಕೇತವಾಗಿದೆ. ವಿವಾಹಿತರು ತಮ್ಮ ಮಲಗುವ ಕೋಣೆಗಳಲ್ಲಿ ಈ ಚಿತ್ರವನ್ನು ಇಡುವುದರಿಂದ ದಾಂಪತ್ಯ ಜೀವನದಲ್ಲಿ ನೆಮ್ಮದಿಯನ್ನು ಪಡೆಯಬಹುದು.
ಮಲಗುವ ಕೋಣೆಯಲ್ಲಿ ಈಶಾನ್ಯ ಅಥವಾ ಉತ್ತರ ದಿಕ್ಕಿನ ಗೋಡೆಯ ಮೇಲೆ ರಾಧಾ ಮತ್ತು ಕೃಷ್ಣನ ಚಿತ್ರವನ್ನು ತೂಗು ಹಾಕಿ. ಇದು ಶುಭವೆಂದು ಪರಿಗಣಿಸಲಾಗಿದೆ. ಈ ದಿಕ್ಕು ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಇದು ವಿವಾಹಿತ ದಂಪತಿಗಳ ನಡುವೆ ಸಾಮರಸ್ಯ ವೃದ್ಧಿಸಲು ಸಹಾಯ ಮಾಡುತ್ತದೆ ಮತ್ತು ಪ್ರೀತಿಯನ್ನು ಬೆಳೆಸುತ್ತದೆ.

ಮಲಗುವ ಕೋಣೆಯಲ್ಲಿ ರಾಧಾಕೃಷ್ಣನ ಚಿತ್ರವನ್ನು ಆಯ್ದುಕೊಳ್ಳುವಾಗ ಪ್ರೀತಿಯ ಸಂಕೇತಗಳನ್ನು ಪ್ರತಿಬಿಂಬಿಸುವಂತಿರಲಿ. ಇದು ಸಂಬಂಧದಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ. ದಂಪತಿಯ ನಡುವೆ ಪ್ರೀತಿಗೆ ಸರಿಯಾದ ಮಾರ್ಗದರ್ಶನ ನೀಡುತ್ತದೆ.
ಮಲಗುವ ಕೋಣೆಯಲ್ಲಿ ರಾಧಾ ಮತ್ತು ಕೃಷ್ಣನ ಚಿತ್ರವನ್ನು ಇರಿಸಲು ಕೆಲವು ನಿಯಮಗಳಿವೆ. ಯಾವಾಗಲೂ ಚಿತ್ರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ರಾತ್ರಿ ಮಲಗುವಾಗ ನಿಮ್ಮ ಪಾದಗಳು ಚಿತ್ರದ ಕಡೆಗೆ ಇರಬಾರದು. ಚಿತ್ರದ ಬಳಿ ಯಾವುದೇ ಅಶುದ್ಧ ವಸ್ತುಗಳನ್ನು ಇರಿಸಬಾರದು.
ಇದನ್ನೂ ಓದಿ: Vastu Tips: ಮನೆಯಲ್ಲಿ ಸಕಾರಾತ್ಮಕತೆಯನ್ನು ವೃದ್ಧಿಸಲಿ ನವರಾತ್ರಿ
ರಾಧಾಕೃಷ್ಣರ ಚಿತ್ರವನ್ನು ಗೋಡೆಯ ಮೇಲೆ ನೇತು ಹಾಕಬೇಕು. ಇದು ದೇವರಿಗೆ ಅಗೌರವ ತೋರುವುದನ್ನು ತಡೆಯುತ್ತದೆ. ರಾಧಾಕೃಷ್ಣರ ಚಿತ್ರವು ಮಲಗುವ ಕೋಣೆಯಲ್ಲಿದ್ದರೆ ಸಕಾರಾತ್ಮಕತೆಯನ್ನು ವೃದ್ಧಿಸಿಕೊಳ್ಳಬಹುದು. ಇದರಿಂದ ವೈವಾಹಿಕ ಜೀವನ ಸಂತೋಷಮಾಯವಾಗಿರುತ್ತದೆ.