ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Sankashta Chaturthi: ಸಂಕಷ್ಟ ಚತುರ್ಥಿ 2026: ವಿಘ್ನೇಶ್ವರನ ಕೃಪೆಗೆ ಇಂದು ಈ ಮಂತ್ರಗಳನ್ನು ಪಠಿಸಿ

ಸಂಕಷ್ಟ ಚತುರ್ಥಿ ದಿನವನ್ನು ವಿಘ್ನೇಶ್ವರನ ಆರಾಧನೆಗೆ ಸಮರ್ಪಿತವಾದ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಉಪವಾಸವಿದ್ದು ಗಣೇಶನ ಪೂಜೆ ಮಾಡಿ ವಿಶೇಷ ಮಂತ್ರಗಳನ್ನು ಜಪಿಸುವುದರಿಂದ ಜೀವನದಲ್ಲಿ ಎದುರಾಗುವ ಅಡೆತಡೆಗಳು ಮತ್ತು ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

ವಿಘ್ನೇಶ್ವರನ ಆರಾಧನೆಯಿಂದ ದೂರಾಗುತ್ತವೆ ಸಂಕಷ್ಟಗಳು

ಗಣೇಶ -

Profile
Sushmitha Jain Mar 6, 2026 7:24 AM

ಬೆಂಗಳೂರು: ಸಂಕಷ್ಟ ಚತುರ್ಥಿ(Sankashti Chaturthi) ವ್ರತವು ವಿಘ್ನಗಳನ್ನು ನಿವಾರಿಸುವ ವಿಘ್ನೇಶ್ವರನಿಗೆ (lord Ganesha) ಸಮರ್ಪಿತವಾದ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ತಿಂಗಳಲ್ಲೂ ಪೂರ್ಣಿಮೆಯ ನಂತರ ಬರುವ ನಾಲ್ಕನೇ ತಿಥಿಯಂದು ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಭಕ್ತರು ಗಣೇಶನ ಆರಾಧನೆಗೆ ವಿಶೇಷವಾಗಿ ಮೀಸಲಿಡುತ್ತಾರೆ. ಈ ಪವಿತ್ರ ದಿನದಂದು ಉಪವಾಸವಿದ್ದು ಗಣಪತಿಯನ್ನು ಪೂಜಿಸಿದರೆ ಜೀವನದಲ್ಲಿ ಎದುರಾಗುವ ಸಂಕಷ್ಟಗಳು, ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.

ಗಣೇಶನು ವಿಘ್ನಗಳನ್ನು ನಿವಾರಿಸುವ ದೇವರೆಂದು ಪೂಜಿಸಲ್ಪಡುತ್ತಾನೆ. ಆದ್ದರಿಂದ ಸಂಕಷ್ಟ ಚತುರ್ಥಿಯಂದು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಅವನ ಅನುಗ್ರಹವನ್ನು ಪಡೆಯಲು ಭಕ್ತರು ವಿವಿಧ ಮಂತ್ರಗಳನ್ನು ಪಠಿಸುವ ಪದ್ಧತಿ ಇದೆ. ಈ ದಿನ ಗಣೇಶನ ಮಂತ್ರಗಳನ್ನು ಜಪಿಸುವುದರಿಂದ ಮನಸ್ಸಿಗೆ ಶಾಂತಿ, ಜೀವನದಲ್ಲಿ ಸಮೃದ್ಧಿ ಮತ್ತು ಯಶಸ್ಸು ದೊರೆಯುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಸಂಕಷ್ಟ ಚತುರ್ಥಿಯಂದು ಪಠಿಸಬೇಕಾದ ಗಣೇಶ ಮಂತ್ರಗಳು

1. ಗಣೇಶ ಸ್ತುತಿ ಮಂತ್ರ
“ಗಜಾನನಂ ಭೂತಗಣಾದಿಸೇವಿತಂ ಕಪಿತ್ಥಜಂಬೂಫಲಚಾರೂ ಭಕ್ಷಣಂ |
ಉಮಾಸುತಂ ಶೋಕವಿನಾಶಕಾರಕಂ ನಮಾಮಿ ವಿಘ್ನೇಶ್ವರಪಾದಪಂಕಜಂ ||”


2. ಶ್ರೀ ಗಣೇಶ ಗಾಯತ್ರಿ ಮಂತ್ರ
“ಓಂ ಏಕದಂತಾಯ ವಿದ್ಮಹೇ
ವಕ್ರತುಂಡಾಯ ಧೀಮಹಿ
ತನ್ನೋ ಬುದ್ಧಿದ್ ಪ್ರಚೋದಯಾತ್”

Astro Tips: ಗುರುವಾರ ಈ ಕ್ರಮಗಳನ್ನು ಪಾಲಿಸಿದರೆ ಶಾಂತಿ– ಸಮೃದ್ಧಿ ನಿಮ್ಮದು!


3. ವಕ್ರತುಂಡ ಮಂತ್ರ
“ವಕ್ರತುಂಡ ಮಹಾಕಾಯ, ಸೂರ್ಯ ಕೋಟಿ ಸಮಪ್ರಭಃ |
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ||”


4. ಏಕದಂತ ಮಂತ್ರ
“ಏಕದಂತಂ ಮಹಾಕಾಯಂ ಲಂಬೋದರಗಜಾನನಂ |
ವಿಘ್ನನಾಶಕರಂ ದೇವಂ ಹೇರಂಬಂ ಪ್ರಣಾಮ್ಯಹಂ ||”

108 ಬಾರಿ ಜಪಿಸಬೇಕಾದ ಮಂತ್ರ

ಸಂಕಷ್ಟ ಚತುರ್ಥಿಯಂದು ಗಣೇಶ ಪೂಜೆ ಮುಗಿದ ಬಳಿಕ “ಓಂ ಗಂ ಗಣಪತಯೇ ವಿಘ್ನ ವಿನಾಶಿನೇ ಸ್ವಾಹ” ಎಂಬ ಮಂತ್ರವನ್ನು 108 ಬಾರಿ ಜಪಿಸುವುದು ಅತ್ಯಂತ ಶುಭಕರವೆಂದು ಹೇಳಲಾಗಿದೆ. ಇದರಿಂದ ಜೀವನದಲ್ಲಿ ಎದುರಾಗುವ ಅಡೆತಡೆಗಳು ದೂರಾಗಿ ಕಾರ್ಯಗಳು ಯಶಸ್ವಿಯಾಗುತ್ತವೆ ಎನ್ನುವ ನಂಬಿಕೆಯಿದೆ.

ಈ ದಿನ ಭಕ್ತರು ದಿನವಿಡೀ ಉಪವಾಸವಿದ್ದು, ಸಂಜೆ ಸಮಯದಲ್ಲಿ ಗಣೇಶನ ಪೂಜೆ ಮಾಡಿ ಚಂದ್ರದರ್ಶನ ಮಾಡಿದ ಬಳಿಕ ವ್ರತವನ್ನು ಮುಗಿಸುತ್ತಾರೆ. ಸಂಕಷ್ಟ ಚತುರ್ಥಿಯಂದು ಗಣೇಶನ ಭಕ್ತಿ ಹಾಗೂ ಮಂತ್ರ ಜಪದಿಂದ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸೌಭಾಗ್ಯ ಲಭಿಸುತ್ತದೆ ಎಂದು ಭಕ್ತರು ನಂಬುತ್ತಾರೆ.