ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chanakya Niti: ಈ 4 ಸಂದರ್ಭಗಳಲ್ಲಿ ಧೈರ್ಯ ಪ್ರದರ್ಶಿಸುವುದಕ್ಕಿಂತ, ದೂರ ಹೋಗುವುದೇ ಜಾಣತನ ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ ಕೆಲವು ಸಂದರ್ಭಗಳಲ್ಲಿ ಧೈರ್ಯ ತೋರಿಸುವುದಕ್ಕಿಂತ ಅಲ್ಲಿಂದ ದೂರ ಹೋಗುವುದು ಉತ್ತಮ. ಹಿಂಸಾಚಾರ, ಶತ್ರುವಿನ ದಾಳಿ, ಆರ್ಥಿಕ ಸಂಕಷ್ಟ ಇರುವ ಸ್ಥಳ ಹಾಗೂ ಅಪರಾಧಿಗಳ ಸಾನ್ನಿಧ್ಯದಲ್ಲಿರುವುದು ಅಪಾಯಕಾರಿಯಾಗಿದೆ. ಹಾಗಾಗಿ ಈ 4 ಸಂದರ್ಭಗಳಲ್ಲಿ ದೂರ ಉಳಿಯುವುದೇ ಉತ್ತಮ ಎನ್ನುತ್ತಾರೆ ಚಾಣಕ್ಯ

ಈ 4 ಸಂದರ್ಭಗಳಲ್ಲಿ ದೂರ ಉಳಿಯುವುದೇ ಉತ್ತಮ

ಚಾಣಕ್ಯ -

Profile
Sushmitha Jain Mar 6, 2026 8:26 AM

ಬೆಂಗಳೂರು: ಆಚಾರ್ಯ ಚಾಣಕ್ಯನ ನೀತಿ(Chanakya Niti) ಶಾಸ್ತ್ರವು ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಅನೇಕ ಮಾರ್ಗದರ್ಶನಗಳನ್ನು ನೀಡುತ್ತದೆ. ಕಷ್ಟದ ಸಂದರ್ಭಗಳಲ್ಲಿ ಧೈರ್ಯದಿಂದ ಎದುರಿಸುವುದು ಮಹತ್ವವಾದರೂ, ಕೆಲವು ಸಂದರ್ಭಗಳಲ್ಲಿ ಅಲ್ಲಿ ಉಳಿಯುವುದಕ್ಕಿಂತ ಅಲ್ಲಿಂದ ದೂರ ಹೋಗುವುದು ಜಾಣತನ ಎಂದು ಚಾಣಕ್ಯ ಹೇಳುತ್ತಾನೆ. ತನ್ನ ನೀತಿಶಾಸ್ತ್ರದಲ್ಲಿ ನಾಲ್ಕುಂತಹ ಪರಿಸ್ಥಿತಿಗಳನ್ನು ವಿವರಿಸಿದ್ದು, ಅವುಗಳಲ್ಲಿ ಸಿಲುಕಿಕೊಳ್ಳುವುದರಿಂದ ಜೀವ ಹಾಗೂ ಗೌರವಕ್ಕೆ ಅಪಾಯ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದ್ದಾನೆ.

1. ಹಿಂಸಾಚಾರ ಅಥವಾ ಗಲಭೆಗಳ ಸಂದರ್ಭ

ಯಾವುದೇ ಸ್ಥಳದಲ್ಲಿ ಹಿಂಸಾಚಾರ ಭುಗಿಲೆದ್ದಾಗ ಅಥವಾ ಗಲಭೆಗಳು ನಡೆಯುವ ಸಂದರ್ಭದಲ್ಲಿಯೇ ಅಲ್ಲಿಂದ ತಕ್ಷಣ ದೂರ ಸರಿಯುವುದು ಉತ್ತಮ ಎಂದು ಚಾಣಕ್ಯ ಹೇಳುತ್ತಾನೆ. ಜನಸಮೂಹದಲ್ಲಿ ನಿಯಂತ್ರಣ ತಪ್ಪಿದಾಗ ಯಾವಾಗ ಬೇಕಾದರೂ ದಾಳಿ ಅಥವಾ ಅನಾಹುತ ಸಂಭವಿಸಬಹುದು. ಇಂತಹ ಸಂದರ್ಭಗಳಲ್ಲಿ ಧೈರ್ಯ ತೋರಿಸುವುದಕ್ಕಿಂತ ಸುರಕ್ಷಿತ ಸ್ಥಳಕ್ಕೆ ತೆರಳುವುದು ಜೀವ ಉಳಿಸಿಕೊಳ್ಳುವ ಉತ್ತಮ ಮಾರ್ಗ.

2. ಶತ್ರುವಿನ ದಾಳಿ

ಶತ್ರು ದಾಳಿ ಮಾಡಲು ಬಂದಾಗ ತಕ್ಷಣವೇ ಎದುರಿಸಲು ಸಾಧ್ಯವಾಗದ ಪರಿಸ್ಥಿತಿ ಇದ್ದರೆ, ಅಲ್ಲಿ ಉಳಿಯುವುದು ಅಪಾಯಕಾರಿಯಾಗಿದೆ. ಚಾಣಕ್ಯನ ಪ್ರಕಾರ ಶತ್ರುವನ್ನು ಎದುರಿಸಲು ಸರಿಯಾದ ಸಮಯ ಮತ್ತು ತಂತ್ರ ಅಗತ್ಯ. ಆದ್ದರಿಂದ ಅಸಾಧ್ಯವಾದ ಸಂದರ್ಭಗಳಲ್ಲಿ ಹಿಂದೆ ಸರಿದು ಜೀವ ಉಳಿಸಿಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣ.

Chanakya Niti: ಒಮ್ಮೆ ಹೋದರೆ ಮರಳಿ ಬಾರದ ಮೂರು ಅಮೂಲ್ಯ ಸಂಪತ್ತುಗಳು ಇವು ಎನ್ನುತ್ತಾರೆ ಚಾಣಕ್ಯ

3. ಆರ್ಥಿಕ ಸಂಕಷ್ಟ ಇರುವ ಸ್ಥಳ

ಆರ್ಥಿಕತೆ ಸಂಪೂರ್ಣ ಕುಸಿದಿರುವ ಪ್ರದೇಶದಲ್ಲಿ ದೀರ್ಘಕಾಲ ವಾಸಿಸುವುದು ಕಷ್ಟಕರವಾಗುತ್ತದೆ. ಆಹಾರ, ಉದ್ಯೋಗ ಮತ್ತು ಅಗತ್ಯ ಸಂಪನ್ಮೂಲಗಳ ಕೊರತೆ ಜನರನ್ನು ಸಂಕಷ್ಟಕ್ಕೆ ದೂಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದ ಸುರಕ್ಷತೆ ಮತ್ತು ಜೀವನೋಪಾಯಕ್ಕಾಗಿ ಬೇರೆ ಸ್ಥಳವನ್ನು ಆಯ್ಕೆ ಮಾಡುವುದು ಉತ್ತಮ ಎಂದು ಚಾಣಕ್ಯ ಸೂಚಿಸುತ್ತಾನೆ.

4. ಅಪರಾಧಿಗಳ ಸಾನ್ನಿಧ್ಯ

ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರ ಜೊತೆ ಇರುವುದೂ ಅಪಾಯಕಾರಿ ಎಂದು ಚಾಣಕ್ಯ ಎಚ್ಚರಿಸುತ್ತಾನೆ. ಅಪರಾಧಿಗಳ ಸಂಪರ್ಕದಿಂದ ನಿಮ್ಮ ಗೌರವಕ್ಕೆ ಧಕ್ಕೆಯಾಗಬಹುದು ಅಥವಾ ನೀವು ಮಾಡದ ತಪ್ಪುಗಳಿಗೆ ಸಹ ನೀವು ಹೊಣೆಗಾರರಾಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ವ್ಯಕ್ತಿಗಳಿಂದ ದೂರವಿರುವುದು ಅಗತ್ಯ.
ಚಾಣಕ್ಯನ ನೀತಿಯ ಪ್ರಕಾರ, ಈ ನಾಲ್ಕು ಸಂದರ್ಭಗಳಲ್ಲಿ ಅಲ್ಲಿ ಉಳಿಯುವುದಕ್ಕಿಂತ ದೂರ ಹೋಗುವುದು ಉತ್ತಮ. ಇದರಿಂದ ನಮ್ಮ ಜೀವ, ಗೌರವ ಮತ್ತು ಭವಿಷ್ಯವನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು