ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today December 23rd: ಇಂದು ಈ ರಾಶಿಯವರ ಮೇಲೆ ಚಂದ್ರನ ಕೃಪೆ: ಎಲ್ಲ ಕೆಲಸದಲ್ಲೂ ಜಯ ಪ್ರಾಪ್ತಿ

ನಿತ್ಯ ಭವಿಷ್ಯ ಡಿಸೆಂಬರ್ 23, 2025: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಪೌಸ ಮಾಸೆ, ಶುಕ್ಷ ಪಕ್ಷದ, ತೃತೀಯ ತಿಥಿ, ಶ್ರವಣ ನಕ್ಷತ್ರದ ಡಿಸೆಂಬರ್ 23ನೇ ತಾರೀಖಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಈ ರಾಶಿಯವರಿಗೆ ಇಂದು ಶುಭಯೋಗದ ಜತೆಗೆ ಧನ ಲಾಭ

ಸಾಂದರ್ಭಿಕ ಚಿತ್ರ. -

Profile
Pushpa Kumari Dec 23, 2025 6:00 AM

ಬೆಂಗಳೂರು: ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷದ, ತೃತೀಯ ತಿಥಿ ಶ್ರವಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಶ್ರವಣ ನಕ್ಷತ್ರದ ಅಧಿಪತಿ ಚಂದ್ರ. ಹೀಗಾಗಿ ಹೆಚ್ಚಿನವರ ಮೇಲೆ ಭಾವುಕತೆಯ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಉತ್ತಮ ದಿನವಾಗಿದ್ದು ಮನಸ್ಸಿಗೆ ಬಹಳಷ್ಟು ನೆಮ್ಮದಿ ಇರುತ್ತದೆ. ಅದೇ ರೀತಿ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು, ಎಲ್ಲರಿಂದಲೂ ಮೆಚ್ಚುಗೆ ಸಿಗಲಿದೆ.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಅದೃಷ್ಟದ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ.‌ ಆದರೆ ಹಿರಿಯರ ಆಶೀರ್ವಾದ ಇಲ್ಲದೆ ಯಾವುದೇ ಫಲ ನಿಮಗೆ ದೊರೆಯುವುದಿಲ್ಲ. ಹಾಗಾಗಿ ಹಿರಿಯರ, ದೇವರ ಆಶೀರ್ವಾದ ಬಹಳ ಮುಖ್ಯ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಕಷ್ಟದ ದಿನವಾಗಲಿದೆ. ಮನಸ್ಸಿಗೆ ಇಂದು ಅಷ್ಟೊಂದು ನೆಮ್ಮದಿ ಇರುವುದಿಲ್ಲ. ನಿಮ್ಮ ಅತೀ ಮುಖ್ಯವಾದ ಸಂಬಂಧದಲ್ಲಿ ಇಂದು ಬೇಸರ ಆಗಬಹುದು‌.

ಕಟಕ ರಾಶಿ: ಕಟಕ ರಾಶಿಯವರಿಗೆ ಅತೀ ಉತ್ತಮ ದಿನ. ನಿಮಗೆ ಎಲ್ಲ ರೀತಿಯ ಸಹಕಾರ ಎಲ್ಲರಿಂದಲೂ ಸಿಗುತ್ತದೆ. ಇಂದು ಅತೀ ಖುಷಿಯಿಂದ ನೀವು ದಿನವನ್ನು ಕಳೆಯಲಿದ್ದೀರಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು ಸಿಗುತ್ತದೆ. ಆದರೆ ಇಂದು ಬಹಳ ಜಾಗೃತರಾಗಿ ನೀವು ವ್ಯವಹಾರಗಳನ್ನು ಮಾಡಬೇಕಾಗುತ್ತದೆ.

ನಿಮ್ಮ ಮನೆಯ ಮುಂದೆ ಈ 1 ಗಿಡ ಇದ್ದರೂ ಆರ್ಥಿಕ ನಷ್ಟ ತಪ್ಪಿದ್ದಲ್ಲ

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಸಂಸಾರದ ಜವಾಬ್ದಾರಿಗಳು ಇಂದು ಹೆಚ್ಚಾಗುತ್ತವೆ. ಮಕ್ಕಳ ಬಗ್ಗೆಯೂ ನೀವು ಹೆಚ್ಚು ಗಮನ ನೀಡಬೇಕಾಗುತ್ತದೆ. ನಿಮ್ಮ ಬುದ್ದಿವಂತಿಕೆಯಿಂದ ಜಯವನ್ನು ಕಾಣುತ್ತೀರಿ.

ತುಲಾ ರಾಶಿ: ತುಲಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಕೋರ್ಟ್, ಕಚೇರಿ ವ್ಯವಹಾರದಲ್ಲಿ ಇರುವವರಿಗೆ ಕಷ್ಟದ ದಿನವಾಗಲಿದೆ. ಹಾಗಾಗಿ ಬಹಳ ಜಾಗೃತರಾಗಿ ವ್ಯವಹಾರ ಮಾಡ ಬೇಕಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಇಂದು ಅತೀ ಉತ್ತಮ ದಿನವಾಗಲಿದೆ. ಸೋಶಿಯಲ್ ಮೀಡಿಯಾ, ಮಾರ್ಕೆಟಿಂಗ್ ವ್ಯವಹಾರದಲ್ಲಿ ಇರುವವರಿಗೆ ಒಳಿತಾಗಲಿದೆ. ಆತ್ಮವಿಶ್ವಾಸ ಚೆನ್ನಾಗಿರಲಿದೆ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಸಂಸಾರದ ತಾಪತ್ರಯಗಳು ಹೆಚ್ಚರಲಿದ್ದು, ನಿಮ್ಮನ್ನು ನೀವೇ ಅದರಲ್ಲಿ ತೊಡಗಿಸಿಕೊಳ್ಳುತ್ತೀರಿ. ಒಳ್ಳೆಯ ಮಾತುಗಳನ್ನು ಆಡುವ ಮೂಲಕ ಎಲ್ಲರ ಜತೆ ವಿನಯದಿಂದ ಇರಬೇಕಾಗುತ್ತದೆ.

ಮಕರ ರಾಶಿ: ಈ ರಾಶಿಯವರಿಗೆ ಅತೀ ಉತ್ತಮ ದಿನವಾಗಲಿದೆ. ಹಿಂದಿನ ಮೂರು ತಿಂಗಳಿನಲ್ಲಿ‌ ಇದ್ದ ಕ್ಷೇಷ ಕೂಡ ಇಂದು ಪರಿಹಾರವಾಗಲಿದೆ. ಮುಂದಿನ ಜೀವನಕ್ಕೆ ಉತ್ತಮ ಮಾರ್ಗದರ್ಶನ ಕೂಡ ಪ್ರಾಪ್ತಿಯಾಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಆರೋಗ್ಯ ಸಮಸ್ಯೆ ಹೆಚ್ಚಾಗಲಿದ್ದು ವೆಚ್ಚಗಳು ಜಾಸ್ತಿ ಆಗಬಹುದು. ನಿಮ್ಮ ಅತಿ ಹತ್ತಿರದ ಜನರಿಂದ ಯಾವುದೇ ರೀತಿಯ ಸಹಕಾರ ನಿಮಗೆ ಇರುವುದಿಲ್ಲ.

ಮೀನ ರಾಶಿ: ಮೀನ ರಾಶಿಯವರಿಗೆ ಅತೀ ಉತ್ತಮ ದಿನವಾಗಿದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ಧನಾಗಮನದ ಸೂಚನೆಗಳು ಇದ್ದು ಯಶಸ್ಸು ಕಾಣುತ್ತೀರಿ.